ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ - The Indic Lyrics Database

ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ

गीतकार - R. N. Jayagopal | गायक - S. P. Balasubrahmanyam | संगीत - Upendra Kumar | फ़िल्म - Sindhoora Thilaka | वर्ष - 1992

Song link

View in Roman

ಬೆನಕನ ನೆನೆವೆನು ಕಾರ್ಯ ತೊಡಗುವ ಮುನ್ನ
ಮೊದಲಾಲಿ ನೆನೆವೆನು ಗಣಪತಿಯಾ

ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ ಬಾನಹಕ್ಕಿ ಹಾಡುತಾವೆ
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಹಾಲಕ್ಕಿ ಹಾಡುತಾರೆ

ಹಕ್ಕಿ ಹಾಡುವ ರಾಗ ಹಾಲಕ್ಕಿ ಹಾಕುವ ತಾಳ
ಹಕ್ಕಿ ಹಾಡುವ ರಾಗ ಹಾಲಕ್ಕಿ ಹಾಕುವ ತಾಳ
ಸೇರಲು ತಕಧಿಮಿ ತಕಧಿಮಿ ತಕಧಿಮಿ ತಕಜನು

ಊರಿಗೆ ಒಂದು ಗುಡಿಯು ಬೇಕು ಹೌದಯ್ಯ ಹೌದಯ್ಯ
ಮನೆಗೆ ಒಂದು ಬಾಗಿಲು ಬೇಕು ರಂಗಯ್ಯ ಹೌದಯ್ಯ
ಊರಿಗೆ ಒಂದು ಗುಡಿಯು ಬೇಕು ಮನೆಗೆ ಒಂದು ಬಾಗಿಲು ಬೇಕು
ಶುಭ ಕಾರ್ಯಕ್ಕೆ ಹಾಲಕ್ಕಿ ಬರಲೇಬೇಕು
ಥಳಂಗು ತಕಧಿಮಿ ತೋಂ
ಶುಭ ಕಾರ್ಯಕ್ಕೆ ಹಾಲಕ್ಕಿ ಬರಲೇಬೇಕು
ದಿಬ್ಬಣ ಕುಶಿಯಲಿ ಸಾಗಲೇಬೇಕು

ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ ಬಾನಹಕ್ಕಿ ಹಾಡುತಾವೆ
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಹಾಲಕ್ಕಿ ಹಾಡುತಾರೆ

ಗಂಡು ಹೆಣ್ಣು ಮದುವೆಯ ಜೋಡಿ ಹೌದಯ್ಯ ಹೌದಯ್ಯ
ಗಾಡಿಯ ಎಲೆಯುವ ಜೋಡಿಯು ನೋಡಿ ರಂಗಯ್ಯ ಹೌದಯ್ಯ
ಗಂಡು ಹೆಣ್ಣು ಮದುವೆಯ ಜೋಡಿ ಗಾಡಿಯು ಎಳೆಯುವ ಜೋಡಿಯ ನೋಡಿ
ಮನಸೊಂದಾಗಿ ಹರುಷದಿ ಬಾಳಿರಿ ಕೂಡಿ
ಥಳಂಗು ತಕಧಿಮಿ ತೋಂ
ಮನಸೊಂದಾಗಿ ಹರುಷದಿ ಬಾಳಿರಿ ಕೂಡಿ
ಮುಂದಿನ ವರುಷದಿ ಜೋಗುಳ ಹಾದಿ

ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ ಬಾನಹಕ್ಕಿ ಹಾಡುತಾವೆ
ಆಹಾ ಆಹಾ ಆಹಾ ಅರೆ
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಹಾಲಕ್ಕಿ ಹಾಡುತಾರೆ
ಓಯ್ ಓಯ್ ಓಯ್ ಓಯ್