ಅರಳುವ ಹೂವುಗಳೇ ಆಲಿಸಿರಿ - The Indic Lyrics Database

ಅರಳುವ ಹೂವುಗಳೇ ಆಲಿಸಿರಿ

गीतकार - K. Kalyan | गायक - K.S Chitra | संगीत - Bharadwaj | फ़िल्म - My Autograph | वर्ष - 2006

Song link

View in Roman

ಅರಳುವ ಹೂವುಗಳೇ ಆಲಿಸಿರಿ

ಬಾಳೊಂದು ಹೋರಾಟ ಮರೆಯದಿರಿ

ಬೆಳಗಿನ ಕಿರಣಗಳೇ ಬಣ್ಣಿಸಿರಿ

ಇರುಳಿಂದೆ ಬೆಳಕುಂಟು ತೋರಿಸಿರಿ

ನಾಳೆಯ ನಂಬಿಕೆಯಿರಲಿ ನಮ್ಮ ಬಾಳಲಿ

ಗೆಲ್ಲುವ ಭರವಸೆಯೊಂದೆ ಬೆಳಕಾಗಲಿ

ಮನವೇ ಓ ಮನವೇ ನೀ ಅಳುಕದಿರು

ಮಳೆಯೋ ಬರಸಿಡಿಲೋ ನೀ ನಡೆಯುತಿರು

ಅರಳುವ ಹೂವುಗಳೇ ಆಲಿಸಿರಿ

ಬಾಳೊಂದು ಹೋರಾಟ ಮರೆಯದಿರಿ

ಮನಸು ಎಂಬ ಕನ್ನಡಿಯು ಹೊಡೆದು ಹೋಗಬಾರದು

ಬಾಳು ಒಂದು ಗೋಳು ಅಂತ ಓಡಿ ಹೋಗಬಾರದು

ಯಾರಿಗಿಲ್ಲಿ ನೋವಿಲ್ಲ ಯಾರಿಗಿಲ್ಲಿ ಸಾವಿಲ್ಲಾ

ಕಾಲ ಕಳೆದ ಹಾಗೆ ಎಲ್ಲಾ ಮಾಯವಾಗುವಂತದು

ಉಳಿ ಪೆಟ್ಟು ಬೀಳುವ ಕಲ್ಲೇ ಶಿಲೆಯಾಗಿ ನಿಲ್ಲುವುದು

ದಿನ ನೋವ ನುಂಗುವ ಜೀವವೇ ನೆಲೆಯಾಗಿ ನಿಲ್ಲುವುದು

ಯಾರಿಗಿಲ್ಲ ಅಲೆದಾಟ ಯಾರಿಗಿಲ್ಲ ಪರದಾಟ

ನಮ್ಮ ಪ್ರತಿ ಕನಸು ಇಲ್ಲಿ ನನಸಾಗೋ

ಒಳ್ಳೇ ಕಾಲವು ಮುಂದೆ ಇದೆ

ಮನವೇ ಓ ಮನವೇ ನೀ ಕುಗ್ಗದಿರು

ಬೆಟ್ಟ ಬಯಲಿರಲಿ ನೀ ನುಗ್ಗುತಿರು

ಅರಳುವ ಹೂವುಗಳೇ ಆಲಿಸಿರಿ

ಬಾಳೊಂದು ಹೋರಾಟ ಮರೆಯದಿರಿ

ನೋವು ನಲಿವು ಅನ್ನೋದು ಬಾಳ ರೈಲು ಕಂಬಿಗಳು

ನಡುವೆ ನಮ್ಮದೀ ಪಯಣ ನಗುತ ಸಾಗು ಹಗಲಿರುಳು

ಏನೇ ಬರಲಿ ಬಾಳಿನಲಿ ಧ್ಯೇಯವೊಂದು ಜೊತೆಯಿರಲಿ

ಏಳುಬೀಳು ಎಲ್ಲ ದಾಟಿ ಏಳುತೀವಿ ನಾವುಗಳು

ಅವಮಾನ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ

ನಾವೆಲ್ಲರು ಎಂದೂ ಒಂದೆ ಆ ದೇವರ ಸೃಷ್ಟಿಯಲಿ

ಬಾಳಿಗೊಂದು ಅರ್ಥವಿದೆ ಹೆಜ್ಜೆಗೊಂದು ದಾರಿಯಿದೆ

ನಿನ್ನ ಆತ್ಮಬಲ ನಿನ್ನ ಜೊತೆಯಿರಲು ಆಕಾಶವೆ ಅಂಗೈಲಿ

ಮನವೇ ಓ ಮನವೇ ನೀ ಬದಲಾಗು

ಏನೇ ಸಾಧನೆಗೂ ನೀ ಮೊದಲಾಗು

ಅರಳುವ ಹೂವುಗಳೇ ಆಲಿಸಿರಿ

ಬಾಳೊಂದು ಹೋರಾಟ ಮರೆಯದಿರಿ

ಬೆಳಗಿನ ಕಿರಣಗಳೇ ಬಣ್ಣಿಸಿರಿ

ಇರುಳಿಂದೆ ಬೆಳಕುಂಟು ತೋರಿಸಿರಿ

ನಾಳೆಯ ನಂಬಿಕೆಯಿರಲಿ ನಮ್ಮ ಬಾಳಲಿ

ಗೆಲ್ಲುವ ಭರವಸೆಯೊಂದೇ ಬೆಳಕಾಗಲಿ

ಮನವೇ ಓ ಮನವೇ ನೀ ಅಳುಕದಿರು

ಮಳೆಯೋ ಬರಸಿಡಿಲೋ ನೀ ನಡೆಯುತಿರು