ನಗುವ ಹೂವೆಲ್ಲವೂ - The Indic Lyrics Database

ನಗುವ ಹೂವೆಲ್ಲವೂ

गीतकार - R N Jayagopal | गायक - SPB | संगीत - Rajan-Nagendra | फ़िल्म - Bidugadeya Bedi | वर्ष - 1985

Song link

View in Roman

ನಗುವ ಹೂವೆಲ್ಲವೂ

ಒಲಿದ ಹಾಡಾ...ಯಿತು....
ಹೊಳೆವ ಕಣ್ಣೋ...ಟವೇ
ಎದೆಯ ಮಾತಾಯಿತು...
ಚೆಲುವೆಲ್ಲ ಕಣ್ಣಲ್ಲೇ ತುಂಬಿತು....
ಕಣ್ ತುಂಬಿ ಮನದಲ್ಲಿ ನಿಂತಿತು..
ಮನತುಂಬಿ ನಿನ್ನಲ್ಲೇ ಸೇರಿತು..
ನಿನ್ನ. ಸೇರಿ. ಸೆರೆಯಾ...ಯಿತು..

ನಗುವ ಹೂವೆಲ್ಲವೂ
ಒಲಿದ ಹಾಡಾಯಿತು
ಹೊಳೆವ ಕಣ್ಣೋಟವೇ
ಎದೆಯ ಮಾತಾಯಿತು
ಚೆಲುವೆಲ್ಲ ಕಣ್ಣಲ್ಲೇ ತುಂಬಿತು...
ಕಣ್ ತುಂಬಿ ಮನದಲ್ಲಿ ನಿಂತಿತು..
ಮನತುಂಬಿ ನಿನ್ನಲ್ಲೇ ಸೇರಿತು....
ನಿನ್ನ. ಸೇರಿ. ಸೆರೆಯಾಯಿತು.

ನಗುವ ಹೂವೆಲ್ಲವೂ

ಒಲಿದ ಹಾಡಾಯಿತು
ಹೊಳೆವ ಕಣ್ಣೋ....ಟವೇ
ಎದೆಯ ಮಾತಾಯಿತು…

ನೀನಾಡೊ ಪ್ರತಿಮಾತು

ಸವಿಯಾದ ಗೀತೆ....
ಶೃಂಗಾರ ರಸಕಾವ್ಯ ನಿನ್ನಿಂದ ಕಲಿತೆ

ಬಳುಕಾಡಿ ನಡೆದಾಗ
ಹೊಸ ತಾ...ಳವಂತೆ
ಅದ ಕಂಡು ನಾ ಸೋತು
ನನ್ನನ್ನೇ ಮರೆತೆ
ಹೊಸರಾಗ, ಹೊಸಭಾವ,

ಹೊಸ ಜೀವ ನೀನೇ..ನೀನೇ..
ನೀನೇ.. ನೀನೇ.....

ರಸಶಿಲ್ಪಿ ಕಡೆದಂಥ

ಶಿಲೆಯಲ್ಲೂ ನೀನೇ...
ಕಡಲಲ್ಲಿ ಬಂದಥ ಅಲೆಯಲ್ಲೂ ನೀನೇ..
ಎಲ್ಲೆಲ್ಲೂ ನಾ ಕಂಡೆ ಪ್ರಿಯೆ ನಿನ್ನನೇ.
ಸೃಷ್ಠಿ ಸೊಬಗೆಲ್ಲವು
ಸೊಬಗ ನಗುವೆಲ್ಲವೂ
ನಗುವ ಹೂವೆಲ್ಲವೂ
ಒಲಿದ ಹಾಡಾಯಿತು
ಹೊಳೆವ ಕಣ್ಣೋಟವೇ
ಎದೆಯ ಮಾತಾ...ಯಿತು

ಚೆಲುವೆಲ್ಲ ಕಣ್ಣಲ್ಲೇ ತುಂಬಿತು...
ಕಣ್ ತುಂಬಿ ಮನದಲ್ಲಿ ನಿಂತಿತು..
ಮನತುಂಬಿ ನಿನ್ನಲ್ಲೇ ಸೇರಿತು..
ನಿನ್ನ. ಸೇರಿ. ಸೆರೆಯಾ..ಯಿತು.
ನಗುವ ಹೂವೆಲ್ಲವೂ
ಒಲಿದ ಹಾಡಾಯಿತು
ಹೊಳೆವ ಕಣ್ಣೋಟವೇ
ಎದೆಯ ಮಾತಾ...ಯಿತು

ಸುಜಾತ ರವರ ಸಹಾಯದೊಂದಿಗೆ...

ಉಸಿರಲ್ಲಿ ಉಸಿರಾಗಿ

ನೀ ಬೆರೆತೆ ಆಗ...
ನೀರಲ್ಲಿ ಬರೆದಂಥ ಕಥೆಯಾದೆ ಈಗ

ನೆನಪೆಲ್ಲ ಮುಳ್ಳಾಗಿ
ಕೊಲುವಾಗ ನನ್ನ...
ಹೂವಂಥ ಮನಸೇಕೆ ಕಲ್ಲಾ..ಯ್ತು ಚಿನ್ನ
ನಗೆದೀಪ ಇರುವಲ್ಲಿ ಇರುಳನ್ನು ತಂದೆ...

ಸವಿ ಜೇನ ಬದಲಾಗಿ

ಕಣ್ಣೀರ ತಂದೆ...
ಅನುರಾಗ ಶೃತಿ ತಪ್ಪಿ ನಾನೀಗ ನೊಂದೆ...
ಸೊಗದಾದ..ನನ್ನಾಸೆ..ಕನಸಾಗಿದೆ..
ಕನಸು ಮುಗಿದಾಯಿತು.

ಮುಗಿದು ನೋವಾಯಿತು.
ನೋವು ನೆಲೆಯಾಯಿತು.
ನಗುವು ದೂರಾಯಿತು.
ನಗುವು ದೂರಾ..ಯಿತು.....ಊ…