ಪಿಸು ಪಿಸು ಮಾತು - The Indic Lyrics Database

ಪಿಸು ಪಿಸು ಮಾತು

गीतकार - Kala Samrat Dr. S Narayan | गायक - Sonu Nigam | संगीत - Kala Samrat Dr. S Narayan | फ़िल्म - 5D ೫ಡೀ | वर्ष - 2023

Song link

View in Roman

ಪಿಸು ಪಿಸು ಮಾತು

ತುಸು ತುಸು ಮೌನ
ಕಸಿ ವಿಸಿ ಮಿಲನ..

ಹಸಿ ಹಸಿ ಪ್ರೀತಿ

ಬಿಸಿ ಬಿಸಿ ನೋಟ
ಹೊಸ ಸಂಚಲನ..
ಏನೋ.. ಹೇಳು ಅಂತು

ಅದೇನೋ..ನೀ ಕೇ..ಳು ಅಂತು..
ನನ್ನ...ಮನಸ್ಸು

ಪಿಸು ಪಿಸು ಮಾತು

ತುಸು ತುಸು ಮೌನ
ಕಸಿ ವಿಸಿ ಮಿಲನ....

ಎಂದೋ, ಅದೆಂದೋ
ಅವಳನ್ನು ನಾ ನೋ..ಡಿದಂತೆ..
ದಿನವು, ಪ್ರತಿಕ್ಷಣವು
ಅವಳನ್ನು ನಾ ಕೂ..ಡಿದಂತೆ..
ಜೊತೆ ಜೊತೆಯಲಿ ನಲಿ ನಲಿಯುತ
ದಿನಗಳ ಕಳೆದಂತೆ
ಹಗಲಿರುಳಿನ ಅರಿವಿಲ್ಲದೆ ಮೈ ಮನ ಮರೆತಂತೆ
ಬೊಗಸೆ ಕಣ್ಣಲ್ಲಿ ನಾ ಮಿಂದು ಬಂದು
ಕನಸ ಸುರಿಗಯ್ಯಲೇ...
ನಾನು... ಈಗ

ಪಿಸು ಪಿಸು ಮಾತು

ತುಸು ತುಸು ಮೌನ
ಕಸಿ ವಿಸಿ ಮಿಲನ..
ಹಸಿ ಹಸಿ ಪ್ರೀತಿ
ಬಿಸಿ ಬಿಸಿ ನೋಟ
ಹೊಸ ಸಂಚಲನ....

ಗಾಳಿ, ತಂಗಾಳಿ
ಅವಳನ್ನು ನೀ ಸೊಕಬೇಡ..
ಅವಳ, ಹೂ ನಗೆಯ
ದಯಮಾಡಿ ನೀ ಕದಿಯಬೇಡ..
ಬೊರ್ಗರೆಯುವ ಅವಳಂದವು
ನಾ ನೋಡಲು ತಾನೆ,
ನನ್ ಒಲವಿನ ಸವಿಗನಸಲಿ ಅವಳಿದ್ದರೆ ತಾನೆ
ಬಾಳ ಪುಟವೆಲ್ಲ ನಿನಗಾಗಿ ಇಡುವೆ
ಬಂದು ನೀ ಸೇರಿಕೋ...
ನನ್ನ...ಗೆಳತಿ

ಪಿಸು ಪಿಸು ಮಾತು

ತುಸು ತುಸು ಮೌನ
ಕಸಿ ವಿಸಿ ಮಿಲನ..

ಹಸಿ ಹಸಿ ಪ್ರೀತಿ
ಬಿಸಿ ಬಿಸಿ ನೋಟ
ಹೊಸ ಸಂ.ಚಲನ..