ಪಂಚರಂಗಿ ಗಿಣಿಯೆ - The Indic Lyrics Database

ಪಂಚರಂಗಿ ಗಿಣಿಯೆ

गीतकार - R. N. Jayagopal | गायक - S. P. Balasubrahmanyam | संगीत - Upendra Kumar | फ़िल्म - Sindhoora Thilaka | वर्ष - 1992

Song link

View in Roman

ಪಂಚರಂಗಿ ಗಿಣಿಯೆ ಮುತ್ತು ರತ್ನ ಮಣಿಯೆ
ಪಂಚರಂಗಿ ಗಿಣಿಯೆ ಮುತ್ತು ರತ್ನ ಮಣಿಯೆ
ಬಂಗಾರದ ಹೂವೇ ಚೆಂದುಳ್ಳಿ ಚೆಲುವೆ
ಬಂಗಾರದ ಹೂವೇ ಚೆಂದುಳ್ಳಿ ಚೆಲುವೆ

ತಂಗಾಳಿ ತಂಪಿನಲಿ ತಿನಗಳ ಸೊಂಪಿನಲಿ
ಮಲಗು ಹಾಯಾಗಿ ನೀ
ಚಂದಿರನ ಮಗಳೇ ಇಂದಿರಾನ ಸೊಸೆಯೇ
ಮಲ್ಲಿಗೆಯ ಅರಳೆ ಮಾಮರದ ಸಸಿಯೇ
ಮರೆತು ಎಲ್ಲ ಚಿಂತೆ ಹೊಂಗನಸು ಕಾಣುವಂತೆ
ಮಲಗು ಹಾಯಾಗಿ ನೀ

ದೂರಿ ದೂರಿ ದುಂಡಾಲಮ್ಮ ದೂರಿ ದೂರಿ
ಲಾಲಿ ಲಾಲಿ ದುಂಡಾಲಮ್ಮಾ ಲಾಲಿ ಲಾಲಿ

ನೀ ರೆಪ್ಪೆ ಮುಚ್ಚಿದರೆ ಸ್ವಪ್ನದ ಬೀದಿ
ಆ ಬೆಳ್ಳಿ ಬೀದಿಯಲಿ ಚಿನ್ನದ ತೇರು
ನೀ ರೆಪ್ಪೆ ಮುಚ್ಚಿದರೆ ಸ್ವಪ್ನದ ಬೀದಿ
ಆ ಬೆಳ್ಳಿ ಬೀದಿಯಲಿ ಚಿನ್ನದ ತೇರು
ಆ ಹೊನ್ನ ತೇರಿನಲಿ ನೀ ಬರುವಾಗ
ಶುಕ್ರವಾರ ಲಕ್ಷ್ಮೀಯಂತೇ ಆ ಐಭೋಘಾ
ನವಿಲೂರ ನವಿಲೆ ಊ ಬೆಳ್ಳಿ ಮುಗಿಲೆ
ಸೌಂದರ್ಯದ ಸಿರಿಯೇ ಬಿನ್ನನದ ನಿಧಿಯೇ
ತಂಗಾಳಿ ತಂಪಿನಲಿ ತಿನಗಳ ಸೊಂಪಿನಲಿ
ಮಲಗು ಹಾಯಾಗಿ ನೀ

ದೂರಿ ದೂರಿ ದುಂಡಾಲಮ್ಮ ದೂರಿ ದೂರಿ
ಲಾಲಿ ಲಾಲಿ ದುಂಡಾಲಮ್ಮಾ ಲಾಲಿ ಲಾಲಿ

ನಿಂಗಾಗಿ ತಾರೆಗಳು ಜಾರಿ ಸೀರೆ ತಂತು
ಕೋಗಿಲೆಯು ಕಣ್ಣಿಗೆ ಕಾಡಿಗೆ ತಂತು
ನಿಂಗಾಗಿ ತಾರೆಗಳು ಜಾರಿ ಸೀರೆ ತಂತು
ಕೋಗಿಲೆಯು ಕಣ್ಣಿಗೆ ಕಾಡಿಗೆಯ ತಂತು
ನಿಂಗಾಗಿ ನಾ ಹೊಸದು ಹಾಡೊಂದು ತಂದೆ
ಹಾಡಿಂಡ ಮೈ ಮರೆಸು ಮಲಗಿಸಲು ಬಂದೆ

ಪಂಚರಂಗಿ ಗಿಣಿಯೆ ಮುತ್ತು ರತ್ನ ಮಣಿಯೆ
ಬಂಗಾರದ ಹೂವೇ ಚೆಂದುಳ್ಳಿ ಚೆಲುವೆ
ತಂಗಾಳಿ ತಂಪಿನಲಿ ತಿನಗಳ ಸೊಂಪಿನಲಿ
ಮಲಗು ಹಾಯಾಗಿ ನೀ

ಚಂದಿರನ ಮಗಳೇ ಇಂದಿರಾನ ಸೊಸೆಯೇ
ಮಲ್ಲಿಗೆಯ ಅರಳೆ ಮಾಮರದ ಸಸಿಯೇ
ಮರೆತು ಎಲ್ಲ ಚಿಂತೆ ಹೊಂಗನಸು ಕಾಣುವಂತೆ
ಮಲಗು ಹಾಯಾಗಿ ನೀ

ದೂರಿ ದೂರಿ ದುಂಡಾಲಮ್ಮ ದೂರಿ ದೂರಿ
ಲಾಲಿ ಲಾಲಿ ದುಂಡಾಲಮ್ಮಾ ಲಾಲಿ ಲಾಲಿ