ನನ್ನ ಇನಿಯನ ನೆಲೆಯ ಬಲ್ಲೆಯೆನೆ - The Indic Lyrics Database

ನನ್ನ ಇನಿಯನ ನೆಲೆಯ ಬಲ್ಲೆಯೆನೆ

गीतकार - N.S. Lakshminarayana Bhatta | गायक - Various | संगीत - Various | फ़िल्म - Album | वर्ष - 1970

Song link

View in Roman

ನನ್ನ ಇನಿಯನ ನೆಲೆಯ ಬಲ್ಲೆಯೆನೆ
ಹೇಗೇ ತಿಳಿಯಲಿ ಅದನು ಹೇಳು ನೀನೆ

ನನ್ನ ಇನಿಯನ ನೆಲೆಯ ಬಲ್ಲೆಯೆನೆ
ಹೇಗೇ ತಿಳಿಯಲಿ ಅದನು ಹೇಳು ನೀನೆ

ಇರುವೆ ಸರಿಯುವ ಸದ್ದು
ಮೊಗ್ಗು ತೇರೆಯುವ ಸದ್ದು
ಮಂಜು ಸೂರಿಯುವ ಸದ್ದು ಕೇಳ ಬಲ್ಲ

ಇರುವೆ ಸರಿಯುವ ಸದ್ದು
ಮೊಗ್ಗು ಬಿರಿಯುವ ಸದ್ದು
ಮಂಜು ಸುರಿಯುವ ಸದ್ದು ಕೇಳುವವನು
ನನ್ನ ಮೋರೆಯನು ಈಕೆ ಕೇಳಲೊಲ್ಲ

ನನ್ನ ಇನಿಯನ ನೆಲೆಯ ಬಲ್ಲೆಯೆನೆ
ಹೇಗೇ ತಿಳಿಯಲಿ ಅದನು ಹೇಳು ನೀನೆ

ಗಿರಿಯ ಎತ್ತಲು ಬಲ್ಲ
ಶರದಿ ಭಟ್ಟೀಸ ಬಲ್ಲ
ಗಾಳಿ ಉಸಿರನೆ ಕಟ್ಟಿ ನಿಲಿಸ ಬಲ್ಲ

ಗಿರಿಯ ಎತ್ತಲು ಬಲ್ಲ
ಶರದಿ ಭಟ್ಟೀಸ ಬಲ್ಲ
ಗಾಳಿ ಉಸಿರನೆ ಕಟ್ಟಿ ನಿಲಿಸ ಬಲ್ಲ
ನನ್ನ ಸೆರೆಯಿಂದೆಕೆ ಬಿಡಿಸಲೊಲ್ಲ

ನನ್ನ ಇನಿಯನ ನೆಲೆಯ ಬಲ್ಲೆಯೆನೆ
ಹೇಗೇ ತಿಳಿಯಲಿ ಅದನು ಹೇಳು ನೀನೆ

ನೀರು ಮುಗಿಲಾದವನು
ಮುಗಿಲು ಮಳೆಯಾದವನು
ಮ್ಯಾಲೆ ಬಿದ್ದು ತೆನೆ ಎದ್ದು ತೂಗುವವನು

ನೀರು ಮುಗಿಲಾದವನು
ಮುಗಿಲು ಮಳೆಯಾದವನು
ಮ್ಯಾಲೆ ಬಿದ್ದು ತೆನೆ ಎದ್ದು ತೂಗುವವನು
ನನ್ನೀ ಅಲಲನು ಈಕೆ ಅರಿಯನವನು

ನನ್ನ ಇನಿಯನ ನೆಲೆಯ ಬಲ್ಲೆಯೆನೆ
ಹೇಗೇ ತಿಳಿಯಲಿ ಅದನು ಹೇಳು ನೀನೆ

ನನ್ನ ಇನಿಯನ ನೆಲೆಯ ಬಲ್ಲೆಯೆನೆ
ಹೇಗೇ ತಿಳಿಯಲಿ ಅದನು ಹೇಳು ನೀನೆ
ಹೇಗೇ ತಿಳಿಯಲಿ ಅದನು ಹೇಳು ನೀನೇ..