ನೀ ತಂದ ಪ್ರೀತಿ - The Indic Lyrics Database

ನೀ ತಂದ ಪ್ರೀತಿ

गीतकार - M. N. Vyasa Rao | गायक - S. P. Balasubrahmanyam, K. S. Chithra | संगीत - Sangeetha Raja | फ़िल्म - Panchama Veda | वर्ष - 1990

Song link

View in Roman

ನೀ ತಂದ ಪ್ರೀತಿ ಬೆಳಕಾಗಿದೆ ಬೆಳಕಾಗಿದೆ
ಈ ಬಾಳ ದಾರಿ ತೆರೆದಿದೆ
ಮನದಾಸೆ ನೂರಿದೆ ಕೈ ಚಾಚಿ ಬೇಡಿದೆ
ಮನದಾಸೆ ನೂರಿದೆ ಕೈ ಚಾಚಿ ಬೇಡಿದೆ
ನಿನಗಾಗಿ ನಾ ಕಾಯುವೆ ಬೇಯುವೆ ನೋಯುವೆ

ನೀ ತಂದ ಪ್ರೀತಿ ಬೆಳಕಾಗಿದೆ ಬೆಳಕಾಗಿದೆ

ಹೃದಯದಲಿ ಬಂದಿಸಿ ನೆಲೆಯೊಂದು ನೀಡಿದೆ
ಹಗಲಿರುಳು ಸಂದಿಸಿ ಮಲವನ್ನೆ ಉಡಿದೆ
ಅರಳಿತು ಜೀವ ಹೂವಾಗುತ ಮನಸೋತು ನಾ ಬಂದೆ
ಉಲ್ಲಾಸ ನೀ ತಂದೆ ಸಂತೋಷ ನೀ ತಂದೆ

ನೀ ತಂದ ಪ್ರೀತಿ ಬೆಳಕಾಗಿದೆ ಬೆಳಕಾಗಿದೆ

ಬಿರು ಬಯಲ ಬಾಳಿಗೆ ತಂಪೆರೆದು ಬೀಸಿಹೆ
ಸುಡು ಬೆಂಕಿ ದಾಳಿಗೆ ಎದುರಿಂದ ನಾನಿಹೆ
ಸಹನೆಯೇ ಈಗ ಮೈ ತುಂಬಿದೆ
ನೆನಪಾಗಿ ನೀನು ನಿಂತು
ಅಂದೆಕೆ ನೀ ಬಂದೆ ಇಂದೇಕೆ ನಾ ನೊಂದೆ

ನೀ ತಂದ ಪ್ರೀತಿ ಬೆಳಕಾಗಿದೆ ಬೆಳಕಾಗಿದೆ
ಈ ಬಾಳ ದಾರಿ ತೆರೆಯಲಾಗಿದೆ
ಮನದಾಸೆ ನೂರಿದೆ ಕೈ ಚಾಚಿ ಬೇಡಿದೆ
ಮನದಾಸೆ ನೂರಿದೆ ಕೈ ಚಾಚಿ ಬೇಡಿದೆ
ನಿನಗಾಗಿ ನಾ ಕಾಯುವೆ ಬೇಯುವೆ ನೋಯುವೆ