ಎಮ್ಮಾ ಮನೆಯಂಗಳದಿ - The Indic Lyrics Database

ಎಮ್ಮಾ ಮನೆಯಂಗಳದಿ

गीतकार - V. Seetharamayya | गायक - S. Janaki | संगीत - G. K. Venkatesh | फ़िल्म - Kulavadhu | वर्ष - 1963

Song link

View in Roman

ಎಮ್ಮಾ ಮನೆಯಂಗಳದಿ ಬೆಳೆದೊಂದು ಹೂವನ್ನು
ನಿಮ್ಮ ಮಡಿಲೊಳಗಿರಲು ತಂದಿರುವೆವು
ಕೊಲ್ಲಿರಿ ನಗುವಣ್ಣು ಎಮ್ಮ ಮನೆ ಬೆಳಕನ್ನು
ನಿಮ್ಮ ಮನೆಯನು ತುಂಬಲು ಒಪ್ಪಿಸುವೆವು

ಎಮ್ಮಾ ಮನೆಯಂಗಳದಿ ಬೆಳೆದೊಂದು ಹೂವನ್ನು

ಹೆತ್ತವರ ಮನೆಯಿಂದ ಹೊರಗಾದೆ ನೀ ಮಗಳೇ
ಹೆತ್ತವರ ಮನೆಯಿಂದ ಹೊರಗಾದೆ ನೀ ಮಗಳೇ
ಈ ಮನೆಯೇ ಈ ಇವರೇ ನಿನ್ನವರು ಮುಂದೆ
ಇವರೆ ತಾಯಿಗಳು ಸಖರು ಭಾಗ್ಯವನು ಬೆಳಗುವರು
ಇವರ ದೇವರೇ ನಿನ್ನ ದೇವರುಗಳು

ಎಮ್ಮಾ ಮನೆಯಂಗಳದಿ ಬೆಳೆದೊಂದು ಹೂವನ್ನು
ನಿಮ್ಮ ಮಡಿಲೊಳಗಿರಲು ತಂದಿರುವೆವು

ನಿಲ್ಲು ಕಣ್ಣೊರೆಸಿಕೋ ನಿಲ್ಲು ತಾಯಿ ಹೋಗುವೆವು
ನಿಲ್ಲು ಕಣ್ಣೊರೆಸಿಕೋ ನಿಲ್ಲು ತಾಯಿ ಹೋಗುವೆವು
ತಾಯಿ ತಂದೆಯಿರ ಕೊಳ್ಳಿರಿ ಇವಳ
ಎರಡು ಮನೆಗಳ ಹೆಸರು.....ಉಳಿವಂತೆ
ತುಂಬಿದಾಯುಷ್ಯದಲಿ ಬಾಳಿ ಬದುಕು

ಎಮ್ಮಾ ಮನೆಯಂಗಳದಿ ಬೆಳೆದೊಂದು ಹೂವನ್ನು
ನಿಮ್ಮ ಮಡಿಲೊಳಗಿರಲು ತಂದಿರುವೆವು
ಕೊಲ್ಲಿರಿ ನಗುವಣ್ಣು ಎಮ್ಮ ಮನೆ ಬೆಳಕನ್ನು
ನಿಮ್ಮ ಮನೆಯನು ತುಂಬಲು ಒಪ್ಪಿಸುವೆವು
ಎಮ್ಮಾ ಮನೆಯಂಗಳಡಿ ಬೆಳೆದೊಂದು ಹೂವನ್ನು....