ಹೋಗಬಾರದೇ - The Indic Lyrics Database

ಹೋಗಬಾರದೇ

गीतकार - ARASU ANTHARE | गायक - UDITH HARITAS,ANANYA BHAT | संगीत - POORNACHANDRA TEJASWI S.V | फ़िल्म - ROCKET | वर्ष - 2013

Song link

View in Roman

ಹೋಗಬಾರದೇ ಜೀವ ಈಗಲೇ
ಬದುಕಲೇನಿದೆ ಇನ್ನು ಮುನ್ನೆಲೆ
ನೆನೆಯಲಾರೆನು ಪ್ರೀತಿ ಹಿನ್ನೆಲೆ, ಜವರಾಯ
ನನ್ನ ದೇಹಕೆ ಬಾ ಬಾಹಿಸು
ಶೂನ್ಯ ಲೋಕಕೆ ನನ್ನ ತಲುಪಿಸು
ಕೈಯ ಮುಗಿವೆನು ಮರಣ ಕರುಣಿಸು, ಬಾರಯ್ಯ ಬಾರಯ್ಯ
ಒಲವೆಂಬ ಬೆಂಕಿಯ ಅಪ್ಪಿ ದಹಿಸಿದೆ
ಮನಸಿನಾಸೆಯ ಒಪ್ಪಿ ತಿಳಿಯದೆ
ನಾನೇ ಹಾರಿದೆ ಪ್ರೀತಿಯ ಕೂಪಕೆ ಬಾರಯ್ಯ ಜವರಾಯ

ಹೋಗಬಾರದೇ ಜೀವ ಈಗಲೇ
ಬದುಕಲೇನಿದೆ ಇನ್ನು ಮುನ್ನೆಲೆ
ನೆನೆಯಲಾರೆನು ಪ್ರೀತಿ ಹಿನ್ನೆಲೆ, ಜವರಾಯ

ಪಾಳು ಬಿದ್ದ ಮನಸಾ ಮಂಟಪದಲ್ಲಿ ಹಣತೆ ಹಚ್ಚಿದ ತರವೇ
ಚೇಳು ಕಚ್ಚಿದಂತ ಯಾತನೆ ನೀಡಲು ಮನಸು ಮಾಡಿದ ತರವೇ
ಚಾಡಿ ಹೇಳಿದೆ ಮನಸಿದು ನಿನ್ನಯ ಮೇಲಿನ ಪ್ರೀತಿಯ ಕೋಪಕೆ
ಧಂಗೆ ಎದ್ದಿದೆ ಢವ ಢವ ಹೃದಯಾ ಹೃದಯಾ
ವಿಧಿಯೇ ಕೀಟಲೆ ಬೇಡ ಹೋಗು ನೀ ಕಳುಹಿಸು ಯಮನ
ಪಾಶಾಗಿ ಸುಡು ನೀ ಜವನೆ ಬಿರನೆ ಬಾ ಬಾ ಬಾ

ಹೋಗಬಾರದೇ ಜೀವ ಈಗಲೇ
ಬದುಕಲೇನಿದೆ ಇನ್ನು ಮುನ್ನೆಲೆ
ನೆನೆಯಲಾರೆನು ಪ್ರೀತಿ ಹಿನ್ನೆಲೆ, ಜವರಾಯ

ಎದೆಯ ಬಂದಿಖಾನೆಯೊಳಗೆ ಪ್ರೀತಿ ಗಿಳಿಯ ಕೂಡಿ ಹಾಕಿ
ಭಸ್ಮವಾಗಿ ಹೋಯಿತೆ ಕ್ಷಣದಲಿ ಕ್ರೂರ ವಿಧಿಯ ದೃಷ್ಟಿಯು ತಾಕಿ
ಮನಸ ಗಾಜಾ ಮನೆಯಿದು ಒಡೆದಿದೆ ಕೂಡಿಸಲಾಗದು ಜೋಡಿಸಲಾಗದು
ಚೂರು ಚೂರು ಚುಚ್ಚಿದೆ ನೊಂದಿದೆ ಹೃದಯಾ ಹೃದಯಾ
ಕತ್ತಿ ಅಲುಗಿನ ಮೇಲೆ ನಾಟ್ಯ ಮಾಡುತ್ತಿದೆ ಪ್ರೀತಿ
ಆಹಾ ದೇವರೇ ನಿನ್ನ ಲೀಲೆ ಬಾ ಬಾ ಬಾ

ಹೋಗಬಾರದೇ ಜೀವ ಈಗಲೇ
ಬದುಕಲೇನಿದೆ ಇನ್ನು ಮುನ್ನೆಲೆ
ನೆನೆಯಲಾರೆನು ಪ್ರೀತಿ ಹಿನ್ನೆಲೆ, ಜವರಾಯ
ನನ್ನ ದೇಹಕೆ ಬಾ ಬಾಹಿಸು
ಶೂನ್ಯ ಲೋಕಕೆ ನನ್ನ ತಲುಪಿಸು
ಕೈಯ ಮುಗಿವೆನು ಮರಣ ಕರುಣಿಸು, ಬಾರಯ್ಯ ಬಾರಯ್ಯ
ಒಲವೆಂಬ ಬೆಂಕಿಯ ಅಪ್ಪಿ ದಹಿಸಿದೆ
ಮನಸಿನಾಸೆಯ ಒಪ್ಪಿ ತಿಳಿಯದೆ
ನಾನೇ ಹಾರಿರುವೆ ಪ್ರೀತಿಯ ಕೂಪಕೆ ಬಾರಯ್ಯ ಜವರಾಯ

ಹೋಗಬಾರದೇ ಜೀವ ಈಗಲೇ
ಬದುಕಲೇನಿದೆ ಇನ್ನು ಮುನ್ನೆಲೆ
ನೆನೆಯಲಾರೆನು ಪ್ರೀತಿ ಹಿನ್ನೆಲೆ, ಜವರಾಯ