ಹೇಳಿಲ್ಲ ಯಾರಲ್ಲೂ ನಾನು - The Indic Lyrics Database

ಹೇಳಿಲ್ಲ ಯಾರಲ್ಲೂ ನಾನು

गीतकार - JAYANTH KAIKINI | गायक - SONU NIGAM, SHREYA GHOSHAL | संगीत - SHRIDHAR V SAMBHRAM | फ़िल्म - KRISHNA RUKKU | वर्ष - 2016

Song link

View in Roman

ಇಷ್ಕ್ ಮೇ ಜೀನಾ ಭಿ ಹೈ
ಇಷ್ಕ್ ಮೇ ಮರ್ನಾ ಭಿ ಹೈ

ಹೇಳಿಲ್ಲ ಯಾರಲ್ಲೂ ನಾನು
ಈ ಗುಟ್ಟಲ್ಲಿ ಶಾಮಿಲು ನೀನು
ಕಣ್ಣಿಂದ ನೀನು ಪಾರಾಗದಂತೆ
ನನ್ನಿಂದ ಎಂದು ದೂರಾಗದಂತೆ
ನಿನ್ನಲಿ ನಾನೀಗ ಸೆರೆಯಾಗಲೆನು

ಇಷ್ಕ್ ಜೀನಾ ಭಿ ಹೈ ಇಷ್ಕ್ ಮರ್ನಾ ಭಿ ಹೈ
ಇಷ್ಕ್ ತಾರೆ ಜಮೀನ್ ಇಷ್ಕ್ ತೂಫಾನ್ ಹೈ [2 ಬಾರಿ]

ಹೋ, ಹೇಳಿಲ್ಲ ಯಾರಲ್ಲೂ ನಾನೂ
ಈ ಗುಟ್ಟಲ್ಲಿ ಶಾಮಿಲು ನೀನು

ಗಾಳಿಯೇ ನನ್ನನು ನಿನ್ನೇ ನೂಕಿದೆ
ಭಾಷೆಗೂ ಮೀರಿದ ಭಾವನೆ ಎಕಿದೆ

ವಿವರವಾಗಿ ನೋಟವೇ ವರದಿಯನ್ನು ನೀಡಿದೆ
ನನಗೇ ನೀನೇ ಬೇಕು

ಇಷ್ಕ್ ಜೀನಾ ಭಿ ಹೈ ಇಷ್ಕ್ ಮರ್ನಾ ಭಿ ಹೈ
ಇಷ್ಕ್ ತಾರೆ ಜಮೀನ್ ಇಷ್ಕ್ ತೂಫಾನ್ ಹೈ [2 ಬಾರಿ]

ಹೋ ಈಗಂತು ಗಾಯಾಳು ನಾನು
ಈ ಗುಟ್ಟಲ್ಲಿ ಶಾಮಿಲು ನೀನು
ಈ ಪ್ರೀತಿ ಈಗ ಅತಿಯಾಗುವಂತೆ
ನನ್ನನ್ನೂ ನೀನು ಹುಡುಕುವಂತೆ
ಆಗಾಗ ಒಂಚೂರು ಮರೆಯಾಗಲೇನು

ಮೆಲ್ಲನೆ ತಿದ್ದುಬಾ ಮುತ್ತಿನ ಅಕ್ಷರ
ಸ್ವಪ್ನವೇ ಸಿಕ್ಕಿದೆ ಇದ್ದಾರು ಎಚ್ಚರ

ಚೆಲುವೆ ನಿನ್ನ ಕೂಗುತ ಚಕಿತನಾಗಿ ನೋಡುತ
ಬದುಕಬಲ್ಲೆ ಸಾಯುತ

ಇಷ್ಕ್ ಜೀನಾ ಭಿ ಹೈ ಇಷ್ಕ್ ಮರ್ನಾ ಭಿ ಹೈ
ಇಷ್ಕ್ ತಾರೆ ಜಮೀನ್ ಇಷ್ಕ್ ತೂಫಾನ್ ಹೈ [2 ಬಾರಿ]

ಹೇಳಿಲ್ಲ ಯಾರಲ್ಲೂ ನಾನು
ಈ ಗುಟ್ಟಲ್ಲಿ ಶಾಮಿಲು ನೀನು
ಕಣ್ಣಿಂದ ನೀನು ಪಾರಾಗದಂತೆ
ನನ್ನಿಂದ ಎಂದು ದೂರಾಗದಂತೆ
ನಿನ್ನಲಿ ನಾನೀಗ ಸೆರೆಯಾಗಲೆನು