ಹೀಗೇತಕೆ - The Indic Lyrics Database

ಹೀಗೇತಕೆ

गीतकार - Jayant Kaikini | गायक - Arman Malik | संगीत - V. Harikrishna | फ़िल्म - Saheba | वर्ष - 2017

Song link

View in Roman

ಹೀಗೇತಕೆ ನೀ ಸೆಳೆಯುವೆ ವಿಪರೀತ

ಹೀಗಾದರೆ ಈ ಹೃದಯವು ಉಳಿದೀತ

ಪರಿಚಯ ಮೆಲ್ಲಗೆ ಪರಿಮಳವಾಗಿ

ಸಿಹಿ ಸಿಹಿ ಭಾವದ ಸುರಿಮಳೆಯಾಗಿ

ಬಡಬಡಿಸುವೆ ನಾನು ನಿನ್ನನ್ನೇ......

ಮನಸಿದು ಹೂವಿನ ಮಂಟಪವಾಗಿ

ಗಮನವ ಕೊಡದಿರೆ ಸಂಕಟವಾಗಿ

ಸರಿಪಡಿಸುವೆ ನಾನು ನಿನ್ನನ್ನೇ......

ಪ್ರೀತಿಗಿಂತ ಇಲ್ಲ ಬೇರೆ ದೇವರೇ

ಇಲ್ಲಿ ಪ್ರೀತಿಗಿಂತ ಇಲ್ಲ ಬೇರೆ ದೇವರೇ

ಪ್ರೀತಿಗಿಂತ ಇಲ್ಲ ಬೇರೆ ದೇವರೇ

ಇಲ್ಲಿ ಪ್ರೀತಿಗಿಂತ ಇಲ್ಲ ಬೇರೆ ದೇವರೇ

ಹಣೆಯಲಿ ಬರೆಯಲೇ ಉಸಿರಿನ ರೇಖೆ

ಹೃದಯವೇ ತೆರೆದಿದೆ ಒಲವಿನ ಇಲಾಖೆ

ನಯನಗಳು ದೀಪವಾಗುತಾ

ಬೆರಳುಗಳೇ ಮಾತನಾಡುತಾ

ಬಯಕೆ ಇದೆ ರೂಪ ತಾಳುತಾ

ಬಗೆಹರಿಸು ನೀ

ಚಲಿಸುವೆ ಕನಸಿನ ಸಂಗ್ರಹದಂತೆ

ತುಟಿಯಲೇ ಉಳಿದಿಹ ಬಿನ್ನಹದಂತೆ

ಅಪಹರಿಸುವೆ ನಾನು ನಿನ್ನನ್ನೇ......

ಬೀದಿಯಲ್ಲಿ ನಿಂತುಕೊಂಡು ಪ್ರೀತಿಯಿಂದ ಹಾಡುವಾಗ ಬರಲಿ ಬರಲಿ ನಿನ್ನ ಮೆರವಣಿಗೆ

ಬೀದಿಯಲ್ಲಿ ನಿಂತುಕೊಂಡು ಪ್ರೀತಿಯಿಂದ ಹಾಡುವಾಗ ಬರಲಿ ಬರಲಿ ನಿನ್ನ ಮೆರವಣಿಗೆ

ಹೊಸ ಹೊಸ ನೆಪಗಳ ಕಲಿಯುವೆ ನಾನು

ಕರಿಸಲೇ ಚಂದ್ರನ ಬೆಳಕಿನ ಕಮಾಲು

ಇರುಳುಗಳ ಧೀರ್ಘವಾಗಿಸಿ

ವಿರಹವನು ತೀವ್ರವಾಗಿಸಿ

ಬವಣೆಯನು ಮೂಕವಾಗಿಸಿ

ಉಪಕರಿಸು ನೀ....

ನೆನಪಿನ ಕಣಜದ ಕದ ತೆರೆದಂತೆ

ನೆನೆಯುವ ಮುನ್ನವೇ ಬಳಿ ಇರುವಂತೆ ಅವಸರಿಸುವೆ ನಾನು ನಿನ್ನನ್ನೇ...... ನಿನ್ನನೇ

ಹೀಗೇತಕೆ ನೀ ಸೆಳೆಯುವೆ ವಿಪರೀತ

ಹೀಗಾದರೆ ಈ ಹೃದಯವು ಉಳಿದೀತ