ವಾಲೆ ಜುಮುಕಿ - The Indic Lyrics Database

ವಾಲೆ ಜುಮುಕಿ

गीतकार - Kaviraj | गायक - Tipu, Priya Hemesh | संगीत - V Harikrishna | फ़िल्म - Jaggu Dada | वर्ष - 2016

Song link

View in Roman

ವಾಲೆ ಜುಮುಕಿ ಬಾಲಕಿ
ವಾರೆ ಮೇರಾ ನಾಯಕಿ
ಹೃದಯದಲ್ಲಿ ಹಚ್ಚಿಬಿಟ್ಟೆ
ಸಾಲು ಪಟಾಕಿ..
ಅಮ್ಮಣ್ಣಿ ನೃತ್ಯ (2 ಬಾರಿ)

ರೇಷ್ಮೆ ಪಂಚೆ ಸಾರಥಿ
ಯಾಕೆ ಹಿಂಗೆ ನೋಡುತಿ
ನೋಟದಲ್ಲಿ ಕೊಳ್ಳುತಿಯಾ
ಕಣ್ಣು ತುಪಾಕಿ..
ಅಪ್ಪಣ್ಣ ನೃತ್ಯ (2 ಬಾರಿ)

ನಾನು ಸೋಲೊದು ಪ್ರೀತಿಗೆ
ತುಂಬನೆ ಸರಳ-ಉ..
ನನ್ನ ಹೃದಯದಲ್ಲಿ ಕಟ್ಟಾಯ್ತು
ನಿಂಗೊಂದು ದೇವಸ್ಥಾನ-ಉ..
ನೀ ಸರ್ಚ್ ಮಾಡು ಫುಲ್ಲು ಗೂಗಲ್-ಯು..
ಇಂಥ ಗಂಡು ಇಲ್ಲ ಇನ್ನು ಇನ್ನೆಲ್ಲು..

ವಾಲೆ ಜುಮುಕಿ ಬಾಲಕಿ
ವಾರೆ ಮೇರಾ ನಾಯಕಿ
ಹೃದಯದಲ್ಲಿ ಹಚ್ಚಿಬಿಟ್ಟೆ
ಸಾಲು ಪಟಾಕಿ..
ಅಮ್ಮಣ್ಣಿ ನೃತ್ಯ (2 ಬಾರಿ)

ಮೂನಳ್ಳಿ ನಮ್ಮದೊಂದು
ಸಣ್ಣ ಮನೆ ಮಾಡೋನಾ..
ಸ್ಟಾರಲ್ಲಿ ನಾನು ನೀನು
ವಾಕಿಂಗ್ ಹೋಗೋಣ..

ಹೇ ಹೇ ಎಲ್ಲ ಸರಿ ಸುಮ್ಕೆ ಸುಮ್ಕೆ ಕನಸು ಯಾಕೆ
ಡ್ಯಾನ್ಸ್ ಪೊನ್ನ ಡ್ಯಾನ್ಸ್..
ಅಯ್ಯೋ ಅಯ್ಯೋ ಅಮ್ಮಿ
ನಿಂಗೆ ಸಾಮಾನ್ಯ ಜ್ಞಾನ ಕಮ್ಮಿ
ಹೇಳೋದೆಲ್ಲಾ ಮಾಡ್ತೀನಿ
ಪಾಗಲ್ ಆಸಾಮಿ..

ನೀ ಸರ್ಚ್ ಮಾಡು ಫುಲ್ಲು ಗೂಗಲ್-ಯು..
ಇಂಥಾ ಗಂಡು ಸಿಗೋದಿಲ್ಲ ಇನ್ನೆಲ್ಲು..

ಅಂಬಾರಿ ತಂದು ನಿನ್ನ ಎತ್ತಿಕೊಂಡು ಹೋಗೋದಾ?
ಕುಮಾರಿ, ನಾನೂ ನಿನ್ನ ಗಂಡ ಆಗೋದಾ?
ಆಮೇಲೇ ಕಯ್ಯ ಕೊಟ್ಟು ಹೋಗ್ತಿಯೇನೋ ಅಂತ ಡೌಟು..
ಡ್ಯಾನ್ಸ್ ಪೊನ್ನ ಡ್ಯಾನ್ಸ್..

ಕೊಟ್ರೆ ಬೊಂಬೆ ಹಾರ್ಟ್-ಯು,
ನಾನ್ ನಿಯತ್ತಲ್ಲಿ ಫಸ್ಟ್..
ಪಕ್ಕಾ ಪ್ರೀತಿ ನಮ್ದು,
ನೂರಕ್ಕೆ ನೂರು..

ನೀ ಸರ್ಚ್ ಮಾಡು ಫುಲ್ಲು ಗೂಗಲ್-ಯು..
ಇದು ಒಂದೇ ತುಂಡು-ಉ ಇಲ್ಲ ಇನ್ನೆಲ್ಲು..