ಯುಗ ಯುಗಾದಿ ಕಳೆದರು - The Indic Lyrics Database

ಯುಗ ಯುಗಾದಿ ಕಳೆದರು

गीतकार - DR. Bendre | गायक - S. Janaki | संगीत - G. K. Venkatesh | फ़िल्म - Kulavadhu | वर्ष - 1963

Song link

View in Roman

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ
ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತ್ತಿದೆ

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತ್ತಿದೆ
ಹೊಸತು ಹೊಸತು ತರುತ್ತಿದೆ

ಹೊಂಗೆ ಹೂವ ತೊಂಗಲಳ್ಳಿ
ಭೃಂಗದ ಸಂಗೀತ ಕೇಳಿ
ಹೊಂಗೆ ಹೂವ ತೊಂಗಲಳ್ಳಿ
ಭೃಂಗದ ಸಂಗೀತ ಕೇಳಿ

ಮತ್ತೇ ಕೆಲ ಬರುತಿದೆ
ಬೇವಿನ ಕಹಿ ಬಲಿನಾಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತ್ತಿದೆ

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತ್ತಿದೆ

ವರುಷಕೊಂಡು ಹೊಸತು ಜನ್ಮ
ಹರುಷಕೊಂಡು ಹೊಸತು ನೆಲೆಯು
ವರುಷಕೊಂಡು ಹೊಸತು ಜನ್ಮ
ಹರುಷಕೊಂಡು ಹೊಸತು ನೆಲೆಯು

ಅಖಿಲ ಜೀವಜಾತಕೆ
ಒಂದೆ ಒಂದು ಜನ್ಮದಲಿ
ಒಂದೆ ಬಲ್ಯ ಒಂದೆ ಹರೆಯ
ನಮಗದಷ್ಟೇ ಏತಕೋ

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತ್ತಿದೆ

ನಿದ್ದೆಗೊಮ್ಮೆ ನಿತ್ಯ ಮರಣ
ಯೆಡ್ಡ ಸಲ ನವೀನ ಜನನಾ
ನಮಗೇ ಬರದು
ಎಲೆ ಸನತ್ಕುಮಾರ ದೇವಾ
ಎಲೆ ಸಾಹಸಿ ಚಿರಂಜೀವಿ
ನಿನಗೆ ಲೀಲೆ ಸೇರದು

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ