ವಿಧಿ ಆಟವನು ಬಲ್ಲವರಾರು - The Indic Lyrics Database

ವಿಧಿ ಆಟವನು ಬಲ್ಲವರಾರು

गीतकार - Mahadeva Banakara | गायक - Chandrika Gururaj | संगीत - Agashthya | फ़िल्म - Rashmi | वर्ष - 1994

Song link

View in Roman

ವಿಧಿ ಆಟವನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು

ವಿಧಿ ಆಟವನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು

ಮಸಣದ ಹೂವು ನಾನಾಗಿರುವೆ
ತಿಳಿ ಬೆಳದಿಂಗಳು ನೀನಾಗಿರುವೆ
ಸವಿನಾ ಉಡಿಯಾಲು ನಾನಿರುವಾಗ
ಬದುಕಿಸಿದವರನು ಹುಡುಕುವನು
ಹೊರಗಣ್ಣಿಗೆ ನಾ ಕಾಣದೆ ಇರುವೆ
ನಿನ್ನತ್ಮದಲಿ ನಾ ಅಡಗಿರುವೆ
ನಾನೇ ಅವಳು ಎನ್ನಲೇನು
ವಿಧವ ಎಂಬುದ ಕ್ಷಮಿಸುವ ನೀನು

ವಿಧಿ ಆಟವನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು

ಮಾವಿನ ಮರದಲಿ ಬೇವಿನ ಫಲಗಳು
ವಿಷವನು ಕಾರೂತ ಮೆರೆಯುವುದು
ಜನ್ಮವ ಕೊಟ್ಟಿಹ ತಂದೆ ತಾಯಿಗೆ
ಮಕ್ಕಳು ದ್ರೋಹ ಬಗೆದಿಹರು
ಎಮ್ಮೆಯ ಅಣ್ಣ ನಿನಗಾಮೃತವು
ಮನೆ ಮಕ್ಕಳಿಗೇ ಅದು ವಿಷವು
ಅನ್ನದ ಅಗುಲಲಿ ಮೋಕ್ಷವಂತೆ
ನೀತಿಯ ಬಿಟ್ಟರೆ ಅದು ವಿಷವಂತೆ

ವಿಧಿ ಆಟವನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು

ಮಾರನ್ನದ ಹೂವು ಮಕರಂದದಲಿ
ಜೇನಿನ ಹೊಳೆಗಳು ಹರಿಯುವುದು
ಚಿನ್ನದ ಗಣಿಯು ಮನ್ನಗಿಹುದು
ಮಣ್ಣಿನ ಗಣಿಯು ಹೊನ್ನಗಿಹುದು
ತ್ಯಾಗವ ಮಾಡಿದೇ ನಾ ಬದುಕಿರಲು
ಭೋಗವ ಬಯಸುವೆ ನೀ ಬದುಕಿರಲು
ಅಂದು ಎಮ್ಮಯ ಆಸರೆ ಇವಗೆ
ಮೂಡು ದೇವರೇ ಆಗಿಹನೆಮಗೆ

ವಿಧಿ ಆಟವನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು