ಬೆಳ್ಳಿ ಮೋಡದ ಅಂಚಿನಿಂದ - The Indic Lyrics Database

ಬೆಳ್ಳಿ ಮೋಡದ ಅಂಚಿನಿಂದ

गीतकार - R. N. Jayagopal | गायक - P. B. Sreenivas, P. Susheela | संगीत - Vijaya Bhaskar | फ़िल्म - Belli Moda | वर्ष - 1967

Song link

View in Roman

ಬೆಳ್ಳಿ ಮೋಡದ ಅಂಚಿನಿಂದ
ಮೂಡಿ ಬಂದ ಆಶಾ ಕಿರಣ
ಬೆಳ್ಳಿ ಮೋಡದ ಆಚೆ ಇಂದಾ
ಊಟಿ ಬಂದ ಮಿನುಗು ತಾರೆ

ವಿಕಸಿತ ಸುಮವೋ ವನದೇವತೆಯೋ
ಮನ ಮಂದಿರದ ಆದಿ ದೇವತೆಯೋ
ವಿಕಸಿತ ಸುಮವೋ ವನದೇವತೆಯೋ
ಮನಮಂದಿರದ ಆದಿ ದೇವತೆಯೋ

ದೇವರು ನೀನು ದಾಸಿಯು ನಾನು
ದೇವರು ನೀನು ದಾಸಿಯು ನಾನು
ತನು ಮನ ನಿಮದೆ ಇನ್ನೇನು..

ಬೆಳ್ಳಿ ಮೋಡದ ಆಚೆ ಇಂದಾ
ಊಟಿ ಬಂದ ಮಿನುಗುತಾರೆ

ಅಂತರನಾಗ ಭವತರಂಗ
ಕಾಲಕಾಲ ಹರಿವ ಪ್ರೇಮದ ಗಂಗಾ
ಅಂತರನಾಗ ಭವತರಂಗ
ಕಾಲಕಾಲ ಹರಿವ ಪ್ರೇಮದ ಗಂಗಾ

ಪ್ರೇಮದ ಗಂಗೆ ಜಲದಲಿ ಮಿಂದು
ಪ್ರೇಮದ ಗಂಗೆ ಜಲದಲಿ ಮಿಂದು
ಪವನಲಾದೆ ನಾನಿಂದು

ಬೆಳ್ಳಿ ಮೋಡದ ಆಚೆ ಇಂದಾ
ಊಟಿ ಬಂದ ಮಿನುಗುತಾರೆ

ಪ್ರಣಯದ ಕಾವ್ಯ ಬರೆದೆ ನೀನು
ಪೂತ ಪುಟವೆಲ್ಲ ತುಂಬಿದೆ ಜೇನು
ಪ್ರಣಯದ ಕಾವ್ಯ ಬರೆದೆ ನೀನು
ಪೂತ ಪುಟವೆಲ್ಲ ತುಂಬಿದೆ ಜೇನು

ಜೇನಿನ ಧಾರೆ ಸವಿಯುವ ಬಾರೆ
ಜೇನಿನ ಧಾರೆ ಸವಿಯುವ ಬಾರೆ
ನೀನೆ ನನ್ನ ಮಿನುಗುತಾರೆ

ಬೆಳ್ಳಿ ಮೋಡದ ಅಂಚಿನಿಂದ
ಮೂಡಿ ಬಂದ ಆಶಾ ಕಿರಣ