ನೀ ನನ್ನೊಳಗೇ ನಾ ನಿನ್ನೊಳಗೇ - The Indic Lyrics Database

ನೀ ನನ್ನೊಳಗೇ ನಾ ನಿನ್ನೊಳಗೇ

गीतकार - K. M. Raghu | गायक - Santhosh Venky, Lakshmi | संगीत - Harshavardhan Raj | फ़िल्म - Parasanga | वर्ष - 2018

Song link

View in Roman

ನೀ ನನ್ನೊಳಗೇ ನಾ ನಿನ್ನೊಳಗೇ
ನಾವಿರುವ ಯೆಂದು ಹೀಗೇ
ನೀ ನನ್ನೊಳಗೇ ನಾ ನಿನ್ನೊಳಗೇ
ನಾವಿರುವ ಸವಿ ಘಳಿಗೆ

ಹೂವ ದುಂಬಿ ಸೇರಿದ ಹಾಗೆ ನೀನಿರುವೆ
ಈ ಸಿಹಿಯ ಜೇನು ನಿಂದೆನೆ
ಹೂವ ದುಂಬಿ ಸೇರಿದ ಹಾಗೆ ನಾನಿರುವೆ
ಈ ಸಿಹಿಯ ಜೇನು ನಿಂದೆನೆ

ನೀ ನನ್ನೊಳಗೇ ನಾ ನಿನ್ನೊಳಗೇ
ನಾವಿರುವ ಯೆಂದು ಹೀಗೇ
ನೀ ನನ್ನೊಳಗೇ ನಾ ನಿನ್ನೊಳಗೇ
ನಾವಿರುವ ಸವಿ ಘಳಿಗೆ

ಸಂಜೆ ಹೊತ್ತಲ್ಲಿ ಚಂದದ ಬೆಳಕಲಿ
ನಿನ್ನ ಅಂದ ಕಂಡೆ
ನಾ ನನ್ನೆ ಮರೆತೆ ನಿನ್ನಲಿ ಬೆರೆತೆ
ಮಾತು ಮರೆತೆ ಹೋದೆ
ನಾ ನನ್ನೆ ಮರೆತೆ ನಿನ್ನಲಿ ಬೆರೆತೆ
ಮಾತು ಮರೆತೆ ಹೋದೆ

ನನ್ನ ಯೌವ್ವನ ನಿನ್ನ ಕೈಯಲಿ ಕಾಲ ಕಳೆಯಬೇಡ
ನೀ ಚುಂಬಿಸು ನೀ ಮುದ್ದಿಸು ನನ್ನ ಮೈ ಮರೆಸು |೨|

ಯೌವ್ವನವೆಂಬ ಅಲೆಯು ಉಕ್ಕಿದೆ ಆಸೆ ಗರಿಯ ಬಿಚ್ಚಿ
ಸೋತೈತೆ ಕಾಡೈತೆ ದಾಹ ತೀರುತೈತೆ |2|

ಸಿದ್ಧಿಯ ಕಾಲ ಬುದ್ಧಿಯ ಕಳೆದಿದೆ ತನ್ನ ತಾನು ಕಂಡು
ಝೇಂಕಾರ ಓಂಕಾರ ಪ್ರೇಮ ಚಕ್ರದೊಳಗೆ |2|

ನೀ ನನ್ನೊಳಗೇ ನಾ ನಿನ್ನೊಳಗೇ ನಾವಿರುವ ಯೆಂದು ಹೀಗೇ
ನೀ ನನ್ನೊಳಗೇ ನಾ ನಿನ್ನೊಳಗೇ ನಾವಿರುವ ಸವಿ ಘಳಿಗೆ