ಅಯ್ಯಯ್ಯಯ್ಯೋ ಹಳ್ಳಿಮುಕ್ಕ - The Indic Lyrics Database

ಅಯ್ಯಯ್ಯಯ್ಯೋ ಹಳ್ಳಿಮುಕ್ಕ

गीतकार - Chi. Udaya Shankar | गायक - L. R. Eswari, P. B. Sreenivas | संगीत - Rajan-Nagendra | फ़िल्म - Mayor Muthanna | वर्ष - 1969

Song link

View in Roman

ಅರೆರಾರೆ ಹ್ಹಾ

ಅಯ್ಯಯ್ಯಯ್ಯೋ ಹಳ್ಳಿಮುಕ್ಕ
ಯಾವಾಗ್ ಬಂದೆ ಬೆಂಗಳೂರು ಪಕ್ಕಾ
ಎನು ಅಂದ ಎನು ಚೆಂದ
ಯಾವ ಹಳ್ಳಿ ಹೈದ

ತಿಪ್ಪರಲ್ಲಿಂದ ಟಿಕೆಟ್ ಇಲ್ದೆ ಬಂದ
ಬೆಂಗ್ಳೂರು ಹುಡ್ಗಿ ಕಂಡ ಬೆಪ್ಪಾದ
ತಿಪ್ಪರಲ್ಲಿಂದ ಟಿಕೆಟ್ ಇಲ್ದೆ ಬಂದ
ಬೆಂಗ್ಳೂರು ಹುಡ್ಗಿ ಕಂಡ ಬೆಪ್ಪಾದ ಓಹೋ

ಅಯ್ಯಯ್ಯಯ್ಯೋ ಹಳ್ಳಿಮುಕ್ಕ
ಯಾವಾಗ್ ಬಂದೇ ಬೆಂಗಳೂರು ಪಕ್ಕಾ
ಎನು ಅಂದ ಎನು ಚೆಂದ
ಯಾವ ಹಳ್ಳಿ ಹೈದ..

ಹಳ್ಳಿಯ ಬಾಳು ಸಾಕು
ಪಟ್ಟಣ ವಾಸ ಬೇಕು
ಹಳ್ಳಿಯ ಬಾಳು ಸಾಕು
ಪಟ್ಟಣ ವಾಸ ಬೇಕು
ಓದಿಲ್ಲಾ ಅರಿವಿಲ್ಲಾ ಹೇಗಿಲ್ಲಿ ಇರುವೆಯೋ ಗೊತ್ತಿಲ್ಲ

ಧನಗಲ ಕೈಬಲ್ಲ
ಸಗಣಿಯ ತಟ್ಬಲ್ಲ
ಕೂಲಿನಾಲಿ ಮಾಡ್ಕೊಂಡು ಇರಬಲ್ಲಾ..

ಹೋ ಅಯ್ಯಯ್ಯಯ್ಯೋ ಹಳ್ಳಿಮುಕ್ಕಾ
ಯಾವಾಗ್ ಬಂದೇ ಬೆಂಗಳೂರು ಪಕ್ಕಾ
ಎನು ಅಂದ ಎನು ಚೆಂದ
ಯಾವ ಹಳ್ಳಿ ಹೈದ

ಹೋ ಹಾ ಜಿಂಗಾಲಕ ಜಿಂಗಾಲಕ ಜಿಂಗಾಲಕ ಜಿಂಗಾ
ಯಾ ಯವಯವ ಯವಯ ಯಹಾ

ಪಿಲಿಪಿಲಿ ನೋಡೋವ ಕಣ್ಣುಂಟು
ಗಿಳಿಯಂತಿರುವ ಮೂಗುಂಟು
ಹೆಣ್ಣಂತೆ ತಲೆ ಜುಟ್ಟು
ಹಿಟ್ಟನು ತಿಂದ ಮೈಕಟ್ಟು

ಇಂಥಾ ಗಂಡು ಎಲ್ಲುಂಟು
ಕಟ್ಟಿಕೊಳ್ಳೋ ಭಾಗ್ಯ ಯಾರಗುಂಟು

ಅಯ್ಯಯ್ಯಯ್ಯೋ ಹಳ್ಳಿಮುಕ್ಕ
ಯಾವಾಗ್ ಬಂದೆ ಬೆಂಗಳೂರು ಪಕ್ಕಾ
ಎನು ಅಂದ ಎನು ಚೆಂದ
ಯಾವ ಹಳ್ಳಿ ಹೈದ

ತಿಪ್ಪರಲ್ಲಿಂದ ಟಿಕೆಟ್ ಇಲ್ದೆ ಬಂದ
ಬೆಂಗ್ಳೂರು ಹುಡ್ಗಿ ಕಂಡ ಬೆಪ್ಪಾದ
ತಿಪ್ಪರಲ್ಲಿಂದ ಟಿಕೆಟ್ ಇಲ್ದೆ ಬಂದ
ಬೆಂಗ್ಳೂರು ಹುಡ್ಗಿ ಕಂಡ ಬೆಪ್ಪಾದ ಓಹೋ

ಹೇ ನಿಲ್ಸ್ರೆ ಗಂಡಬೀರಿಗಳಾ
ಹೆಣ್ಣಂದೋರ್ಯಾರೆ ನಿಮ್ಮನೆಲ್ಲ
ಹೆಂಗೆ ಹೇಳೋ ದೇವ್ರೆಬಲ್ಲಾ
ಹೆಣ್ಣಂದೋರ್ಯಾರೆ ನಿಮ್ಮನೆಲ್ಲ
ಹೆಂಗೆ ಹೇಳೋ ದೇವ್ರೆಬಲ್ಲಾ
ಹರ್ಷನವಿಲ್ಲ ಕುಂಕುಮಯಿಲ್ಲ
ಗಂಡೋ ಹೆಣ್ಣೋ ತಿಳಿಯೋಲ್ಲ

ಹಳ್ಳಿ ಇಂದನೇ ನಾಡೆಲ್ಲಾ
ಹಳ್ಳಿ ಇಲ್ದಿದ್ರೆ ಹೊತ್ತಿಲ್ಲ
ಹಳ್ಳಿ ಇಂದನೇ ನಾಡೆಲ್ಲಾ
ಹಳ್ಳಿ ಇಲ್ದಿದ್ರೆ ಹೊತ್ತಿಲ್ಲ

ಹಳ್ಳಿಯೋರ್ಕಂಡು ಕಂದು
ಹಲ್ಹಲ್ ಕಿರ್ದು ಗೆಲಿಯಮಾಡಿ ನಕ್ತೀರಲ್ಲಾ
ಹೆಣ್ಣಿಯ ಘಂಟೆಯು ನಿಮ್ಮಲ್ಲ
ಫ್ಯಾಷನ್ ಕಲ್ತು ಕೆಡ್ತೀರಲ್ಲಾ
ತಿಳ್ವಲ್ಕೆ ಇಲ್ಲಾ ನಡವಳಿಕೆ ಇಲ್ಲಾ
ನಿಮ್ಮ ಓದಿಗೆ ಬೆಲೆ ಇಲ್ಲಾ
ತಂದನೆ ತಾನೆ ತಾಯಿತಯ್ಯ
ತಂದನೆ ತಾನೆ ತಾಯಿತಯ್ಯ