ಈ ಬಿಂಕ ಬಿಡು ಬಿಡು - The Indic Lyrics Database

ಈ ಬಿಂಕ ಬಿಡು ಬಿಡು

गीतकार - Chi. Udaya Shankar | गायक - S. P. Balasubramanyam, S. Janaki | संगीत - Rajan–Nagendra | फ़िल्म - Chandanada Gombe | वर्ष - 1979

Song link

View in Roman

ಈ ಬಿಂಕ ಬಿಡು ಬಿಡು ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು ನಾನಲ್ಲಿ ನಿಲ್ಲುವೆನು
ನನ್ನ ತುಮ ನೀನೆ ತುಂಬಿ ಕೊಂಡ ಮೇಲೆ
ಇನ್ನು ನನ್ನದೇನು ಮನಸು ಕೊಡುವುದೆನು

ಈ ಬಿಂಕ ಬಿಡು ಬಿಡು ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು ನಾನಲ್ಲಿ ನಿಲ್ಲುವೆನು

ಒಲವನು ತೋರಿದೆ ಕಣ್ಣಲ್ಲೆ ಬಾ ಎಂದು ಕರೆದೆ
ಆ ಮಾತು ನಂಬಿದೆ ನಿನ್ನನ್ನು ಸೇರಿದೆ
ಬೇರೇನು ಕಾಣೆ ನಾನು ಪ್ರೀತಿ ಅಲ್ಲದೆ

ಆಹಾ ಆಹಾ ಅ ಆ

ಕಾಣದ ಅನುಭವ ನಿನ್ನಿಂದ ನಾ ಹೊಂದಿದೆ ಇಂದು
ಸಂತೋಷವಾಗಿದೆ ಸಂಕೋಚ ಓಡಿದೆ
ನಿನ್ನಾಸೆ ಹೇಳೋ ಕಾಲ ಕೂಡಿ ಬಂದಿದೆ
ನಿನ್ನಾಸೆ ಹೇಳೋ ಕಾಲ ಕೂಡಿ ಬಂದಿದೆ

ಈ ಬಿಂಕ ಬಿಡು ಬಿಡು ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು ನಾನಲ್ಲಿ ನಿಲ್ಲುವೆನು

ನಾಚಿಕೆ ಎನ್ನುತ ನಿನ್ನಾಸೆ ಎಲ್ಲವ ನುಡಿದೆ
ನನ್ನೆದೆಯ ವೀಣೆ ಹಿತವಾಗಿ ಮೀಟಿದೆ
ಹೊಸ ರಾಗ ತಾಳ ಪಲ್ಲವಿ ಇಂದು ನುಡಿಸಿದೆ

ಅ ಆ ಆಹಾ ಆಹಾ

ಎನನು ಅರಿಯದ ಹೆಣ್ಣಲ್ಲಿ ನಿನ್ನಾಸೆ ತಂದೆ
ನನ್ನನ್ನುಸಿರ ರಾಗಕೆ ನನ್ನೆದೆಯ ತಾಳಕೆ
ಹೊಸಬಾಳ ಗೀತೆ ಇಂದು ನೀನು ಹಾಡಿದೆ
ಹೊಸಬಾಳ ಗೀತೆ ಇಂದು ನೀನು ಹಾಡಿದೆ

ಈ ಬಿಂಕ ಬಿಡು ಬಿಡು ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು ನಾನಲ್ಲಿ ನಿಲ್ಲುವೆನು
ನನ್ನ ತುಮ ನೀನೆ ತುಂಬಿ ಕೊಂಡ ಮೇಲೆ
ಇನ್ನು ನನ್ನದೇನು ಮನಸು ಕೊಡುವುದೆನು

ಲಾ ಲಾ ಲಾಲಲಾಲಾ ಲಲಲಾಲಾ