ಒಂದನೊಂದು - The Indic Lyrics Database

ಒಂದನೊಂದು

गीतकार - K. Kalyan | गायक - Shashank Sheshagiri | संगीत - Shashank Sheshagiri | फ़िल्म - Once More Kaurava | वर्ष - 2017

Song link

View in Roman

ಒಂದನೊಂದು ಒಂದನೊಂದು ಚಂದದೂರು ಇತ್ತು
ನಾಲ್ಕು ದಿಕ್ಕಲ್ ನ್ಯಾಯ ನೀತಿ ನಾಲ್ಕು ಕಾಲಲಿತ್ತು
ನೆಲದ ಸೊಬಗು ಹೊಲದ ಬೆರಗು
ಸವಿ ಕನ್ನಡದಾಗೆ ಕ್ವಾಗ್ಲೆಯ ಕೂಗು
ಅಣ್ಣ ಅಪ್ಪ ಆಗಿದ್ದ ತಂಗಿ ಅವ್ವ ಆಗಿದ್ಲು ಅಜ್ಜ ದ್ಯಾವ್ರೀ ಆಗಿದ್ದ
OOO OOO OOO OOO

ಒಂದನೊಂದು ಒಂದನೊಂದು ಚಂದದೂರು ಇತ್ತು

ಹೊಸಿಲ ದಾಟಿ ಹೆಣ್ಣು ಹೋಗ್ತಿರ್ಲಿಲ್ಲ
ಸಂಜೆ ದಾಟಿ ಗಂಡು ಬರ್ತಿರ್ಲಿಲ್ಲ
ಬಡವ ಧನಿಕ ಭೇದ ತಿಳಿಯಲಿಲ್ಲ
ದೇವ್ರೂ ದಿಂಡ್ರು ಇನ್ನು ಸತ್ತಿಲ್ಲ
ಹೆಣ್ಣು ಮಾಡುತಿದ್ದಳು ದಿನ ದಾನ ಧ್ಯಾನವ
ಗಂಡು ಕಾಯುತಿದ್ದನು ಅವಳ ಮಾನ ಪ್ರಾಣವ
ಎಂದು ಊರಿಗೆ ಊರೇ ಮಾತು ತಪ್ಪುತ್ತಿಲ್ಲ
ತಪ್ಪು ಒಪ್ಪ್ತಿರ್ಲಿಲ್ಲ ಯಾರ್ಗು ಮುಪ್ಪು ಬರ್ಲಿಲ್ಲಾ

ಒಂದಾನೊಂದು ಒಂದಾನೊಂದು ಚಂದದೂರು ಇತ್ತು

ಗುಣವೇ ಜನರ ಗೊತ್ತು ಗುರಿಯಾಗಿತ್ತು
ಏಳು ಬೀಳು ಎಲ್ಲ ಸರಿಯಾಗಿತ್ತು
ಮಲೆಯು ಬೆಲೆಯು ಪ್ರಾಯ ಪಡ್ಕೊಂಡಿತ್ತು
ಮನಸು ಮನಸು ಪ್ರೀತಿ ಮಾಡ್ಕೊಂಡಿತ್ತು
ಅಲ್ಲಿ ವ್ಯಕ್ತಿ ಎಂದರೇ ಕೈ ಹಿಡಿಯುತ್ತಿದ್ದರು
ವ್ಯಕ್ತಿತ್ವ ಎಂದರೇ ಕೈ ಮುಗಿಯುತಿದ್ದರು
ಮೌಲ್ಯ ಎಂದರೆ ಅದುವೆ
ಅಲ್ಲಿತ್ತು ಗೌರವ ಗಾಥಾ ಕಾಲ ವೈಭವ
ಅಲ್ಲಿದ್ದ ಕೌರವಾ...