ಆ ವಿಧಿ ಕೇರಳಿತೇ - The Indic Lyrics Database

ಆ ವಿಧಿ ಕೇರಳಿತೇ

गीतकार - Su. Rudramurthy Shastry, Shyamsundar Kulkarni | गायक - Dr. Rajkumar | संगीत - Rajan-Nagendra | फ़िल्म - Baalida Mane | वर्ष - 1997

Song link

View in Roman

ಆ ವಿಧಿ ಕೇರಳಿತೇ
ಆಆಆಆಆಆಆಆ
ಆ ವಿಧಿ ಕೇರಳಿತೇ ನಗುವು ನಲಿವೆಲ್ಲ ನೋವಾಯಿತು
ಬದುಕೆಲ್ಲ ನೂರಾರು ಚೂರಾಯಿತೆ
ಆ ವಿಧಿ ಕೇರಳಿತೇ ನಗುವು ನಲಿವೆಲ್ಲ ನೋವಾಯಿತು
ಬದುಕೆಲ್ಲ ನೂರಾರು ಚೂರಾಯಿತೆ

ಗೌರವದ ಗಣಿಯಾಗಿ ಬಾಳಿದ ಮನೆಯ
ಗೌರವದ ಗಣಿಯಾಗಿ ಬಾಳಿದ ಮನೆಯ
ಅಭಿಮಾನ ಬೀದಿಯಲಿ ಧೂಳಾಯಿತೇ

ಯೆಲ್ಲಕ್ಕು ಮಿಗಿಲಾದ ಸಂಸಾರವಾದ
ಮನೆತನದ ಮರ್ಯಾದೆ ಹಾಳಾಯ್ತು
ಭೂಮಿಯೇ ಬಿರಿದರೆ ಆಸರೆ ಯೆನಿದೆ
ದೇವರೇ ಮುನಿದರೆ ರಕ್ಷಣೆ ಯೆಲ್ಲಿದೆ
ದೇವರೇ ಮುನಿದರೆ ರಕ್ಷಣೆ ಯೆಲ್ಲಿದೆ

ಆ ವಿಧಿ ಕೇರಳಿತೇ ನಗುವು ನಲಿವೆಲ್ಲ ನೋವಾಯಿತು
ಬದುಕೆಲ್ಲ ನೂರಾರು ಚೂರಾಯಿತೆ
ಆ ವಿಧಿ ಕೇರಳಿತೇ ನಲಿವೆಲ್ಲ ನೋವಾಯಿತು

ವಾತ್ಸಲ್ಯದ ಸೆಲೆಯಾದ ಮನಸುಗಳಲ್ಲಿ
ವಾತ್ಸಲ್ಯದ ಸೆಲೆಯಾದ ಮನಸುಗಳಲ್ಲಿ
ನೂರು ಬಗೆ ನೋವುಗಳ ನೆಲೆಯಾಯ್ತು

ಸೌಜನ್ಯದ ಸಿರಿಯದ ಈ ಸಂಸಾರವು
ಅಪಮಾನದ ಬಾಳೆಯಲ್ಲಿ ಸೆರೆಯಾಯ್ತೆ
ಪ್ರೀತಿಗೆ ಸಿಕ್ಕಿದೆ ದ್ವೇಷದ ಕಾಣಿಕೆ
ತಪ್ಪನು ಮಾಡದೆ ಶಿಕ್ಷೆಯು ಏತಕೆ
ತಪ್ಪನು ಮಾಡದೆ ಶಿಕ್ಷೆಯು ಏತಕೆ

ಆ ವಿಧಿ ಕೇರಳಿತೇ ನಗುವು ನಲಿವೆಲ್ಲ ನೋವಾಯಿತು
ಬದುಕೆಲ್ಲ ನೂರಾರು ಚೂರಾಯಿತೆ
ಆ ವಿಧಿ ಕೇರಳಿತೇ ನಲಿವೆಲ್ಲ ನೋವಾಯಿತು