ನೀ ಬರದಿರು ಕಂಬನಿಯೇ - The Indic Lyrics Database

ನೀ ಬರದಿರು ಕಂಬನಿಯೇ

गीतकार - Kaviraj | गायक - Tippu | संगीत - Anand Rajavikram – Rahul Dev | फ़िल्म - O Premave | वर्ष - 2017

Song link

View in Roman

ನೀ ಬರದಿರು ಕಂಬನಿಯೇ
ಈ ಕಣ್ಣಲ್ಲಿ ಪದೇ ಪದೇ
ನೀ ಇರುವೆಯಾ ಊ ಮನವೇ
ನೀ ಅವಳ ತುಸು ನೆನೆಯದೆ
ಮನ ಮೋಹಕ ಕ್ಷಣಗಳು
ಕೈ ಜಾರಿದ ಕನಸಿನ ಭಾಗವಾದವೇ
ಸುಂದರ ದಿನಗಳು ಇನ್ನೇನು
ಬದುಕಲಿ ಮರಳಿ ಬರದೆ

ನೀ ಬರದಿರು ಕಂಬನಿಯೇ
ಈ ಕಣ್ಣಲ್ಲಿ ಪದೇ ಪದೇ
ನೀ ಇರುವೆಯಾ ಊ ಮನವೇ
ನೀ ಅವಳ ತುಸು ನೆನೆಯದೆ

ಕೈ ಮುಗಿವೇ ನಾ ನಿನಗೆ ಒಂಟಿಯಾಗಿ
ಬದುಕು ತುಸು ಕಲಿಸು
ನೀನಿರದ ಬಾಳಿನ ಬದಲು
ಆ ಮರಣವೇ ಲೇಸು
ಒಂದು ಸಲ ಬಂದು ಬಿಡು ನನ್ನಾ
ಕಣ್ಣ ಎದುರಿಗೆ ಅರೆ ಘಳಿಗೆ
ಇಲ್ಲದಿರೆ ಕೊಂಡು ಬಿಡು ತುಂಬು
ಪುಣ್ಯ ಬರುವುದು ನಿನಗೆ

ಮನ ಮೋಹಕ ಕ್ಷಣಗಳು
ಕೈ ಜಾರಿದ ಕನಸಿನ ಭಾಗವಾದವೇ
ಸುಂದರ ದಿನಗಳು ಇನ್ನೇನು
ಬದುಕಲಿ ಮರಳಿ ಬರದೆ

ಚಂದಿರನ ತಾಂಬೆಳಕು ಬೆಂಕಿಯಂತೆ
ಸುಡುತಿದೆ ಹೃದಯವನು
ಈ ಬಗೆಯ ವೇದನೆ ಸಾಹಿಸಿ
ನಾ ಉಳಿಯುವೆನೆನು

ಯಾವ ಥರ ನಿಲ್ಲಿಸಲಿ ಸಾಲು
ಸಾಲು ನೆನಪಿನ ಮೆರವಣಿಗೆ
ನೀಡುವೆಯಾ ನೀ ನಂಗೆ
ಯೆಲ್ಲವನ್ನು ಮರೆಸುವ ಅರವಳಿಕೆ

ಮನ ಮೋಹಕ ಕ್ಷಣಗಳು
ಕೈ ಜಾರಿದ ಕನಸಿನ ಭಾಗವಾದವೇ
ಸುಂದರ ದಿನಗಳು ಇನ್ನೇನು
ಬದುಕಲಿ ಮರಳಿ ಬರದೆ

ನೀ ಬರದಿರು ಕಂಬನಿಯೇ
ಈ ಕಣ್ಣಲ್ಲಿ ಪದೇ ಪದೇ
ನೀ ಇರುವೆಯಾ ಊ ಮನವೇ
ನೀ ಅವಳ ತುಸು ನೆನೆಯದೆ
ಮನ ಮೋಹಕ ಕ್ಷಣಗಳು
ಕೈ ಜಾರಿದ ಕನಸಿನ ಭಾಗವಾದವೇ
ಸುಂದರ ದಿನಗಳು ಇನ್ನೇನು
ಬದುಕಲಿ ಮರಳಿ ಬರದೆ