ನಿಮ್ ಕಡೆ ಸಂಬರಂದ್ರೆ - The Indic Lyrics Database

ನಿಮ್ ಕಡೆ ಸಂಬರಂದ್ರೆ

गीतकार - Hamsalekha | गायक - S. P. Balasubrahmanyam, Malgudi Subha | संगीत - Hamsalekha | फ़िल्म - Samrat | वर्ष - 1994

Song link

View in Roman

ನಿಮ್ ಕಡೆ ಸಂಬರಂದ್ರೆ ನಮ್ ಕಡೆ ತಿಳಿಯುದಿಲ್ಲ
ನಮ್ ಕಡೆ ದಂಬರಂದ್ರೆ ನಿಮ್ ಕಡೆ ತಿಳಿಯುದಿಲ್ಲ
ನಿಮ್ ಕಡೆ ಶಿರ ಅಂದ್ರೆ ತಲೆ ಅಂತ ತಿಳ್ಕೋತೀರಿ
ನಮ್ ಕಡೆ ಶಿರಾ ಅಂದ್ರೆ ಕೇಸರಿಬಾತ್ ಅನ್ಕೊಂತಿವಿ

ಯೆಂತಾದು ಯೆಂತಾದು ಹಾಡುದೆಂತ
ಕೂಡುದೆಂತ ಕುಣಿಯುದೆಂತ
ಹ್ಯಂಗಪ್ಪ ಹ್ಯಂಗಪ್ಪ ಹಾಡುದ್ ಹ್ಯಂಗ
ಕೂಡುದ್ ಹ್ಯಂಗ ಕುಣಿಯುದ್ ಹ್ಯಂಗ

Belagaavi Aadarenu Bengaluru Aadarenu
ನಗಬೇಕು ನಾವು ಮೊದಲು ಮಾತಾಡು
ಯೇಡೆ ಭಾಷೆಯ ಅರಿವಾಗಲು

ಹುಬ್ಬಳ್ಳಿಯಾದರೇನು ಭದ್ರಾವತಿ ಆದರೇನು
ಬೆರಿ ಬೇಕು ನಾವು ಮೊದಲು ನಲಿದಾದಳು
ನಾವೆಲ್ಲರು ಸಾರಿ ಹೋಗಲು

ಬೆಂಗಳೂರಿನಲ್ಲಿ ಬೋಂಡ ಅಂದ್ರೆ ಆಳುಗದ್ದೆ ಉಂಡೆ ಅಂತೇ
ಮಂಗಳೂರಳ್ಳಿ ಬೋಂಡಾ ಅಂದ್ರೆ ಏಳನೀರ ಕಾಯಿಯಂತೇ

ಗಡಗಿನಳ್ಳಿ ಪೂರಿ ಜೊತೆ ಬಾಜಿ ಕೊಡ್ತಾರೆ
ಮೈಸೂರು ಅಲ್ಲಿ ಕುಸ್ತಿಗಾಗಿ ಭಯೀ ಕಟ್ತಾರೆ

ಮೈಸೂರಿನ ಹೊಲ ಗದ್ದೆಗೆ ಭೂತಾಯಿ ಅಂತಾರೆ
ಮಂಗಳೂರಲಿ ಒಂದೂ ಮೀನಿಗೆ ಭೂತಾಯಿ ಅಂತಾರೆ

ನಿಮ್ ಕಡೆ ಭಂಗಿ ಅಂದ್ರೆ ಹೋಗಿ ಸೊಪ್ಪು ಹಚ್ಚುವುದು ಸೇದುವುದು
ನಮ್ ಕಡೆ ಹಂಗೆ ಅಂದ್ರೆ ಚೊಕ್ಕ ಮಾಡೋ ಮನೆಬಾರ ನಾಮಾವದು

ಸಾವಿರ ಹೂವ ಯೇಡೆ ಹನಿ ಬೇಕು ಜೇನಿನ ಗೂಡಾಗಲು
ಸಾವಿರ ಭಾವ ಸಂಧಿಸಬೇಕು ಕನ್ನಡ ನಾಡಾಗಲು

ಗುಡಿಗೇರಿಯಾದರೇನು ಮಡಿಕೇರಿಯಾದರೇನು
ದುಡಿಬೇಕು ನಾವು ಮೊದಲು ಧಣಿಯಾಗಲು
ಬಂಗಾರದ ಗಣಿಯಾಗಲು

ಯಾವ ಭಾಷೆ ದೊಡ್ಡದು ಯಾವುದು ಚಿಕ್ಕದು
ಯಾವ ಭಾಷೆ ಕಲಿಯುದು ಯಾವುದ್ ಬಿಡೋದು

ಜಯ ಭಾರತಿ ಮಡಿಲಲ್ಲಿವೆ ನೂರಾರು ಭಾಷೆಗಳು
ನೂರಾರು ಗುರಿ ಇಲ್ಲಾ ನೂರಾರು ಕವಲುಗಳು
ನೋಟಿನಲ್ಲಿ ಕಾಣುವುದು ಹದಿನಾಲ್ಕು ರಾಜ್ಯಗಳ ಲಿಪಿಗಳು
ಕನ್ನಡಕ್ಕೆ ಅಲ್ಲಿ ಉಂಟು ನಾಲ್ಕನೆಯ ದೊಡ್ಡ ಸ್ಥಾನಮಾನಗಳು

ಕನ್ನಡ ನಾಡ ಜನ್ಮದ ಹಿಂದೆ ತ್ಯಾಗಗಳ ಕಥೆ ಇದೆ
ಭೂಪಟದಲ್ಲಿ ಮೆರೆಯಲು ನಮಗೆ ಸಂಸ್ಕೃತಿಯ ಜೊತೆ ಇದೆ

ಲಾಲಾಲಾ.. ಲಾಲಾ.. ಲಾಲಾ.. |2|