ತ್ರಾಸ್ ಅಕ್ಕತಿ - The Indic Lyrics Database

ತ್ರಾಸ್ ಅಕ್ಕತಿ

गीतकार - Yogaraj Bhat | गायक - V. Harikrishna & Indu Nagaraj | संगीत - V. Harikrishna | फ़िल्म - Doddmane Hudga | वर्ष - 2016

Song link

View in Roman

ಯಾಕೋ ಹುಡುಗ ಮೈಯಾಗ ಹೆಂಗೈತಿ  ನಾಕು ಜನುಮ ಧಿಮಾಕು ನಿಂಗೈತಿ
ನಂದು ಧಾರವಾಡ ಹೆಚ್ಚಿಗೆ ಮಾತು ಬ್ಯಾಡ
ಮೊದಲ ತಲೆ ಕೆಟ್ಟಯತಿ ಹಂಗನಬ್ಯಾಡ ಇಟೀಟ ಹುಚ್ಚು ಹಿಡಿಸಿದ ಮಗನ ಪೂರ್ತಿ ಹಿಡಿಸಕ ಆಗಲ್ಲೆನಲೆ ನಿನಗ
ಒಮ್ಮ್ಯಾರ ನಕ್ಕುಬಿಡುಪಾ ಕೆನ್ನಿಯ ಕಚ್ಚಿಬಿಡುಪಾ ಇಲ್ಲಾ ತ್ರಾಸ್ ಅಕ್ಕತಿ ಜೀವಕ ತ್ರಾಸ್ ಅಕ್ಕತಿ
ಯಾಕ್ ಅಕ್ಕತಿ ತ್ರಾಸು ಯಾಕ್ ಅಕ್ಕತಿ
ಯಾಕೋ ಹುಡುಗಿ ಮೈಯಾಗ ಹೆಂಗೈತಿ ನಾಕು ಜನುಮ ಧಿಮಾಕು ನಿಂಗೈತಿ

ಇಳಿ ಸಂಜೆಗೆ ಗಂಡಸರೋಳ್ಳೆತನ ಹೆಚ್ಚಿಗೆ ಇರಬಾರ್ದು ಕೆಟ್ಟರು ಕಡಿಮೆ ಕೆಡ್ಬೇಕು
ನಮ್ಮ ನಾಚಿಕೆಗೇಲ್ರಪ್ಪ ಬೆಲೆಐತಿ ಗಂಡಸರಾಗಹುಟ್ಟಿ ಬಾಯಿ ಮುಚ್ಚಿಕ್ಯಾಂಡ ಇರಬೇಕು
ಅರೆಹದಗೆಟ್ಟರು ಸುಮ್ ಸುಮ್ಕ ಬೇಜಾರ ಬೇಜಾರ ಮರೆತು ಮೈಮುಟ್ಟು ಹೋಗ್ಲಿತಗಾ ಹೆಂಗಾರ ಹೆಂಗಾರ
ಒಂದಾರ ಹೆಜ್ಜೆ ಮುಂದಕಇಡು ನೀ ವಯಸು ಮೀರಿ ಬಿಳಿ ದಾಡಿ ಮೂಡದಾರೊಳಗ ನಂಗಾರ ಮೈನಡುಕ ಹೆಂಗಾರ ಕೈಹಿಡುಕ
ಇಲ್ಲಾ ತ್ರಾಸ್ ಅಕ್ಕತಿ ಜೀವಕ ತ್ರಾಸ್ ಅಕ್ಕತಿ
ಯಾಕ್ ಅಕ್ಕತಿ ತ್ರಾಸು ಯಾಕ್ ಅಕ್ಕತಿ

ಹದಿನೆಂಟರ ಕ್ವಾಲಿಟಿ ಕನಸೊಂದು ಹಿಡ್ಕಂಡೀನಿತಡದು ಅಗದಿ ಹತ್ತರ ಬರಬ್ಯಾಡ
ನಿನ್ನ ಅಂದದ ಬೆಂಕಿಗೆ ಮೈಮನಸು ಸುಟ್ಕೊಂಡುವ ನಮ್ಮದು ಇನ್ನು ಹೆಚ್ಚಿಗೆ ಸುಡುಬ್ಯಾಡ
ಮಳೆ ಬಂದಾಗ ಬಿತ್ತಬೇಕು ಇಲ್ಲಿ ಕೇಳಾ ಇಲ್ಲಿ ಕೇಳಾ ತೆನೆ ಬಂದಾಗ ತಟ್ಟಬೇಕು ಇಲ್ಲಿ ಕೇಳಾ ಇಲ್ಲಿ ಕೇಳಾ
ಜೇನು ತುಟಿಯಾಗಐತಂತಾರ ಟೆಸ್ಟು ನೋಡಾಕ ಹೇಳ ಬೇಕೇನ ನಿನಗ?
ನನ್ನಲಿ ನಿನ್ನ ಕಳಕ ನಿನ್ನನ ನೀನ ಪಡಕ
ಇಲ್ಲಾ ತ್ರಾಸ್ ಅಕ್ಕತಿ ನಿಂಗು ತ್ರಾಸ್ ಅಕ್ಕತಿ
ಹಾಳಗೈತಿ ಅಲರೆಡಿ ಭಾಳ್ ಆಗೈತಿ
ಯಾಕೋ ಹುಡುಗ ಮೈಯಾಗ ಹೆಂಗೈತಿ