ಆಸೆಗಳು ಕೆಣಕುತಲಿದೆ - The Indic Lyrics Database

ಆಸೆಗಳು ಕೆಣಕುತಲಿದೆ

गीतकार - Chi Udayashankar | गायक - SPB, S Janaki | संगीत - Shankar-Ganesh | फ़िल्म - Naane Raja | वर्ष - 1984

Song link

View in Roman

ಆಸೆಗಳು ಕೆಣಕುತಲಿದೆ
ಸ್ನೇಹವನು ಬಯಸುತಲಿದೆ
ನೀ ಬರದೇ ಪ್ರೀತಿಸದೆ
ಸೇರಿ ನನ್ನನ್ನು
ಸುಖ ತರದೇ
ನನ್ನ ಜೀವಾ ನಿಲ್ಲದುಉಉಉ

ಆಸೆಗಳು ಕೆಣಕುತಲಿದೆ
ಸ್ನೇಹವನು ಬಯಸುತಲಿದೆ
ನೀ ಬರದೇ ಪ್ರೀತಿಸದೆ
ಸೇರಿ ನನ್ನನ್ನು
ಸುಖ ತರದೇ
ನನ್ನ ಜೀವಾ ನಿಲ್ಲದುಉಉಉ

ಆ……ಆಆಆ
ಆ……ಆಆಆ
ಆ….ಆಆಆ……ಆಆಆಆಆಆಆಆ

ನನ್ನ ಈ ಕಣ್ಣಿಂದಾ
ನೋಡುತ ನಿನ್ನಂದಾ
ಅರಿಯದೆ ಸೋತೆ
ಚಪಲದಿ ನೊಂದೆ
ಚೆಲುವೆ ನೀ ಬಲ್ಲೆಯಾ

ಪ್ರೇಮದ ಮಾತಿಂದಾ
ತುಂಬುತ ಆನಂದಾ
ಸನಿಹಕೆ ಬಂದು
ಹರುಷವ ತಂದು
ಹಿತವನು ನೀಡೆಯಾ

ವಿರಹವಾ ನೀಗಲೆಂದು
ಸರಸದಿ ಸೇರು ಬಂದು
ಇಂದೇ ನಾವು ಒಂದು ಸೇರಿ
ಪ್ರೀತಿ ಎಂಬ ಜೇನ ಹೀರಿ
ಸುಖ ಹೊಂದೋಣ

ಆಸೆಗಳು ಕೆಣಕುತಲಿದೆ
ಸ್ನೇಹವನು ಬಯಸುತಲಿದೆ
ನೀ ಬರದೇ ಪ್ರೀತಿಸದೆ
ಸೇರಿ ನನ್ನನ್ನು
ಸುಖ ತರದೇ
ನನ್ನ ಜೀವ ನಿಲ್ಲದುಉಉಉಉ

ಲಾ……ಲಲಲ
ಲಾ…….ಲಲಲ
ಲಾ……ಲಲಲ……ಲ ಲ ಲ ಲ ಲ ಲ ಲಾ

ಮೆತ್ತಗೆ ತೋಳಿಂದಾ(ಆ…ಹಾಹ ಆಹಾ)
ಒತ್ತಲು ಮೈಯನ್ನು (ಆ ಆ ಆ ಆ ಆ )
ಎದೆಯಲಿ ಮಿಂಚು
ಹರಿಯುತ ನನ್ನ ತನುವು
ಹೂವಾಯಿತು

ಕಾತರ ನನ್ನಲ್ಲಿ
ಆತುರ ನಿನ್ನಲ್ಲಿ
ಪ್ರಣಯದಾ ಕಾವು
ತರುತಿರೆ ನೋವು
ಬಯಕೆ ನೂರಾಯಿತು

ಅರೆಕ್ಷಣ ತಾಳಲಾರೆ
ಗೆಳೆಯನೇ ನಿಲ್ಲಲಾರೆ
ಬೇರೆ ಮಾತು ಏಕೆ ಬೇಕು
ನಿನ್ನ ಪ್ರೇಮ ಒಂದೇ ಸಾಕು
ನಡಿ ಹೋಗೋಣಾ

ಆಸೆಗಳು ಕೆಣಕುತಲಿದೆ(Whistle)
ಸ್ನೇಹವನು ಬಯಸುತಲಿದೆ (Whistle)
ನೀ ಬರದೇ ಪ್ರೀತಿಸದೆ (Whistle)
ಸೇರಿ ನನ್ನನ್ನು (Whistle)
ಸುಖ ತರದೇ (Whistle)
ನನ್ನ ಜೀವ ನಿಲ್ಲದು

ಆಸೆಗಳು ಕೆಣಕುತಲಿದೆ (ಅಹಹಹ್ )
ಸ್ನೇಹವನು ಬಯಸುತಲಿದೆ (ಅಹಹಹ್ )
ನೀ ಬರದೇ ಪ್ರೀತಿಸದೆ (ಉಹ್ )
ಸೇರಿ ನನ್ನನ್ನು (ಅಹ್)
ಸುಖ ತರದೇ (ಅಹ್)
ನನ್ನ ಜೀವ ನಿಲ್ಲದು