ಟಗರು ಬಂತು ಟಗರು - The Indic Lyrics Database

ಟಗರು ಬಂತು ಟಗರು

गीतकार - V Nagendra Prasad | गायक - Anthony Daasan | संगीत - Charan Raj | फ़िल्म - Tagaru | वर्ष - 2018

Song link

View in Roman

ವಾರೆ ನೋಟ ನೋಡೈತೆ
ಕಾಲು ಕೆರದು ನಿಂತೈತೆ
ಗುಟುರು ಹಾಕಿ ಬಂದೈತೆ
ಎದುರು ಹೋದ್ರೆ ಗುಂತೈತೆ

ನೋಡೋಕೇನೋ ಬಲು ಸಿಂಪಲ್ಲು
ಇವನ ಗುಂಡ್ಗೆ ಡಬಲ್ಲು
ಆಡೋ ಆಟ ಬಹಳ ಚಾಲು
ಬೇಕಾ ಬೇಕಾ ಸ್ಯಾಂಪಲ್ಲು

ಹೆಸರೂ, ಖದರೂ, ತಿಮಿರೂ
ನೋಡೋನ್ಗೆ ಬೆವರು
ಬ್ರದರೂ
ಟಗರು ಟಗರು ಇವನ ಪೊಗರು

ಟಗರು ಬಂತು ಟಗರು
ಇದು ಈ ಊರ ಟಗರು
ಜೋರಾಗಿ ಇದರ ಹೆಸರು
ಹೇಳ್ಬೇಡ ಕಣೋಬ್ರದರು

 

ಯಾವತ್ತೂ ಇದರ ಎದುರು
ಹೋಗ್ಬೇಡ ಕಣೋಬ್ರದರು
ಇದು ತಿಮಿರು ಇರೋ ಟಗರು
ಧೈರ್ಯ ಇದರ ಉಸಿರು

ಒಂದು ಬಾರಿ ಇಡುವ ಗುನ್ನ
ಆಮೇಲೆ ಯಾರೋ ಕಾಯೋರು ನಿನ್ನ
ಒಂದು ಬಾರಿ ಕೆಣಕೋ ಮುನ್ನ
ನೂರಾರು ಸಾರಿ ನೀ ಯೋಚ್ಸೋದು ಚೆನ್ನ

ಪ್ರೀತಿ ಮಾಡಿ ಮೈಯ್ಯಾ ಸವರು
ಪ್ರಾಣಾನೇ ನೀಡೋ ಗೆಳೆಯಾನೆ ಇವನು
ತೋರಿ ನೋಡು ನಿನ್ನ ಪೊಗರು
ಸದ್ದೇನೆ ಇರದಂತೆ ಗುದ್ದೇ ಬಿಡೋನು

ಲೋ ಮಗನೇ ಇವನು ಮದ ಏರಿ ನಿಂತ
ಆ ಶಿವನೇ ಇವನ ಮೈಯ್ಯಲ್ಲಿ ಕುಂತ

ನೋಡೋಕೇನೋ ಬಲು ಸಿಂಪಲ್ಲು
ಇವನ ಗುಂಡ್ಗೆ ಡಬಲ್ಲು
ಆಡೋ ಆಟ ಬಹಳ ಚಾಲು
ಬೇಕಾ ಬೇಕಾಸ್ಯಾಂಪಲ್ಲೂ

 

ಹೆಸರೂ, ಖದರೂ, ತಿಮಿರು
ನೋಡೋನ್ಗೆ ಬೆವರು
ಬ್ರದರೂ
ಟಗರು ಟಗರು ಇವನ ಪೊಗರು

ಟಗರು ಬಂತು ಟಗರು
ಇದು ಈ ಊರ ಟಗರು
ಜೋರಾಗಿ ಇದರ ಹೆಸರು
ಹೇಳ್ಬೇಡ ಕಣೋಬ್ರದರೂ

ಯಾವತ್ತೂ ಇದರ ಎದುರು
ಹೋಗ್ಬೇಡ ಕಣೋಬ್ರದರೂ
ಇದು ತಿಮಿರು ಇರೋ ಟಗರು
ಧೈರ್ಯ ಇದರ ಉಸಿರು

ಲೋ ಮಗನೇ ಇವನು
ಮದ ಏರಿ ನಿಂತ
ಆ ಶಿವನೇ ಇವನ
ಮೈಯ್ಯಲ್ಲಿ ಕುಂತ