ಭೂಮಿಯಲಿ ಚಂದಿರನ - The Indic Lyrics Database

ಭೂಮಿಯಲಿ ಚಂದಿರನ

गीतकार - K. V. Raju | गायक - S. Janaki | संगीत - Upendra Kumar | फ़िल्म - Belli Modagalu | वर्ष - 1992

Song link

View in Roman

ಭೂಮಿಯಲಿ ಚಂದಿರನ
ಭೂಮಿಯಲಿ ಚಂದಿರನ ಬೆಳದಿಂಗಳ ಲಾಲಿ
ಉಸಿರಾ ಬೆಸುಗೆ ಗಾಳಿ ಹಾಡು ಲಾಲಿ
ಜೋ ಜೋ ಮುದ್ದು ಲಾಲಿ ಮೆಲ್ಲಗೆ

ಭೂಮಿಯಲಿ ಆ ಆ ಚಂದಿರನ ಆ ಆ
ಬೆಳದಿಂಗಳ ಲಾಲಿ ಉಸಿರಾ ಬೆಸುಗೆ

ಆ ಆಆಆಆಆಆಆಆಆಆಆಆ

ಓಹೋ ಹಾಗಲೆಲ್ಲಾ ನಿನಗಾಗಿ ಬರಿದೆ ಕಾಡೇನು
ಕರುಳಾಗಿ ಇರುಳೆಲ್ಲ ಹೊಸ ಲಾಲಿ ನೆಯ್ದೇನು
ಓಹೋ ಅನುರಾಗ ಅನುಗಾಲ ನಿನಗೆ ಆಗಲಿ
ಯುಗವೆಲ್ಲ ಸುಖವಾಗಿ ನಿನ್ನ ಸೇರಿ ಸಾಗಲಿ
ಇಳೆಯದೋ ಹಸಿರಲ್ಲಿ ನಿನ್ನ ಜೀವ ನಗಲಿ
ಹಿತವಾದ ಬೆಳಕೆಲ್ಲ ನಿನ್ನ ಹರಸಿ ಬರಲಿ

ಗಾಳಿಯಲಿ ತೇಲಿರುವ ಗಾಳಿಯಲಿ ತೇಲಿರುವ
ಸಿಹಿ ಮುತ್ತಿನ ಲಾಲಿ ನಿನಗೆ ಸಿಗಲಿ

ಓಹೋ ಬದುಕಲ್ಲಿ ಬಿರುಗಾಳಿ ತಾನಾ ಕೈ ಚಾಚಿದೆ
ಒಡಲೆಂಬ ಅಂದಲಾಡಿ ನಿನ್ನ ಮುಖವ ಕಾಣದೆ
ಓಹೋ ನಿನಗಾಗಿ ಕಂಬನಿಯ ಉಯಿಲೆ ಸಾಗಿದೆ
ಬರಿದಾದ ಒಡಲಲ್ಲಿ ಉಸಿರಾಟ ಎಲ್ಲಿದೆ
ಅನುಬಂಧ ಕರುಳಂದ ನಮಗೇಂದು ಇರಲಿ
ಕಡಲಂತೆ ನದಿಯಂತೆ ಯುಗಯುಗವು ಸಿಗಲಿ

ತಾರೆಗಳ ಲೋಕಗಳ ತಾರೆಗಳ ಲೋಕಗಳ
ಸಿಹಿಮುತ್ತಿನ ಲಾಲಿ ನಿನಗೆ ಸಿಗಲಿ
ಗಾಳಿ ಹಾಡು ಲಾಲಿ ಜೋ ಜೋ ಮುದ್ದು ಲಾಲಿ ಮೆಲ್ಲಗೆ
ತಾರೆಗಳ ಆಯಾ ಲೋಕಗಲಾ ಆ
ಸಿಹಿಮುತ್ತಿನ ಲಾಲಿ ನಿನಗೆ ಸಿಗಲಿ