ಪುಟ್ಟಮಲ್ಲಿ ಪುಟ್ಟಮಲ್ಲಿ - The Indic Lyrics Database

ಪುಟ್ಟಮಲ್ಲಿ ಪುಟ್ಟಮಲ್ಲಿ

गीतकार - Hamsalekha | गायक - S. P. Balasubrahmanya | संगीत - Hamsalekha | फ़िल्म - Putnanja | वर्ष - 1995

Song link

View in Roman

ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ

ಹೇಳಿಕೆಯ ಕೇಳಿಕೆಯಾ ಪೊಳ್ಳು ಮಾತಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ

ಅವಳ ಸಣ್ಣತನ ಮನೆಯ ಮುರಿಯುತಿದೆ
ಅವಳ ಜಾಣತನ ಮನವ ಉರಿಸುತಿದೆ

ಇದು ಮುಗಿಯದ ಗೊಡವೆ
ಬರಿ ಬೊಂಬೆಯ ಮದುವೇ

ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ

ನಮ್ಮೋರು ತಮ್ಮರೊ ಅನ್ನುವುದೆಲ್ಲಾ
ಈ ಹಳ್ಳಿಯ ಮಣ್ಣಲ್ಲೇ ಹುಟ್ಟಿದೇ

ಕಷ್ಟಾನೋ ನಷ್ಟಾನೋ ಬಾಳುವೆ ಮಾಡೋ
ಆ ಕಾತುರ ಅಕ್ಕರೆ ನಮಗಿದೆ

ಪ್ರೀತಿ ಬಿತ್ತಲೂ ಎದೆಯ ಉತ್ತಲು
ಕಳೆಯ ಕೀಳದೆ ತೆನೆಯ ಕಿತ್ತಳು

ಹೆಣ್ಣು ಮಣ್ಣೆಲ್ಲಾ ಬೆಳೆ ಬಂದಂತೇ
ನಮ್ಮ ಋಣ ಇದ್ದಂತೇ
ಬಾ ಕಳೆ ತೇಗಿ ಕಳೆ ತೇಗಿ

ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ

ಪುಟ್ನಂಜ ಪುಟ್ನಂಜ ಅಂದರೂ ನನ್ನ
ನಾ ನಂಜನೂ ನಿಜವಾಗಿ ನುಂಗಿದೇ

ಸಾಯಲ್ಲ ಸಾಯಸಲ್ಲ ಹೆಣ್ಣಿನ ನಂಜು
ಈ ಅಂಜದ ಗಂಡೆದೆ ಅಂಜಿದೇ

ಬಾಳಿನ ನೊಗದಲಿ ಒಂಟಿ ಎತ್ತು ನಾ
ಬಾಗಿಲೇ ಇಲ್ಲದ ಹೊಸ್ತಿಲು ಈಗ ನಾ

ಮನಸು ಮನೆಯಲ್ಲಾ ಸುಖ ಇದ್ದಷ್ಟೇ
ನಗುಮುಖ ಇದ್ದಷ್ಟೇ..
ಬಾ ದುಃಖ ತೆಗಿ ದುಃಖ ತೆಗಿ

ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ

ಹೇಳಿಕೆಯ ಕೇಳಿಕೆಯಾ ಪೊಳ್ಳು ಮಾತಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ

ಅವಳ ಸಣ್ಣತನ ಮನೆಯ ಮುರಿಯುತಿದೆ
ಅವಳ ಜಾಣತನ ಮನವ ಉರಿಸುತಿದೆ

ಇದು ಮುಗಿಯದ ಗೊಡವೆ
ಬರಿ ಬೊಂಬೆಯ ಮದುವೇ

ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ