ಮಲೆನಾಡಿನ ಮಿಂಚಿನ ಬಲ್ಲಿ - The Indic Lyrics Database

ಮಲೆನಾಡಿನ ಮಿಂಚಿನ ಬಲ್ಲಿ

गीतकार - S. Narayan | गायक - S. P. Balasubrahmanyam, K. S. Chithra | संगीत - Rajesh Ramanath | फ़िल्म - Thavarina Thottilu | वर्ष - 1996

Song link

View in Roman

ಮಲೆನಾಡಿನ ಮಿಂಚಿನ ಬಲ್ಲಿ
ಸಹ್ಯಾದ್ರಿಯ ಸಂಗಮದಲ್ಲಿ
ಹೊಸತನ ತೋರಿದಳು ಜೋಗದ ಸಿರಿಯವಳು
ಹೊಸತನ ತೋರಿದಳು ಜೋಗದ ಸಿರಿಯವಳು
ಮಲೆನಾಡಿನ ಮಿಂಚಿನ ಬಲ್ಲಿ
ಸಹ್ಯಾದ್ರಿಯ ಸಂಗಮದಲ್ಲಿ
ಚೆಲುವನ ವರಿಸಿದಳು ಒಲವನು ಸುರಿದಳು
ಚೆಲುವನ ವರಿಸಿದಳು ಒಲವನು ಸುರಿದಳು

ಹೂವ ದಿಂಡಿನಲಿ ಮಾವ ಮಲಗಿರುವೆ
ಜಡೆಯ ಕುಚ್ಚಿನಲಿ ಒಡೆಯ ನೀನಿರುವೆ
ಊಊ ಬೆಡಗಿಯೇ ನೆರಿಗೆಯ ನೋಡು
ಈ ರಸಿಕನ ಪ್ರಣಯದ ಗೂಡು
ನಾಚಿಕೆ ತಾಂಡವನೆ ಕಾಮನ ಕಣ್ಣವನೆ
ಮನ್ಮಥ ಕುಲದವನೇ ಭೀಮನ ಅಳಿಮಯನೇ

ಮಲೆನಾಡಿನ ಮಿಂಚಿನ ಬಲ್ಲಿ
ಸಹ್ಯಾದ್ರಿಯ ಸಂಗಮದಲ್ಲಿ

ಕಣ್ಣ ರೆಪ್ಪೆಯಲಿ ನಿನ್ನ ಮುಚ್ಚಿದುವೆ
ಜೀವ ಬುತ್ತಿಯಲಿ ದಿನವು ತುತ್ತಿದೆವೆ
ಊ ಸುಂದರ ಕನಸಿನ ಕನ್ನಡಿ
ನೀ ಬಾರೆದೆಯಾ ಅದರಲಿ ಮುನ್ನುಡಿ
ಮಲ್ಲಿಗೆ ಮೊಗದವಳೇ ಮುತ್ತಿನ ನಗೆಯವಳೇ
ಜೋಳದ ತೇನೆಯವಳೆ ಜೋಗದ ಸಿರಿಯವಳೆ

ಮಲೆನಾಡಿನ ಮಿಂಚಿನ ಬಲ್ಲಿ
ಸಹ್ಯಾದ್ರಿಯ ಸಂಗಮದಲ್ಲಿ
ಹೊಸತನ ತೋರಿದಳು ಜೋಗದ ಸಿರಿಯವಳು
ಚೆಲುವನ ವರಿಸಿದಳು ಒಲವನು ಸುರಿದಳು