ಹಾಡಿರೋ ಹಾಡಿರೋ - The Indic Lyrics Database

ಹಾಡಿರೋ ಹಾಡಿರೋ

गीतकार - Hamsalekha | गायक - S. P. Balasubrahmanya & Chithra | संगीत - Hamsalekha | फ़िल्म - Putnanja | वर्ष - 1995

Song link

View in Roman

ಹಾಡಿರೋ ಹಾಡಿರೋ
ಎಲ್ಲಾ ಸೇರಿ ಹಾಡಿರೋ

ಹಾಡುತ್ತಾ ಕುಣಿಯುತ್ತಾ
ಹುಟ್ಟುಹಬ್ಬ ಮಾಡಿರೋ

ರಾಜನೂರಿನಲ್ಲಿ ರಾಣಿ ನಾನು ಇಲ್ಲಿ
ನನ್ನ ಕಣ್ಣ ಸನ್ನೆ ವೇದ ವಾಕ್ಯವಿಲ್ಲಿ
ಸ್ನೇಹನ ಹಂಚಿಕೊಂಡು ನಲಿಯಿರೊ

ಹಾಡಿರೋ ಹಾಡಿರೋ
ಎಲ್ಲಾ ಸೇರಿ ಹಾಡಿರೋ

ಹಾಡುತ್ತಾ ಕುಣಿಯುತ್ತಾ
ಹುಟ್ಟುಹಬ್ಬ ಮಾಡಿರೋ

ರಾಜನೂರಿನಲ್ಲಿ ರಾಣಿ ನಾನು ಇಲ್ಲಿ
ನನ್ನ ಕಣ್ಣ ಸನ್ನೆ ವೇದ ವಾಕ್ಯವಿಲ್ಲಿ
ಸ್ನೇಹನ ಹಂಚಿಕೊಂಡು ನಲಿಯಿರೊ

ಹಾಡಿರೋ ಹಾಡಿರೋ
ಎಲ್ಲಾ ಸೇರಿ ಹಾಡಿರೋ

ಸಂಸಾರ ಸಂಸಾರ
ಮೂರು ಹೊತ್ತು ಸಂಸಾರ

ಬೇಯಿಸೋದು ತಿನ್ನೋದು
ಬಿಟ್ಟರೆ ಇಲ್ಲ ವ್ಯಾಪಾರ

ಮದುವೆ ಆದಮೇಲೆ ಬಾಳು ದಂಡನೇ
ಮಡದಿ ಆದಮೇಲೆ ಎಲ್ಲ ಗಂಡನೇ
ಅಟ್ಟಣದ ಹುಚ್ಚು ಹೊಳ್ಳಿ ಬಿಳಿಸಲ್ಲ

ಮುಂದೆ ನೋಡೋ ಪುಟ್ನಂಜ
ಯಡವಿ ಗಿಡವಿ ಬಿದ್ದೀಯ

ಯಾಕೆ ಅಜ್ಜಿ ಕಣ್ ಮಾಂಜಾ?
ನಂಗೆ ಬುದ್ಧಿ ಹೇಳ್ತಿಯ

ಹೆಣ್ತಿ ಈಗ ಯಂಗವ್ಳೆ
ಏನ್ ಏನ್ ಮಾಡ್ತವ್ಳೆ

ನಂದೇ ದಾರಿ ಕಾಯ್ತವಳೇ
ಹಬ್ಬದ ಅಡುಗೆ ಮಾಡ್ತವಳೇ

ಹಾಡಿರೋ ಹಾಡಿರೋ
ಎಲ್ಲಾ ಸೇರಿ ಹಾಡಿರೋ

ಹಾಡುತ್ತಾ ಕುಣಿಯುತ್ತಾ
ಹುಟ್ಟುಹಬ್ಬ ಮಾಡಿರೋ

ರಾಜನೂರಿನಲ್ಲಿ ರಾಣಿ ನಾನು ಇಲ್ಲಿ
ನನ್ನ ಕಣ್ಣ ಸನ್ನೆ ವೇದ ವಾಕ್ಯವಿಲ್ಲಿ
ಸ್ನೇಹನ ಹಂಚಿಕೊಂಡು ನಲಿಯಿರೊ

ಹಾಡಿರೋ ಹಾಡಿರೋ
ಎಲ್ಲಾ ಸೇರಿ ಹಾಡಿರೋ

ಲಲ್ಲಾಲ ಲಲ್ಲಲ್ಲ ಲಲ್ಲಾಲ ಲಲ್ಲಲ್ಲ

ಕುಣಿಯೋದು ಕುಡಿಯೋದು
ಹಿರಿಯರಿಗೆ ಹಿಡಿಸಲ್ಲ

ಹಿಡಿಸೋದು ಬಿಡೋದು
ನಮಗೆ ಈಗ ಬೇಕಿಲ್ಲ

ಅಂಕೆ ಶಂಕೆ ಏಕೆ ತೆಲಾಡೋಣ..
ಬೇಲಿ ಮುಳ್ಳು ದಾಟಿ ಹಾರಾಡೋಣ..
ಹಳ್ಳಿನಾ ಪಟ್ಟಣ ಮಾಡಿ ಹಾಡೋಣ..

ಮುಂದೆ ನೋಡೋ ಬಸವಣ್ಣ
ದಾರಿ ಗೀರಿ ತಪ್ಪಿಯಾ

ಯಾಕೋ ಬುರುಡೆ ಬಸವಣ್ಣ
ಅಡ್ಡಗಾಲು ಹಾಕ್ತಿಯ

ಹೆಣ್ತಿ ಈಗ ಹೆಂಗವಳೇ
ಏನ್ ಏನ್ ಮಾಡ್ತವಳೇ

 

ನಂಗೋಸ್ಕರನೇ ಹುಟ್ಟವಳೇ
ಹುಟ್ಟಿದ ಹಬ್ಬ ಮಾಡ್ತವಳೇ

ಹಾಡಿರೋ ಹಾಡಿರೋ
ಎಲ್ಲಾ ಸೇರಿ ಹಾಡಿರೋ

ಹಾಡುತ್ತಾ ಕುಣಿಯುತ್ತಾ
ಹುಟ್ಟುಹಬ್ಬ ಮಾಡಿರೋ

ರಾಜನೂರಿನಲ್ಲಿ ರಾಣಿ ನಾನು ಇಲ್ಲಿ
ನನ್ನ ಕಣ್ಣ ಸನ್ನೆ ವೇದ ವಾಕ್ಯವಿಲ್ಲಿ
ಸ್ನೇಹನ ಹಂಚಿಕೊಂಡು ನಲಿಯಿರೊ

ಹಾಡಿರೋ ಹಾಡಿರೋ
ಎಲ್ಲಾ ಸೇರಿ ಹಾಡಿರೋ