ಶರಣೆಂಬೆ ಶಿವನಿಗೆ - The Indic Lyrics Database

ಶರಣೆಂಬೆ ಶಿವನಿಗೆ

गीतकार - Janapada | गायक - Various | संगीत - Janapada | फ़िल्म - Folk / Janapada | वर्ष - 2012

Song link

View in Roman

ಶರಣೆಂಬೆ ಶಿವನಿಗೆ
ಶರಣೆಂಬೆ ಗುರುವೀಗೇ
ಶರಣೆಂಬೆ ಶಿವನ ಮಡದಿಗೆ
ಗೌರಮ್ಮಗೆ ಶರಣೆಂಬೆ ಕಲ್ಲು ಹಿಡಿದೆನು

ಕಾಲ್ ಹಿಡಿದು ನೆನೆದೆವು ಕಲ್ಯಾಣದಯ್ಯನ
ಬಿಲ್ಲು ಬಾಣದ ಬಿದಿರೆ
ರಂಗಯ್ಯನ ಸೊಲ್ಲು ಸೊಲ್ಲಿಗೆ ನೆನೆದೆವು

ಈಗಾನೆ ಕಾಲ್ ಹೂಡಿ ಹೀಗ್ಯಾರ ನೆನೆದೆವು
ಈ ಊರ ಗ್ರಾಮದೊಡೆಯ ಮಲ್ಲಯ್ಯ
ಈಗ್ ಕಾಲ್ ಹೂಡಿ ನೆನೆದೆವು

ದೊಡ್ಡಾನೇಕಲ್ ಹೂಡಿ ಹಿರಿಯರ ನೆನೆದೆವು
ದೊಡ್ಡ ಗ್ರಾಮದ ಗರತಿಯ ಚಿಕ್ಕಮ್ಮನವರು
ಹತ್ತಿಕಲ್ ಹೂಡಿ ನೆನೆದೆವು

ಮಧ್ಯನ ನೆನೆದೆವು ಮದನ ಸುವ್ವಾರಿಯ
ಮದಗದಿಂದಾಚೆ ಮನೆಯೊಳ್ ಗೌರಮ್ಮಗೆ
ಮೊದಲ ಸೊಲ್ಲಿಗೆ ನೆನೆದೆವು

ಅಕ್ಕಿ ಒರಳಿಗೆ ಹುಯ್ದ ಅಪ್ಪನ ನೆನೆದೆವು
ಅಕ್ಕಮಾದೇವಿ ಗಿರಿಜೆಯ ಕೆಂಚಮ್ಮನ
ಮಕ್ಕಳೈವರ ನೆನೆದೆವು

ಕಲ್ಲಮ್ಮ ತಾಯಿ ಮಲ್ಲಮ್ಮ ರಾಗಿಯಾ
ಜಲ್ದಿ ಜಲನೇ ಉದುರಮ್ಮ ನಾ ನಿನಗೆ
ದೂಪದಾರತಿಯ ಬೆಳೆಗೆನು

ಆರತಿ ಬೆಳಗಿ ಬೇರನೆಲ್ಲನೆಂದು
ಧೂಪದ ಬೀಸಿ ಭಂಜದೊಂದು
ರಾಸಾತಿ ನಾಮವ ಪಾಡಿ ಸ್ವರನೊಂದು

ಆರತಿ ಬೆಳಗೆ ಪಾದವ ನೆನೆವೆನು
ಒಲಿಯವ್ವ ತಾಯಿ ಸಿರಿದೇವಿ
ಲಕುಮಿಯ ಚಿನ್ನ ಕಲಶವ ಇಡಿಸೇನು

ಬೆಳ್ಳಿ ಬೆಟ್ಟದ ಮೇಲೆ ಕಂಡೆನು ಸಿರಿಜವನ
ಲೋಕದ ಮಾತೆ ಗಿರಿಜಾತೆ ಪಾರ್ವತಿ
ನಿನ್ನ ಧ್ಯಾನದಲಿ ಕಂಡೆ ಕೋಟಿ ಜಂಗಮರ

ಕೋಟೆ ಕೋಟೆಯ ಕಂಡೆ
ಕೊರಲ ಲಿಂಗವ ಕಂಡೆ
ದಾಟುತ್ತ ಕಂಡೆ ಗಂಗಮ್ಮನ
ಜಾತ್ರೆಲಿ ಕಂಡೆ ಪರಿಸೆಯಾ

ಕಲ್ಲೆ ಬೀಸೊ ಕಲ್ಲೆ ಸಕ್ಕರೆ ಓರೆಗಳೆ
ಅಪ್ಪನ ಮನೆಯೇ ಸಿರಿಗಳೆ ಪಚ್ಚ ಕಳ್ಳೆ
ಬಿಟ್ಟರದ ಕಲ್ಲೆ ನಾಣಿಯಾ

ರಾಗಿ ಬೀಸೊ ಕಲ್ಲೆ
ರತ್ನ ಮುತ್ತಿನ ಕಲ್ಲೇ ಪಚ್ಚ ಕಲ್ಲೇ
ತೊಬಾನದ ಕಲ್ಲೆ ಕೊಡು ಧನಿಯಾ

ರಾಗಿ ಬೀಸೋ ಕಲ್ಲೆ
ರತ್ನ ಮುತ್ತಿನ ಕಲ್ಲೆ
ಸುವ್ವಾರಿ ಕಳ್ಳೆ ಸುಳಿಗಲ್ಲೆ
ನಡು ಮನೆ ಭಾಗ್ಯದ ಕಳ್ಳೆ ಕೊಡು ದನಿಯ

ಅಕ್ಕಿ ಬೀಸೊ ಕಲ್ಲೆ
ಸಕ್ಕರೆ ಪುಡಿಗಳೆ
ಅಪ್ಪಾಜಿ ಮನೆಯ ಪಡಕಲ್ಲೆ ಕೈಲಿ ಹಿಡಿವ
ಗೂಟದ ಕಲ್ಲೆ ಕೊಡು ಧನಿಯಾ

ಅಕ್ಕಿ ಬೀಸೊ ಕಲ್ಲೆ
ರತ್ನ ಮುತ್ತಿನ ಕಲ್ಲೆ
ಪಾತಾಳು ಕಾಣದ ಪತಿ ಕಲ್ಲೆ
ಪಟ್ಟೆ ಕಲ್ಲೆ ನಾನಾ ಬೈಯ್ಯೋರ ಎದೆಗಳೆ

ರಾಗಿ ಮುಗಿದಾವು ಕಾಜಾನ ಹೆಕ್ಕಾವು 
ನಾ ಹಿಡಿದಾ ಕೆಲಸ ವದಗ್ಯಾವ
ರಾಗಿ ಕಲ್ಲೆ ನ್ಯಾ ತೂಗಿ ಬಿಡುವ ಬಿಲ್ದಾಒಲಾ 

ತೂಗಿ ಬಿಟ್ಟನೆಂದು ಸೀತ್ಯಾಕೆ ಸರಸ್ವತಿಯೇ
ಕುಕ್ಕೇರಿ ರಾಗಿ ಚಳಿಯಾಗಲಿ ರಾಗಿ ತಕ್ಕೊಂಡು
ಮತ್ತೇ ರಾತ್ರಿ ಬರುತೀನಿ

ಕಲ್ಲು ಬಿಟ್ಟೆನೆಂದು ಎಲ್ಲ ದೇವರ ಕೇಳಿ
ಕಲ್ಲು ಕಾವೇರಿ ಕಪಿನಿಯು ನಂಜಯ್ಯ
ಕಟ್ಬಿಟ್ಟು ಕೈಯ್ಯ ಮುಗಿದೇನು

ಕಲ್ಲು ಕಟ್ಟಮ್ಮಗೆ ಎಲ್ಲ ಭಾಗ್ಯವು ಬರಲಿ
ಪಲ್ಲಕ್ಕಿ ಮೇಲೆ ಮಗ ಬರಲಿ ಆ ಮನೆಗೆ
ಮೂಗೆ ಹೂ ಮುಡಿಯೋ ಸೊಸೆ ಬರಲಿ