ಪಾರ್ವತೀ ಪರಶಿವನ - The Indic Lyrics Database

ಪಾರ್ವತೀ ಪರಶಿವನ

गीतकार - Vijaya Narasimha | गायक - S. P. Balasubramanyam, B. R. Chaya | संगीत - Vijaya Bhaskar | फ़िल्म - Amrutha Ghalige | वर्ष - 1984

Song link

View in Roman

ಪಾರ್ವತೀ ಪರಶಿವನ ಪ್ರಣಯ ಪ್ರಸಂಗ
ಶೃಂಗಾರ ಧಾರೆಯ ನಾಟ್ಯ ರಂಗ

ಪಾರ್ವತೀ ಪರಶಿವನ ಪ್ರಣಯ ಪ್ರಸಂಗ
ಶೃಂಗಾರ ಧಾರೆಯ ನಾಟ್ಯ ರಂಗ

ಕಾಮನು ಹೂಡಿದ ಹೂ ಬಾನಾ
ಪರವಶವಾಯಿತು ಶಿವನ ಮನ
ಕಾಮನು ಹೂಡಿದ ಹೂ ಬಾನಾ
ಪರವಶವಾಯಿತು ಶಿವನ ಮನ
ಮನೋಹರಿ ಮಹೇಶ್ವರಿ
ನೀನೆ ಯೆನ್ನ ಹೃದಯೇಶ್ವರಿ
ಎಂದನು ಆ ಜಟಾಧಾರಿ
ಎಂದನು ಆ ಜಟಾಧಾರಿ

ಪಾರ್ವತೀ ಪರಶಿವನ ಪ್ರಣಯ ಪ್ರಸಂಗ
ಶೃಂಗಾರ ಧಾರೆಯ ನಾಟ್ಯ ರಂಗ

ನಾಟ್ಯವಾಡಿತು ಅಂಗಾಂಗ
ಬಯಸಿತು ಮನವು ಶಿವನ ಸಂಗ
ನಾಟ್ಯವಾಡಿತು ಅಂಗಾಂಗ
ಬಯಸಿತು ಮನವು ಶಿವನ ಸಂಗ
ಮನೋಹರ ಮಹೇಶ್ವರ
ನೀನೆ ಯೆನ್ನ ಹೃದಯೇಶ್ವರಾ
ಎಂದಳು ಆ ರಾಜೇಶ್ವರಿ
ಎಂದಳು ಆ ರಾಜೇಶ್ವರಿ

ಪಾರ್ವತೀ ಪರಶಿವನ ಪ್ರಣಯ ಪ್ರಸಂಗ
ಶೃಂಗಾರ ಧಾರೆಯ ನಾಟ್ಯ ರಂಗ

ಪಾರ್ವತಿ ಸ್ಪಂದನ ಪರಶಿವ ನರ್ತನ
ಪರಶಿವ ಸನ್ನಿಧಿ ಪಾರ್ವತಿ ಚೇತನಾ
ಪಾರ್ವತಿ ಸ್ಪಂದನ ಪರಶಿವ ನರ್ತನ
ಪರಶಿವ ಸನ್ನಿಧಿ ಪಾರ್ವತಿ ಚೇತನಾ
ರಾಗ್ನಂದದ ಯೋಗ ವೈಭವ
ಲೋಕವೆಲ್ಲ ಪರಮಾನಂದ
ಪ್ರೇಮವೇ ಸದಾನಂದ
ಪ್ರೇಮವೇ ಸದಾನಂದ

ಪಾರ್ವತೀ ಪರಶಿವನ ಪ್ರಣಯ ಪ್ರಸಂಗ
ಶೃಂಗಾರ ಧಾರೆಯ ನಾಟ್ಯ ರಂಗ

ಪಾರ್ವತೀ ಪರಶಿವನ ಪ್ರಣಯ ಪ್ರಸಂಗ
ಶೃಂಗಾರ ಧಾರೆಯ ನಾಟ್ಯ ರಂಗ