ನೂರೊಂದು ನೆನಪು - The Indic Lyrics Database

ನೂರೊಂದು ನೆನಪು

गीतकार - R N Jayagopal | गायक - S P Balasubhramanya | संगीत - M Ranga Rao | फ़िल्म - Bandhana | वर्ष - 1984

Song link

View in Roman

ನೂರೊಂದು ನೆನಪು ,ಎದೆಯಾಳದಿಂದ…
ಹಾಡಾಗಿ ಬಂತು..ಆನಂದದಿಂದ.

ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ಸಿಂಧೂರ ಬಿಂದು,ನಗಲಮ್ಮ ಎಂದು
ಎಂದೇನು ಇರಲಮ್ಮ ಈ ದಿವ್ಯ ಬಂಧಾ
ನೂರೊಂದು ನೆನಪು,ಎದೆಯಾಳದಿಂದ ಹಾಡಾಗಿ ಬಂತು,ಆನಂದದಿಂದ

ಒಲವೇಂಬ ಲತೆಯು,ತಂದಂತ ಹೂವು,
ಮುಡಿಯೇರೆ ನಲಿವು,ಮುಡಿ ಜಾರೆ ನೋವು,
ಕೈ ಗೂಡಿದಾಗ,ಕಂಡಂಥ ಕನಸು,
ಅದೃಷ್ಟದಾಟ ತಂದಂಥ ಸೊಗಸು
ಪ್ರೀತಿ ನಗುತಿರಲಿ,ಬಾಳು ಬೆಳಗಿರಲಿ,
ಪ್ರೀತಿ ನಗುತಿರಲಿ,ಬಾಳು ಬೆಳಗಿರಲಿ,
ನೀವೆಂದು ಇರಬೇಕು ಸಂತೋಷದಿಂದ …

ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ

ತುಟಿ ಮೇಲೆ ಬಂದಂತ ಮಾತೊಂದೇ ಒಂದು
ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು
ಮೂರು ಗಂಟಲ್ಲಿ ಈ ಬಾಳ ನಂಟು,
ಕೇಳಿ ಪಡೆದಾಗ ಸಂತೋಷವುಂಟು,
ನಿನ್ನ ಹರುಷದಲಿ,ನನ್ನ ಉಸಿರಿರಲಿ
ನಿನ್ನ ಹರುಷದಲಿ,ನನ್ನ ಉಸಿರಿರಲಿ
ನನ್ನೆಲ್ಲಾ ಹಾರೈಕೆ ಈ ಹಾಡಿನಿಂದಾ

ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ಸಿಂಧೂರ ಬಿಂದು,ನಗಲಮ್ಮ ಎಂದು
ಎಂದೇನು ಇರಲಮ್ಮ ಈ ದಿವ್ಯ ಬಂಧಾ
ನೂರೊಂದು ನೆನಪು,ಎದೆಯಾಳದಿಂದ ಹಾಡಾಗಿ ಬಂತು,ಆನಂದದಿಂದ