ಯಾರವ್ವ ಇವಳು ಚೆಲುವೆ ಚೆಲುವೆ - The Indic Lyrics Database

ಯಾರವ್ವ ಇವಳು ಚೆಲುವೆ ಚೆಲುವೆ

गीतकार - K Kalyan | गायक - L N Shastry | संगीत - V Ravichandran | फ़िल्म - O Premave | वर्ष - 1999

Song link

View in Roman

ಯಾರವ್ವ ಇವಳು ಚೆಲುವೆ ಚೆಲುವೆ
ನನ್ನ ಕಣ್ಣೆ ಬಿತ್ತು
ಇವಳಂದಕೆ ಸಾಟಿ ಎಲ್ಲು ಇಲ್ಲ
ಕಣ್ಣೆ ಸ್ವಾತಿ ಮುತ್ತು

ಇಂತ ನಗುವಲ್ಲಿ ಎಂತ ಸುಖವುಂಟು
ಇಂತ ಸುಖದಲ್ಲಿ ಸ್ವರ್ಗವುಂಟು
ಯಾರವ್ಬ ಇವಳು ಚೆಲುವೆ ಚೆಲುವೆ
ನನ್ನ ಕಣ್ಣೆ ಬಿತ್ತು
ಇವಳಂದಕೆ ಸಾಟಿ ಎಲ್ಲು ಇಲ್ಲ
ಕಣ್ಣೆ ಸ್ವಾತಿ ಮುತ್ತು
ಕನಸು ಇರುವ ಮನೆಯಲ್ಲಿ
ಹೃದಯ ತುಂಬಿ ಹರಳುವುದು
ಹೃದಯ ತುಂಬೊ ಮನೆಯಲ್ಲಿ
ಪ್ರೀತಿ ನಿಂತು ಹಾಳುವುದು
ಈ ಪ್ರೀತಿ ನಿಲ್ಲೊ ಎಲ್ಲಾ ಕಡೆಯು
ನಗೆಯು ಹರಿಯುವುದಂತೆ
ಈ ನಗೆಯು ತುಂಬಿದ ಮನೆ ಮನೆಯಲ್ಲ
ಭಾಗ್ಯದ ಅರಮನೆಯಂತೆ...
ಎಂತ ಆನಂದ ನಮ್ಮ ಕಣ್ಮುಂದೆ
ಕೂಡಿ ಹಾಡೋಣ ಬನ್ನಿ ಮುಂದೆ
ಯಾರವ್ವ ಇವಳು ಚೆಲುವೆ ಚೆಲುವೆ
ನನ್ನ ಕಣ್ಣೆ ಬಿತ್ತು
ಇವಳಂದಕೆ ಸಾಟಿ ಎಲ್ಲು ಇಲ್ಲ
ಕಣ್ಣೆ ಸ್ವಾತಿ ಮುತ್ತು
ನಗಬೇಕಮ್ಮ ನಗಬೇಕು
ನಕ್ಕು ನಗಿಸುತಲಿರಬೇಕು
ನೆನ್ನೆ ನಾಳೆ ಚಿಂತೆಗಳ
ಮರೆತು ಹಾಯಾಗಿರಬೇಕು
ಆಕಾಶವೆ ಇಲ್ಲಿ ಚೆಪ್ಪರವಮ್ಮ
ಭೂಮಿ ಮಂದಿರವಮ್ಮ
ಈ ಭೂಮಿ ಮನೆಯಲಿ ಪ್ರೀತಿಯೊಂದೆ
ನಮ್ಮ ದೇವರಮ್ಮ
ಕೋಟಿ ದೇವರಿಗೆ
ಕೋಟಿ ಮನೆಯುಂಟು
ಪ್ರೀತಿ ದೇವರಿಗೆ
ನಾವೆ ನಂಟು
ಯಾರವ್ವ ಇವಳು ಚೆಲುವೆ ಚೆಲುವೆ
ನನ್ನ ಕಣ್ಣೆ ಬಿತ್ತು
ಇವಳಂದಕೆ ಸಾಟಿ ಎಲ್ಲು ಇಲ್ಲ
ಕಣ್ಣೆ ಸ್ವಾತಿ ಮುತ್ತು
ಇಂತ ನಗುವಲ್ಲಿ ಎಂತ ಸುಖವುಂಟು
ಇಂತ ಸುಖದಲ್ಲಿ ಸ್ವರ್ಗವುಂಟು
ಯಾರವ್ವ ಇವಳು ಚೆಲುವೆ ಚೆಲುವೆ
ನನ್ನ ಕಣ್ಣೆ ಬಿತ್ತು
ಇವಳಂದಕೆ ಸಾಟಿ ಎಲ್ಲು ಇಲ್ಲ
ಕಣ್ಣೆ ಸ್ವಾತಿ ಮುತ್ತು