ಆಸೆ ಹೊಲೆಯ ಉಕ್ಕಿ ಹರಿದೈತೆ - The Indic Lyrics Database

ಆಸೆ ಹೊಲೆಯ ಉಕ್ಕಿ ಹರಿದೈತೆ

गीतकार - Doddarangegowda | गायक - K. S. Chithra | संगीत - Sangeetha Raja | फ़िल्म - Panchama Veda | वर्ष - 1990

Song link

View in Roman

ಲಾ ಲಾ ಲಾ ಲಾಲಾ ಲಾಲಾಲಾಲಾ
ಆಸೆ ಹೊಲೆಯ ಉಕ್ಕಿ ಹರಿದೈತೆ

ಆಸೆ ಹೊಲೆಯ ಉಕ್ಕಿ ಹರಿದೈತೆ
ಬಾಳ ಧೋನಿ ತೇಲಿ ಸಾಗಿದೆ
ಹೊಸ ಕನಸು ಮೂಡಿ ಬಂದೈತೆ
ಪ್ರೀತಿ ಹಕ್ಕಿ ರೆಕ್ಕೆ ಇಕ್ಕಿ ಹಾರೈತೆ

ಆಸೆ ಹೊಲೆಯ ಉಕ್ಕಿ ಹರಿದೈತೆ

ಉಪ್ಪರಿಗೆ ಮನೆ ಮುಂದೆ ಚಪ್ಪರವ ಹಾಕೈತೆ
ಅಂಗಲದ ಹೊಂಬಾಳೆ ಹೂವು ನಗುತೈತೆ
ಎಲ್ಲೆಲ್ಲೂ ಹಸಿ ಹಸಿರು ತೋರಣವ ತೂಗೈತೆ
ಮುತ್ತೈದೆ ಮನ್ನೆಯರ ಶಾಸ್ತ್ರ ನಡೆದೈತೆ
ಈ ಜೀವ ಜುಮ್ಮೆಂದು ಹಾಡಿದೆ
ಈ ಭಾವ ನೂರಾಗಿ ಮಿಂಚೈತೆ
ಈ ಜೀವ ಜುಮ್ಮೆಂದು ಹಾಡಿದೆ
ಈ ಭಾವ ನೂರಾಗಿ ಮಿಂಚೈತೆ

ಆಸೆ ಹೊಲೆಯ ಉಕ್ಕಿ ಹರಿದೈತೆ

ಬೀಗರೆಲ್ಲ ಬರುವಾಗ ವಾಲಗವ ಓಡೈತೆ
ಮಂಗಳದ ಕಂಕಣದ ಭಾಗ್ಯ ಬಯಸಿದೆ
ಹರಿವಾಣ ತುಂಬೆಲ್ಲ ಎಲೆ ಅಡಿಕೆ ತುಳುಕೈತೆ
ಮುತ್ತಿನ ಹಸೆಮನೆಗೆ ಹೆಣ್ಣ ಕರೆದೈತೆ
ಕಣ್ಣಾಗೆ ಸಂತೋಷ ಹೊಳೆದೈತೆ
ಮನದಾಗೆ ಸಂಬಂಧ ಬೆಸೆದೈತೆ
ಕಣ್ಣಾಗೆ ಸಂತೋಷ ಹೊಳೆದೈತೆ
ಮನದಾಗೆ ಸಂಬಂಧ ಬೆಸೆದೈತೆ

ಆಸೆ ಹೊಲೆಯ ಉಕ್ಕಿ ಹರಿದೈತೆ
ಬಾಳ ಧೋನಿ ತೇಲಿ ಸಾಗಿದೆ
ಹೊಸ ಕನಸು ಮೂಡಿ ಬಂದೈತೆ
ಪ್ರೀತಿ ಹಕ್ಕಿ ರೆಕ್ಕೆ ಇಕ್ಕಿ ಹಾರೈತೆ

ಲಾ ಲಾ ಲಾ ಲಾಲಾ ಲಾಲಾಲಾಲಾ..