ನೂರು ಜನ್ಮಕು ನೂರಾರು ಜನ್ಮಕು - The Indic Lyrics Database

ನೂರು ಜನ್ಮಕು ನೂರಾರು ಜನ್ಮಕು

गीतकार - Nagathihalli Chandrashekar | गायक - Rajesh Krishnan, Sangeetha Katti | संगीत - Mano Murthy | फ़िल्म - America America [ | वर्ष - 1995

Song link

View in Roman

ನೂರು ಜನ್ಮಕು ನೂರಾರು ಜನ್ಮಕು
ನೂರು ಜನ್ಮಕು ನೂರಾರು ಜನ್ಮಕು
ಒಲವ ಧಾರೆ ಒಲಿದೊಳಿದು ಬಾರೆಲೆ
ನನ್ನ ಆತ್ಮ ನನ್ನ ಪ್ರಾಣ ನೀನೆಂದು..

ನೂರು ಜನ್ಮಕು ನೂರಾರು ಜನ್ಮಕು
ನೂರು ಜನ್ಮಕು ನೂರಾರು ಜನ್ಮಕು
ಒಲವ ಧಾರೆ ಒಲಿದೊಳಿದು ಬಾರೆಲೆ
ನನ್ನ ಆತ್ಮ ನನ್ನ ಪ್ರಾಣ ನೀನೆಂದು..
ನೂರು ಜನ್ಮಕು

ಬಾಳೆಂದರೆ ಪ್ರಣಯಾನುಭವ
ಕವಿತೆ ಆತ್ಮಾನುಸಂಧಾನ
ನೆನಪೆಂದರೆ ಮಳೆಬಿಲ್ಲ ಚಾಯೆ
ನನ್ನೆದೆಯ ಬಾಂದಲಾಡಿ ಹೋ ಹೋ ಓ
ನನ್ನೆದೆಯ ಬಾಂದಲಾಡಿ ಚಿತ್ತಾರ ಬರೆದವಳೇ
ಸುತ್ತೇಲು ಲೋಕದಲಿ ಮತ್ತೆ ಸಿಗದವಳೇ
ನನ್ನೊಳಗೇ ಹಾಡಾಗಿ ಹರಿದವಳೇ

ನೂರು ಜನ್ಮಕು ನೂರಾರು ಜನ್ಮಕು
ನೂರು ಜನ್ಮಕು ನೂರಾರು ಜನ್ಮಕು
ಒಲವ ಧಾರೆ ಒಲಿದೊಳಿದು ಬಾರೆಲೆ
ನನ್ನ ಆತ್ಮ ನನ್ನ ಪ್ರಾಣ ನೀನೆಂದು..
ನೂರು ಜನ್ಮಕು

ಬಾ ಸಂಪಿಗೆ ಸವಿಭಾವ ಲಹರಿ
ಹರಿಯೆ ಪನ್ನೀರ ಜೀವನದಿ
ಬಾ ಮಲ್ಲಿಗೆ ಮಮಕಾರ ಮಾಯೆ
ಲೋಕದ ಸುಖವೆಲ್ಲ ಹೋ ಹೋ ಓ
ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ
ಇರುವಂಥ ನೂರು ಕಹಿ ಇರಲಿ ನನಗಾಗಿ
ಕಾಯುವೆನು ಕೊನೆವರೆಗು ಕಣ್ಣಾಗಿ

ನೂರು ಜನ್ಮಕು ನೂರಾರು ಜನ್ಮಕು
ನೂರು ಜನ್ಮಕು ನೂರಾರು ಜನ್ಮಕು
ಒಲವ ಧಾರೆ ಒಲಿದೊಳಿದು ಬಾರೆಲೆ
ನನ್ನ ಆತ್ಮ ನನ್ನ ಪ್ರಾಣ ನೀನೆಂದು..