ಅಂದಗಾತಿ ಕಣ್ಣ ತುಂಬ - The Indic Lyrics Database

ಅಂದಗಾತಿ ಕಣ್ಣ ತುಂಬ

गीतकार - S. Narayan | गायक - Hariharan | संगीत - S. A. Rajkumar | फ़िल्म - Chandra Chakori | वर्ष - 2003

Song link

View in Roman

ಸರೆಗಗಮರಿಸ ಸರೆಮಪಾನಿಸಾಗರೇ ।।

ಅಂದಗಾತಿ ಕಣ್ಣ ತುಂಬ
ಚೆಲ್ಲಿ ಚೆಲ್ಲೋ ವಯ್ಯಾರ
ಸೂರ್ಯಕಾಂತಿ ಕೆನ್ನೆಯ ತುಂಬ
ಬಣ್ಣ ಬಣ್ಣ ಚಿತ್ತಾರ

ಅಂದಗಾತಿ ಕಣ್ಣ ತುಂಬ
ಚೆಲ್ಲಿ ಚೆಲ್ಲೋ ವಯ್ಯಾರ
ಸೂರ್ಯಕಾಂತಿ ಕೆನ್ನೆ ತುಂಬ
ಬಣ್ಣ ಬಣ್ಣ ಚಿತ್ತಾರ

ನಾಡಿಗೆ ತುಂಬ ನಾಗಿಣಿ ಶೃಂಗಾರ
ನಗುವಿನ ತುಂಬ ಹುಣ್ಣಿಮೆ ಸಿಂಧೂರ
ನಿನ್ನ ತುಂಬಿಕೊಂಡ ನನ್ನ ಎದೆಯಲ್ಲಿ ಝೇಂಕಾರಾ

ಧನನಾ.. ಧನನಾ..

ಅಂದಗಾತಿ ಕಣ್ಣ ತುಂಬ
ಚೆಲ್ಲಿ ಚೆಲ್ಲೋ ಒಯ್ಯರಾ
ಸೂರ್ಯಕಾಂತಿ ಕೆನ್ನೆ ತುಂಬ
ಬಣ್ಣ ಬಣ್ಣ ಚಿತ್ತಾರ

ಧೀಂತ ಚಿಕುದಿಂ ತಾಂತಾ ಚಿಕುಧಿಂ..
ಸಮಾಗಾಗ ಸರಿಸನೇಸ.. ಸಮಾಗಾಗ ಸರಿಸನೇಸ..
ಆಹಾ.. ಆಹಾ... ಆಹಾ..

ಪೂರ್ಣಚಂದ್ರ ಎದೆಯಿಂದ
ಬೆಳ್ಳಿ ತುನುಕು ಚೆದುರಿಟ್ಟು
ಅಂದವಾದ್ ಬೊಂಬೆಯೊಂದು ಆದರಿಂದ ಮೂಡಿತ್ತು
ಅಮರ ಶಿಲ್ಪಿ ಜಕ್ಕಣ್ಣ
ಇವಳ ನೋಡಿ ಬೆರಗಾದ
ಕುಂಚರಾಜ ರವಿವರ್ಮ
ಮೈ ಮರೆತು ಶರಣಾದ

ಓಹೋ...ಓಓಓ...

ಮಿಂಚು ಮಿಂಚುವ ಸಿಂಚರವೇ
ಮಿಡಿಯುವ ಹೃದಯಕೆ ಕಂಪನವೇ
ಭಾವನೆ ಅಲೆಗಳ ಇಂಚರವೆ
ಚಂದದ ಚೆಲುವಿನ ಆಗರವೇ
ಕೋಟಿ ತಾರೆ ಒಟ್ಟಿಗೇ ಸೇರಿ
ವೇದ ಮಂತ್ರವ ಘೋಷವ ಸಾರೀ
ಜೀವ ತುಂಬಿ ತಂದರು ನಿನ್ನ ಪ್ರೀತಿಸಲು ನನ್ನಾ..

ಧೀರನನ ಧೀರನ...

ಅಂದಗತಿ ಕಣ್ಣ ತುಂಬ ಚೆಲ್ಲಿ ಚೆಲ್ಲೋ ವಯ್ಯಾರ
ಸೂರ್ಯಕಾಂತಿ ಕೆನ್ನೆ ತುಂಬ ಬಣ್ಣ ಬಣ್ಣದ ಚಿತ್ತಾರ

ಮೇಘ ದೂತ ಕಾವ್ಯದಲಿ
ಶಾಕುಂತಲೆ ಪುಟಗಳಲಿ
ಕಾಳಿದಾಸ ಮರೆತು ಹೋದ ಪದವೊಂದು ನೀನೇನಾ
ಇಂದ್ರಲೋಕ ವೈಭವದಿ
ಕೋಟಿ ಸುಖದ ಸ್ವಪ್ನದಲಿ
ಕೊರತೆಯೊಂದು ಬಂತು ಅದು ನೀನೇನಾ ನೀನೇನಾ

ಓಹೋ...ಓಓಓ...

ಪಡಗಳೆ ನಾಚುವ ಕವನವು ನೀ
ಕವಿಗಳಿಗೆತುಕದ ಕಲ್ಪನೆ ನೀ
ಕುಂಚವೇ ನಾಚುವ ಚಿತ್ರವು ನೀ
ಬಣ್ಣಗಳಿಲ್ಲದೆ ಮಿನುಗುವೆ ನೀ
ಯೇನ ಹೇಳಿ ಹೋಗಲಿ ನಿನ್ನ
ಮಾತುಗಳೇ ಮುಗಿದವು ಚಿನ್ನ
ಮೌನವಾಗಿ ನಿಂತರು ನಿನ್ನ ಅಂದವು ಕಾಡುತಿದೆ

ಅಂದಗಾತಿ ಕಣ್ಣ ತುಂಬ
ಚೆಲ್ಲಿ ಚೆಲ್ಲೋ ವಯ್ಯರಾ
ಸೂರ್ಯಕಾಂತಿ ಕೆನ್ನೆ ತುಂಬ
ಬಣ್ಣ ಬಣ್ಣ ಚಿತ್ತಾರ

ನಾಡಿಗೆ ತುಂಬ ನಾಗಿಣಿ ಶೃಂಗಾರ
ನಗುವಿನ ತುಂಬ ಹುಣ್ಣಿಮೆ ಸಿಂಧೂರ
ನಿನ್ನ ತುಂಬಿಕೊಂಡ ನನ್ನ ಯೆಡೆಯಲ್ಲಿ ಝೇಂಕಾರಾ

ಧನನಾ.. ಧನನಾ..