ಕೆಂಪೇಗೌಡರ ಹೆಸರನು ಸಾರೋ - The Indic Lyrics Database

ಕೆಂಪೇಗೌಡರ ಹೆಸರನು ಸಾರೋ

गीतकार - A. P. Arjun | गायक - Vijay Prakash | संगीत - Vijeth Krishna | फ़िल्म - Prayanikara Gamanakke | वर्ष - 2018

View in Roman

ಹೇ ಕೆಂಪೇಗೌಡರ ಹೆಸರನು ಸಾರೋ ಬಸ್ಸು ನಿಲ್ದಾನ
ಹೇ ಕೆಂಪೇಗೌಡರ ಹೆಸರನು ಸಾರೋ ಬಸ್ಸು ನಿಲ್ದಾನ
ನಾನಾ ರೀತಿ ಜನರು ಬರುವ ದೊಡ್ಡ ನಿಲ್ದಾಣ
ನಾನಾ ರೀತಿ ಜನರು ಬರುವ ದೊಡ್ಡ ನಿಲ್ದಾಣ

ಬಳಗಡೆ ಮೂಲೇಲಿ ಕುಂತವ್ನಪ್ಪ ಮುದ್ದು ಗಣಪಣ್ಣ
ಎಡಗಡೆ ಮೂಲೆಲಿ ನಿಂತವ್ನಪ್ಪಾ ನಮ್ಮ ಹನುಮಣ್ಣಾ
ಮುಂಬಾಗ ಅನ್ನಮ್ಮ ಹಿಂಬಾಗ ಅಯ್ಯಪ್ಪ
ಕಾನರನ್ನು ಕಾಯುತ್ತ ಕುಂತವ್ರಪ್ಪ

ಹೇ ಕೆಂಪೇಗೌಡರ ಹೆಸರನು ಸಾರೋ ಬಸ್ಸು ನಿಲ್ದಾನ
ನಾನಾ ರೀತಿ ಜನರು ಬರುವ ದೊಡ್ಡ ನಿಲ್ದಾಣ

ಮಧ್ಯ ರೋಡಳ್ಳಿ ಮಂಗಳ ಮುಖಿ
ರಸ್ತೆ ಬದಿಯಲ್ಲಿ ಜೀವನ ಸುಖಿ
ಜೋರು ಮಾಡ್ತಾವ್ರೆ ಪೋಲಿಸು
ಆದ್ರು ಹೇಳ್ಬೇಕು ಅಡ್ರೆಸ್ಸು

ಮೊಟ್ಟೆ ಬೋಂಡ ಬಿಸಿ ಬಿಸಿ ಬಾಳೆ ಬಜ್ಜಿ
ಬಂದ್ಲಿಗೆ ಹಾಕ್ತಾವ್ಳೆ ವಯಸ್ಸಾಗಿರೋ ಅಜ್ಜಿ
ಮಧ್ಯ ರೋಡಲ್ಲಿ ನಿಂತ್ಕೊಂಡು
ಹಾಡು-ಉ ಕೇಳೋರು ಮೂರು ಜನ
ಮಧ್ಯ ಯಾರಾದ್ರೂ ಹೋಗ್ಬಿಟ್ರೆ
Video ಮಾಡೋರು ನೂರು ಜನ

ಜೀವನ ಅನ್ನೋದೊಂದು ಅನುಭವಗಳ ಸಂತೆ
ಓ ಮಾನವ ನೀನು ಯೆಲ್ಲಿ ಬಂದು ನಿಂತೆ

ಹೇ ಕೆಂಪೇಗೌಡರ ಹೆಸರನು ಸಾರೋ ಬಸ್ಸು ನಿಲ್ದಾನ
ಹೇ ಕೆಂಪೇಗೌಡರ ಹೆಸರನು ಸಾರೋ ಬಸ್ಸು ನಿಲ್ದಾನ
ನಾನಾ ರೀತಿ ಜನರು ಬರುವ ದೊಡ್ಡ ನಿಲ್ದಾಣ

ಲೈಫ್-ಯು ಅನ್ನೋದು ಸರ್ಕಲ್-ಲ್ಲೂ ಅಲ್ಲೆ ಸುತ್ಬೇಕು ಎಲ್ಲರೂ
ರೂಟ್-ಯು ಹಿಡಿದಾವ್ನೆ ಡ್ರೈವರ್-ರ್ರೂ ರೇಟ್-ಯು ಹೇಳ್ತಾವ್ನೆ ಕಂಡಕ್ಟ್ರು
ಸೌಂಡು ಹೊರ್ನು ಜನಗಳ ಗಲಾ ಗಿಜಿ ಗಿಜಿ ಶಬ್ದ
ತಾತ ಅಜ್ಜಿನ ರಸ್ತೆ ದಾಟಿಸಿ ಗೆದ್ದ
ಪೀಪಿ ಓದೋರು ಒಂದು ಕಡೆ ಪಾಪ ಮಾಡ್ದವ್ರು ಒಂದು ಕಡೆ
ಸೀಟ್-ಯು ಹಿಡಿದಯೋರು ಒಂದು ಕಡೆ ಬಿಟ್ಟು ಹೋಗೋರು ಒಂದು ಕಡೆ

ಜೀವನ ಅನ್ನೋದೊಂದು ಕಷ್ಟ ಸುಖದ ಕಂತೆ
ಓ ಮಾನವ ನೀನು ಯೆಲ್ಲಿ ಬಂದು ನಿಂತೆ

ಹೇ ಕೆಂಪೇಗೌಡರ ಹೆಸರನು ಸಾರೋ ಬಸ್ಸು ನಿಲ್ದಾನ
ಹೇ ಕೆಂಪೇಗೌಡರ ಹೆಸರನು ಸಾರೋ ಬಸ್ಸು ನಿಲ್ದಾನ
ಹೇ ಎಲ್ಲ ಗಾಡಿ ಹೋಗಿ ನಿಲ್ಲೋದ್ ಬೇರೆ ನಿಲ್ಲಾನಾ
ಬದುಕಿನ ಬಂಡಿ ಬಂದು ನಿಲ್ಲೋದ್ ಒಂದೆ ನಿಂತಾನ
ಅದು ದೇವರ ನಿಲ್ದಾನಾ…