ಭಾಗ್ಯವಂತರು ನಾವೇ ಭಾಗ್ಯವಂತರು - The Indic Lyrics Database

ಭಾಗ್ಯವಂತರು ನಾವೇ ಭಾಗ್ಯವಂತರು

गीतकार - Chi. Udaya Shankar | गायक - P. B. Sreenivas, S. Janaki, S. P. Balasubrahmanyam | संगीत - Rajan-Nagendrav | फ़िल्म - Bhagyavantharu | वर्ष - 1977

Song link

View in Roman

ಭಾಗ್ಯವಂತರು ನಾವೇ ಭಾಗ್ಯವಂತರು
ಭಾಗ್ಯವಂತರು ನಾವೇ ಭಾಗ್ಯವಂತರು
ತಾಯಿ ಮಮತೆಯ ತಂದೆ ಪ್ರೀತಿಯ
ಪಡೆದ ನಾವುಗಳೇ ಪುಣ್ಯವಂತರು
ಇಂದು ನಾವುಗಳೇ ಪುಣ್ಯವಂತರು
ಭಾಗ್ಯವಂತರು ನಾವೇ ಭಾಗ್ಯವಂತರು

ಚಿನ್ನದ ಗೌರಿ ಕರುಣೆಯ ತೋರಿ
ಚಿನ್ನದ ಗೌರಿ ಕರುಣೆಯ ತೋರಿ
ಹರಸಾಲು ನಮ್ಮೆಲ್ಲರ ಬಂದ ಹಾಗೆ

ಕಾಣದೆ ಗೌರಿ ಆತುರ ತೋರಿ
ಕಾಣದೆ ಗೌರಿ ಆತುರ ತೋರಿ
ಹುಡುಕುತ ಮಹೇಶ್ವರ ನೊಂದ ಹಾಗೆ

ಶಿವನು ಪಾರ್ವತಿಯು ಒಂದಾಗಿ ಸೇರಿದ
ಶಿವನು ಪಾರ್ವತಿಯು ಒಂದಾಗಿ ಸೇರಿದ
ಆನಂದ ಈ ಅನುಭಾಂದ
ನಮ್ಮ ಮನೆಯಲ್ಲಿ ತುಂಬಿರಲಿ ಎಂದೆಂದಿಗು

ಭಾಗ್ಯವಂತರು ನಾವೇ ಭಾಗ್ಯವಂತರು
ಭಾಗ್ಯವಂತರು ನಾವೇ ಭಾಗ್ಯವಂತರು
ತಾಯಿ ಮಮತೆಯ ತಂದೆ ಪ್ರೀತಿಯ
ಪಡೆದ ನಾವುಗಳೇ ಪುಣ್ಯವಂತರು
ಇಂದು ನಾವುಗಳೇ ಪುಣ್ಯವಂತರು
ಭಾಗ್ಯವಂತರು ನಾವೇ ಭಾಗ್ಯವಂತರು

ಸ್ನೇಹದಿ ಬಂದೆ ಪ್ರೀತಿಯ ತಂದೆ
ಸ್ನೇಹದಿ ಬಂದೆ ಪ್ರೀತಿಯ ತಂದೆ
ಪ್ರಾಣದ ಗಂಗೆಯಲಿ ತಾವರೆಯಾದೆ

ಜೀವದ ಜೀವ ನೀ ನನಗಾದೆ
ಜೀವದ ಜೀವ ನೀ ನನಗಾದೆ
ನಲಿಯುವ ಮಕ್ಕಳನೇ ಕಾಣಿಕೆ ತಂದೆ
ಇಂಥಾ ಸುದಿನವನು ನಾನೆಂದು ಕಾಣೆನು
ಇಂಥಾ ಸುದಿನವನು ನಾನೆಂದು ಕಾಣೆನು
ಸಂತೋಷ ಈ ಸೌಭಾಗ್ಯ
ನಮ್ಮ ಬಾಳಲ್ಲಿ ತುಂಬಿರಲಿ ಎಂದೆಂದಿಗು

ಭಾಗ್ಯವಂತರು ನಾವೇ ಭಾಗ್ಯವಂತರು
ಭಾಗ್ಯವಂತರು ನಾವೇ ಭಾಗ್ಯವಂತರು
ನಗುವ ಸಂಸಾರ ಬದುಕು ಬಂಗಾರ
ನಾವೇ ಈ ಜಗದಿ ಪುಣ್ಯವಂತರು
ನಾವೇ ಈ ಜಗದಿ ಭಾಗ್ಯವಂತರು
ನಾವೇ ಈ ಜಗದಿ ಭಾಗ್ಯವಂತರು