ಮಾನವನಾಗುವೆಯಾ ಇಲ್ಲ ದಾನವನಾಗುವೆಯಾ - The Indic Lyrics Database

ಮಾನವನಾಗುವೆಯಾ ಇಲ್ಲ ದಾನವನಾಗುವೆಯಾ

गीतकार - Chi. Udaya Shankar | गायक - Rajkumar | संगीत - M. Ranga Rao | फ़िल्म - Bahaddur Gandu | वर्ष - 1976

Song link

View in Roman

ಮಾನವನಾಗುವೆಯಾ ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಮಾನವನಾಗುವೆಯಾ ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳು ನೀ ಹೇಳು
ಹೇಳು ನೀ ಹೇಳು

ಎಲ್ಲ ಗುಂಗಲು ನಿನ್ನಲೆ ಅಡಗಿ ಕಾಳಗ ಮಾಡುತಿವೆ
ಎಲ್ಲ ಗುಂಗಲು ನಿನ್ನಲೆ ಅಡಗಿ ಕಾಳಗ ಮಾಡುತಿವೆ
ಮನ ತುಂಬಿರುವ ಶಾಂತಿಯ ನುಂಗಿ ಕುಣಿಯಲು ನೋಡುತಿವೆ
ರೋಷವ ಬಿಡುವೆಯ ದ್ವೇಷವ ಮರೆವೆಯಾ
ರೋಷವ ಬಿಡುವೆಯ ದ್ವೇಷವ ಮರೆವೆಯಾ
ರಕ್ಕಸನ ವಿಷ ಗಾಳಿಯ ನುಂಗದೆ ಬದುಕಿ ಎಲ್ಲರೂ ಉಳಿಸುವೆಯಾ
ಬದುಕಿ ಎಲ್ಲರ ಉಳಿಸುವೆಯಾ

ಮಾನವನಾಗುವೆಯಾ ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳು ನೀ ಹೇಳು
ಹೇಳು ನೀ ಹೇಳು

ಧನಕನಕಗಳ ಕೇಳುವುದಿಲ್ಲ ಸ್ನೇಹದ ಹವ್ಯಸ
ಧನಕನಕಗಳ ಕೇಳುವುದಿಲ್ಲ ಸ್ನೇಹದ ಹವ್ಯಸ
ನಿನ್ನಾಭಿಮಾನವ ಕೆಣಕುವುದಿಲ್ಲ ಪ್ರೇಮದ ಸಂತೋಷ
ಅಂದದ ತುತಿಯಲಿ ಹುಸಿನಗೆ ತೇಲಲಿ
ಅಂದದ ತುತಿಯಲಿ ಹುಸಿನಗೆ ತೇಲಲಿ
ಅಕ್ಕರೆ ನುಡಿಯ ಸಕ್ಕರೆ ರುಚಿಯ ನೀಡಿ ಎಲ್ಲರೂ ಗೆಲ್ಲುವೆಯಾ
ನೀನು ಎಲ್ಲರ ಗೆಲ್ಲುವೆಯಾ

ಮಾನವನಾಗುವೆಯಾ ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳು ನೀ ಹೇಳು
ಹೇಳು ನೀ ಹೇಳು
ಹಾಂ ಹಾಂ