ಅಬಿಮಾನಿಗಳೇ ನಮ್ಮನೆ ದೇವ್ರು - The Indic Lyrics Database

ಅಬಿಮಾನಿಗಳೇ ನಮ್ಮನೆ ದೇವ್ರು

गीतकार - Yogaraj Bhat | गायक - Puneeth Rajkumar & Shivaraj Kumar | संगीत - V Harikrishna | फ़िल्म - Doddmane Hudga | वर्ष - 2016

Song link

View in Roman

ಒಂದೂರಲಿದ್ದ ಒಬ್ಬ ರಾಜ
ಈಗ್ಲೂನು ಅವನೇ ನಮ್ಮ ರಾಜಾ
ಮುಂದೂನು ಇರ್ತಾನೆ ರಾಜಾ
ಆಜಾ ಆಜಾ ಲೆಟ್ಸ್ ಡ್ಯಾನ್ಸ್ ಆಜಾ

ಹಿಡ್ಕೊಂಡ್ ಹೇಳುವೆ ಅನ್ನದ ತುತ್ತು
ಕನ್ನಡ ತಾಯಿಗೆ ನನ್ನ ನಿಯತ್ತು
ದೊಡ್ಡೋವ್ರು ಹೇಳವ್ರೆ ನಿಮಗೆ ಗೊತ್ತು

ಅಬಿಮಾನಿಗಳೇ ನಮ್ಮನೆ ದೇವ್ರು
ನಿಮ್ಮಿಂದಾನೆ ನಮ್ಮೆದೆ ಉಸಿರು (2 ಬಾರಿ)

ನಿಮ್ಮನ್ನು ಪೂಜಿಸುವ ಬಾಗ್ಯ ನಮದು
ಯಾವಾಗ್ಲು ಕೈ ಮುಗಿವೇ ಮಹಾಸ್ವಾಮಿ

ನಂಗ್ಯಾವ ಅಡ್ರೆಸ್ಸು ಬೇಕಿಲ್ಲ
ನಾನೆಂದು ಕನ್ನಡದ ಆಸಾಮಿ

ತಂದೆಗೆ ತಕ್ಕ ಮಗನು
ಊರಿಗೂ ತಕ್ಕವನು
ಕಾಪಾಡಿ ನನ್ನ ನೀವೆ
ನಾನಿನ್ನು ಚಿಕ್ಕವನು
ನೋಡಿ ನಿಮ್ಮ ಈ ಸೇವಕನನ್ನು
ನೆಟ್ಟು ಹೇಳುವೆ ಬಾವುಟವನ್ನು
ಒಟ್ಟು ಕನ್ನಡದ ಮಾವುತ ನಾನು

ಅಬಿಮಾನಿಗಳೇ ನಮ್ಮನೆ ದೇವ್ರು
ನೀವ್ ನಮ್ಗೆ ಹೆಸರಿತ್ತಾವ್ರು (2 ಬಾರಿ)

ನೀವೆಲ್ಲಾ ಕುಡಿಯುವ ಚಿಲ್ಲರೆಯನ್ನು
ಹಣೆಲಿ ಎತ್ತಿಕೊಂಡ ಮಗ ನಾನೂ

ತೊಟ್ಟಿಲು ತೂಗಿ ನನ್ನ ಬೆಳೆಸಿದಿರಮ್ಮ
ನಿಜವಾಗ್ಲು ನಿಮ್ಮ ಮನೆ ಮಗ ನಾನು

ಎಲ್ಲೋಗಿಲ್ಲ ಜೊತೆಗೇ ಅವ್ರೇ ನಮ್ಮ ನಿಮ್ಮಾ ಅನ್ನೋವ್ರು
ಅಭಿಮಾನ ದೇವ್ರು ಅಂಥಾ ಮೊದ್ಲು ಅವ್ರೆ ಅಂದೋವ್ರು
ತೊಟ್ಟು ಪ್ರೀತಿಯೇ ನಮಗೇ ಆಸ್ತಿ
ಬಿಟ್ಟು ಬೇರೆನು ಬೇಡ ಜಾಸ್ತಿ
ಇರಲಿ ಕೊನೆತನಕ ಹಿಂಗೆ ದೋಸ್ತಿ

ಅಬಿಮಾನಿಗಳೇ ನಮ್ಮನೆ ದೇವ್ರು
ನಿಮ್ಮಿಂದನೆ ಬಾಳಿದು ಹಸಿರು