ಆಕಾಶ ಬಾಗಿದೆ - The Indic Lyrics Database

ಆಕಾಶ ಬಾಗಿದೆ

गीतकार - Chi. Udaya Shankar | गायक - S. P. Balasubrahmanyam | संगीत - Singeetham Srinivasa Rao | फ़िल्म - Samyuktha | वर्ष - 1988

Song link

View in Roman

ನಿನ್ನಂದ ಕಾಣಲೆಂದು
ಆನಂದ ಹೊಂದಲೇಂದು

ಆಕಾಶ ಬಾಗಿದೆ
ನಿನ್ನಂದ ಕಾಣಲೆಂದು ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ ಕಾಮಿನಿ ಭಾಮಿನಿ

ಆಕಾಶ ಬಾಗಿದೆ
ನಿನ್ನಂದ ಕಾಣಲೆಂದು ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ ಕಾಮಿನಿ ಭಾಮಿನಿ

ಆಕಾಶ ಬಾಗಿದೆ

ತಂಗಾಳಿ ಬೀಸಿ ಬಂದು ನಿನ್ನ ಹೂವ್ ಮೈಯ್ಯಿ ಸೋಕಿತೆ
ಅರಳಿದ ಸುಮಗಳ ಪರಿಮಳ ಚೆಲ್ಲಾಡಿತೆ
ಆ ರೆಂಬೆ ತೂಗಿ ತೂಗಿ ಹೊಸ ಉಲಾಸ ತೋರುತಾ
ಹಸುರಿನ ಎಲೆಗಳ ಚಾಮರ ಬೀಸಿತೆ
ಬಲ್ಲಿಲಿ ನಗುವ ಹೂವು ಸೌಂದರ್ಯ ಕಾಣುವ
ಚಪಲದಿ ಇನುಕುತ ನಸುನಾಚಿ ನೋಡಿದೆ

ಆಕಾಶ ಬಾಗಿದೆ

ನಿನ್ನಂದ ಕಾಣಲೆಂದು ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ ಕಾಮಿನಿ ಭಾಮಿನಿ
ಆಕಾಶ ಬಾಗಿದೆ

ಎಲ್ಲಿಂದ ತಂದ ಕಣ್ಣು
ಇವಳಲ್ಲಿಂದ ಬಂದ ಹೆಣ್ಣು
ನಡೆಯಲು ನಾಟ್ಯವು
ಮೌನವೇ ಸಂಗೀತವು

ಶೃಂಗಾರ ಕಾವ್ಯ ಒಂದು
ಹೊಸ ಹೆಣ್ಣಾಗಿ ಬಂದಿತೇನೋ
ಅವಳವೋ ಅಧರವೋ ಪ್ರಾಣದ ಚೆಲ್ಲಾಟವೋ
ಬಂಗಾರದಿಂದ ತಂದ ಈ ತನುವ ಕಾಂತಿಗೆ
ಬಯಕೆಯು ಮನಸನು ಕೆಣಕಲು ನಾ ಸೋತೆನೆ

ಆಕಾಶ ಬಾಗಿದೆ

ನಿನ್ನಂದ ಕಾಣಲೆಂದು ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ ಕಾಮಿನಿ ಭಾಮಿನಿ
ಆಕಾಶ ಬಾಗಿದೆ