ಚಿಗುರು ಬೊಂಬೆಯೇ - The Indic Lyrics Database

ಚಿಗುರು ಬೊಂಬೆಯೇ

गीतकार - K. Kalyan | गायक - K. S. Chithra | संगीत - K. Kalyan | फ़िल्म - Chandramukhi Pranasakhi | वर्ष - 1999

Song link

View in Roman

ಚಿಗುರು ಬೊಂಬೆಯೇ ನಾವಿರು ಬೊಂಬೆಯೇ
ನೀ ದಾಂತ ತೀಡಿದಂತ ಬೊಂಬೆಯೆ
ಚಿಗುರು ಬೊಂಬೆಯೇ ನಾವಿರು ಬೊಂಬೆಯೇ
ವಸಂತ ಕೋರೆದ ಸ್ವಂತ ಬೊಂಬೆಯೇ

ನಾಚಿಕೆ ನಿನ್ನ ಬಣ್ಣವೇ
ಕುತೂಹಲಾ ನಿನ್ನಾ ಒಡವೆಯೇ
ನಿನ್ನವನೇ ನಿನಗೆ ಶಿಲ್ಪಿಯೆ

ಚಿಗುರು ಬೊಂಬೆಯೇ ನಾವಿರು ಬೊಂಬೆಯೇ
ನೀ ದಾಂತ ತೀಡಿದಂತ ಬೊಂಬೆಯೆ

ಆಆಆ ಈ ಕ್ಷಣವೂ ಮರುಕ್ಷಣವೂ ಪ್ರತಿಷ್ಠಾನವಿರಲಿ
ಪ್ರತಿ ನಾಲೆಯ ಪ್ರತಿ ಕನಸು ಪ್ರತಿಪಾಲಿಸಲಿ
ನೀನೊಂದು ಸಿಹಿ ಪುತ್ಥಳಿ ಬೊಂಬೆ ಕಣೆ

ಕೈ ಹಿಡಿಯೋ ಕಲೆಗಾರನ ಅಂಗೈಯೊಳಗೆ
ನೀ ಸ್ಪರ್ಶ ಮಣಿಯಾಗು ನಿನ್ನ ಪ್ರತಿ ಗಳಿಗೆ
ನೀನೊಂದು ಸಂಜೀವಿನಿ ಬೊಂಬೆ ಕಣೆ

ಹಣೆಯ ಮನೆಯಲ್ಲೇ ಹಾ ಆ ಆ ಆ
ಹಸೆಯ ಮನೆಯಿದೆ ಓ ಓ ಓ ಓ ಓ
ಮಧು ಸುರಿವ ಮಧು ಮಗಳೇ
ಪ್ರತಿ ಇರುಳು ಮೊದಲಿರುಳೆ

ಚಿಗುರು ಬೊಂಬೆಯೇ ನಾವಿರು ಬೊಂಬೆಯೇ
ನೀ ದಾಂತ ತೀಡಿದಂತ ಬೊಂಬೆಯೆ

ಹಾ ಆ ಆ ನಿನ್ನಂದ ನಿನಗೆ ಮಾತ್ರ ನೆನೆವರೆಗೇ
ನೀನಾ ಹೃದಯ ನಿನ್ನೊಳಗೆ ಇದ್ದರೇ ಹೇಗೇ
ಅರ್ಧಾಂಗಿಗೂ ಅರ್ಧ ಸಿಗಬೇಕು

ನಿನ್ನಸಿರು ಬಾರಿ ಗಾಳಿಗೆ ಬೆರೆತರೆ ಹೇಗೆ
ನಿನ್ನೇಸರಿಗೆ ಹೆಸರೊಂದು ಬರೆದುಕೋ ಹೀಗೇ
ಹೆಸರುಸಿರಲು ಸಂಗಾತಿಗೆ ಪಾಲು ಇದೆ

ಗಾಳಿ ನೀರಿಗೂ ಹಾ ಆ ಆ ಆ ಆ
ತಾಳಿ ನಂತಿದೆ ಓ ಓ ಓ ಓ ಓ
ಹೊಸ ಬಾಳು ಹೊಸ ಬೆಳಕು
ನಿನ್ನೊಳಗೇ ನಗಬೇಕು

ಚಿಗುರು ಬೊಂಬೆಯೇ ನಾವಿರು ಬೊಂಬೆಯೇ
ನೀ ದಾಂತ ತೀಡಿದಂತ ಬೊಂಬೆಯೆ
ಚಿಗುರು ಬೊಂಬೆಯೇ ನಾವಿರು ಬೊಂಬೆಯೇ
ವಸಂತ ಕೋರೆದ ಸ್ವಂತ ಬೊಂಬೆಯೇ

ನಾಚಿಕೆ ನಿನ್ನ ಬಣ್ಣವೇ
ಕುತೂಹಲಾ ನಿನ್ನಾ ಒಡವೆಯೇ
ನಿನ್ನವನೇ ನಿನಗೆ ಶಿಲ್ಪಿಯೆ