ಯೇನಮ್ಮಿ ಯೇನಮ್ಮಿ - The Indic Lyrics Database

ಯೇನಮ್ಮಿ ಯೇನಮ್ಮಿ

गीतकार - Chethan Kumar | गायक - Vijay Prakash, Palak Muchhal | संगीत - Arjun Janya | फ़िल्म - Ayogya | वर्ष - 2018

Song link

View in Roman

ಯೇನಮ್ಮಿ ಯೇನಮ್ಮಿ ಯಾರಮ್ಮಿ ನೀನಮ್ಮಿ
ಆಗೋಯ್ತು ನನ್ನ ಬಾಳು ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ
ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ |2|

ಹೂಂ ಕಣ್ಲಾ ಹೂಂ ಕಣ್ಲಾ ನಂಗೂ ಹಂಗೆ ಆಯ್ತು ಕಣ್ಲಾ
ಪ್ರೀತಿನೆ ಹಿಂಗೆ ಕಣ್ಲಾ ಸುಮ್ನೆ ಒಂದು ಮುತ್ತು ಕೊಡ್ಲಾ

ಬೆಳದಿಂಗಳು ನೀನೇನಮ್ಮಿ..
ಲಾಲಿನ ಹಾಡ್ಲೆನಮ್ಮಿ
ಲಕ್ಷ್ಮಿ ಹ್ಯಾಂಗ್ ಕಾಂತಿಯಮ್ಮಿ..
ದೃಷ್ಟಿನಾ ತೆಗಿಲೆನಮ್ಮಿ

ಚೆನ್ನಪಟ್ಟಣದ ಗೊಂಬೆಗೆ ಜೀವವು ಬರಲು
ನಿನ್ ಹಂಗೆ ಕಾಣ್ತದೆ ನೋಡಮ್ಮಿ
ನೀ ಮುದ್ದು ಕಮ್ಮಿ

ಚೆಲುವಂತ ಚೆನ್ನಿಗ ಭೂಪತಿ ರಾಯ
ನೀನೆನೆ ಸೊಬಗು ಹೂ ಕಣ್ಲಾ
ನೀ ರಾಜ ಕಣ್ಲಾ

ನಮ್ ಪ್ರೀತಿ ಬೆಲ್ಲ ಕಮ್ಮಿ..
ನಾವಿಬ್ರು ಯಾರಿಗ್ ಕಮ್ಮಿ
ನೀ ನಕ್ರೆ ಚಂದ ಕಣ್ಲಾ..
ಈ ಜೀವ ನಿಂದೆ ಕಣ್ಲಾ


ಬೀರಪ್ಪನ ಗುಡಿ ಮುಂದೆ ಹರಕೆಯ ಕಟ್ಟಿ
ನಿನ್ನನೆ ಬೇಡಿದೆ ದಿಟ್ಟ ಕಣ್ಲಾ
ನನ್ನಾನೆ ಕಣ್ಲಾ..

ಕಲ್ಲಿನ ಬಸವನು ಕಣ್ಣ ಹೊಡಿತಾನೆ
ನೀನಂದ್ರೆ ಜಾತ್ರೆ ಕೇಳಮ್ಮಿ
ವೈಯ್ಯರಮ್ಮಿ..

ಕಾಲುಂಗ್ರ ಹಾಕಲೇನಮ್ಮಿ..
ಹಣೆ ಬೊಟ್ಟು ಇಡ್ಲೇನಮ್ಮಿ

ಯೇನಂದ್ರು ಜಾಸ್ತಿ ಕಣ್ಲಾ
ನಿನ್ ಪ್ರೀತಿ ಆಸ್ತಿ ಕಣ್ಲಾ..