ಹೋಗುಮೆ - The Indic Lyrics Database

ಹೋಗುಮೆ

गीतकार - Dr. V. Nagendra Prasad. | गायक - Naveen Sajju. | संगीत - V. Hari Krishna | फ़िल्म - Happy Birthday | वर्ष - 2016

Song link

View in Roman

ಹೋಗುಮೆ ಹೋಗುಮೆ ಎಲ್ಲರ ಒಂದಪ್ಪ ಕದ್ದು ಹೋಗುಮೇ
ಬರುಮೆ ಬರುಮೆ ಮಾರ್ಣಮಿ ಹಬ್ಬವ ಕಲ್ಕಂಡ್ ಬರುಮೇ
ನಂದಿ ಬಟ್ಲು ಕಣ್ಣೊಳೇ

ಬೆಣ್ಣೆ ಕಡಿಯೋ ಊರೊಳೇ
ಪರ್ಪಂಚ ಅಂದ್ರೆ ನೀನೇ ನಂಗೆ
ಆಣೆ ಮಾಡ್ಲಾ ಕಾವೇರಿ ಮ್ಯಾಗೆ
ಹೋಗುಮೆ ಹೋಗುಮೆ ಎಲ್ಲರ ಒಂದಪ್ಪ ಕದ್ದು ಹೋಗುಮೇ

ಬರುಮೆ ಬರುಮೇ ಮಾರ್ಣಮಿ ಹಬ್ಬವ ಕಲ್ಕಂಡ್ ಬರುಮೇ

ನೋಡ್ಕೂಡೋ ವಯ್ಸು ಅಲ್ವ ನಂದು

ಕಾಡ್ಕೂಡೋ ವಯ್ಸು ಕಾಡೆ ನಿಂದು
ಅಯ್ಯೋ ಬಡ್ಕೊಂತು ಬುಡುಬುಡುಕೆ ಅಂಗೇ ಮನ್ಸೂ..
ಕನ್ನಡಿ ಕಣ್ಣ ಹೋಡಿತ ಬಾ..
ಬಳೆಯು ಕೈಯ ಎಳಿತ ಬಾ..
ಅವ್ಕುನು ಆಸೆ ನಿನ್ನ ಮ್ಯಾಲೆ..
ನಂಗುನು ಪ್ರೀತಿ ನಿನ್ನ ಮ್ಯಾಲೆ..
ಚುಂಚುನ್ ಗಿರಿಯ ಬೈರುರ್ ನಾಣೆ..
ಹೋಗುಮೆ ಹೋಗುಮೆ ಎಲ್ಲರ ಒಂದಪ್ಪ ಕದ್ದು ಹೋಗುಮೇ
ಬರುಮೆ ಬರುಮೇ ಮಾರ್ಣಮಿ ಹಬ್ಬವ ಕಲ್ಕಂಡ್ ಬರುಮೇ

ನಿಲ್ಲುಮೆ ದೂರ ಮಾರುದೂರ

ಮಾಡುಮೆ ಪ್ರೀತಿ ಮನಸಾರೆ..
ನೀನು ಆಗಲ್ಲ ಅಂದ್ ಬಿಟ್ರೆ ಎದೆ ಭಾರ..
ಆಗುಮೇ ನಾವು ಜೋಡೆತ್ತು..
ಅದಕ್ಕೆ ನೀನು ಕೈಯತ್ತು..
ಸುಲ್ಗಿತ್ತಿ ಯಾರು ಹೇಳೇ ನಿಂಗೆ..
ಕೈಮುಟ್ಟಿ ಶರ್ಣು ಮಾಡ್ತಿನವಲ್ಗೆ..
ಮೇಲೂ ಕೋಟೆ ಚಲವನ್ ನಾಣೆ..

ಯಾವೊಳೇ ಯಾವೊಳೇ ಮಲ್ಲಿಗೆ ಹೂವಂಗೆ ಗಮ್ಮನ್ವಳೇ..
ಯಾವನೋ ಏನಾರ ಅಂಕಳಿ ಇನ್ಯಾಕೆ ನೀನು ನನೊಳೇ..