ದಸರಾ ಗೊಂಬೆ - The Indic Lyrics Database

ದಸರಾ ಗೊಂಬೆ

गीतकार - Hamsalekha | गायक - S. P. Balasubrahmanya | संगीत - Hamsalekha | फ़िल्म - Putnanja | वर्ष - 1995

View in Roman

ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ
ಹೂವಿನ ಪಲ್ಲಕಿ ತಂದೆ ಕಣೇ

ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ
ಆಸೆ ಹೊತ್ತು ತಂದೆ ಕಣೇ

ಗೊಂಬೆ ಗೊಂಬೆ ಓ.. ಗೊಂಬೆ
ಬಾ ನನಗು ನಿನಗೂ ಒಳಗು ಹೊರಗೂ
ನಂಟು ಇದೆ ಒಂದು ಗಂಟು ಇದೆ

ರಾಣಿ ರಾಣಿ ಯುವರಾಣಿ ನೀ
ದೀಪ ಇಡದೆ ಬೆಳಕು ಬರದೇ
ಕಾಯುತಿದೆ ಮನೆ ಮಬ್ಬಲ್ಲಿದೆ

ನನಗಿಂತ ನೀ ಹೆಚ್ಚು
ನಿನಗಿಂತ ನಾ ಹೆಚ್ಚು
ಈ ಭಾವನೆ ಬರಿ ಹುಚ್ಚು
ಬಾ ಮನೆ ದೀಪ ಹಚ್ಚು

ಬಾ ನನ್ನರಸಿ ನನ್ನರಸಿ
ಬಂದೆ ಬಂದೆ ನಿನ್ನರಸಿ

ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ
ಹೂವಿನ ಪಲ್ಲಕಿ ತಂದೆ ಕಣೇ

ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ
ಆಸೆ ಹೊತ್ತು ತಂದೆ ಕಣೇ

ಪ್ರೀತಿ ಒಮ್ಮೆ ಹುಟ್ಟಿದರೆ
ಅದು ಹೇಳೋ ಹಾಗೆ ಕೇಳೊದೊಂದೇ
ನಮ್ಮ ಕೆಲಸ ಬೇಡ ಈ ವಿರಸ

ಪ್ರೀತಿ ಹೆಚ್ಚು ಉಕ್ಕಿದರೆ
ಅದು ಹೇಳೋರೆದುರು ಕುಣಿಯೊಂದೊಂದೇ
ನಮ್ಮ ಕೆಲಸ ನಾ ನಿನ್ನರಸ

ಓ ಬಾನೇ ಕೊನೆಯಲ್ಲಾ..
ಜಗಳಾನೇ ಜಗವಲ್ಲಾ
ಅನುಸರಿಸಿ ಬಂದರೆ
ಬಂಗಾರ ಬಾಳೆಲ್ಲಾ

ಬಾ ನನ್ನರಸಿ ನನ್ನರಸಿ
ಬಂದೆ ಬಂದೆ ನಿನ್ನರಸಿ

ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ
ಹೂವಿನ ಪಲ್ಲಕಿ ತಂದೆ ಕಣೇ

ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ
ಆಸೆ ಹೊತ್ತು ತಂದೆ ಕಣೇ