ಲೋಕವನೇ ತೂಗಿರುವಾ - The Indic Lyrics Database

ಲೋಕವನೇ ತೂಗಿರುವಾ

गीतकार - K. V. Raju | गायक - Mano | संगीत - Upendra Kumar | फ़िल्म - Belli Modagalu | वर्ष - 1992

Song link

View in Roman

ಲೋಕವನೇ ತೂಗಿರುವಾ ಲೋಕವನೇ ತೂಗಿರುವಾ
ಭೂತಯ್ಯ ಲಾಲಿ ಕರುಳ ಕೂಡಿಗೆ
ಗಾಳಿ ಹಾಡು ಲಾಲಿ ಜೋ ಜೋ ಮುದ್ದು ಲಾಲಿ ಮೆಲ್ಲಗೆ

ಲೋಕವನೇ ಆ ಆ ತೂಗಿರುವ ಆ ಆ
ಭೂತಯ್ಯ ಲಾಲಿ ಕರುಳ ಕೂಡಿಗೆ

ಓಹೋ ಹಾಗಲೆಲ್ಲಾ ನಿನಗಾಗಿ ಬರಿದೆ ಕಾಡೇನು
ಕರುಳಾಗಿ ಇರುಳೆಲ್ಲ ಹೊಸ ಲಾಲಿ ನೆಯ್ದೇನು
ಓಹೋ ಅನುರಾಗ ಅನುಗಾಲ ನಿನಗೆ ಆಗಲಿ
ಯುಗವೆಲ್ಲ ಸುಖವಾಗಿ ನಿನ್ನ ಸೇರಿ ಸಾಗಲಿ
ಇಳೆಯದೋ ಹಸಿರಲ್ಲಿ ನಿನ್ನ ಜೀವ ನಗಲಿ
ಹಿತವಾದ ಬೆಳಕೆಲ್ಲ ನಿನ್ನ ಹರಸಿ ಬರಲಿ

ಗಾಳಿಯಲಿ ಆ ಆ ತೇಲಿರುವ ಆ ಆ
ಗಾಳಿಯಲಿ ತೇಲಿರುವ ಸಿಹಿ ಮುತ್ತಿನ ಲಾಲಿ
ನಿನಗೆ ಸಿಗಲಿ

ಓಹೂ ಋಣವಾಗಿ ಉಡಿ ತುಂಬಿ ಕರುಳ ಕಡೆ ನೀ
ಒಡಲಲ್ಲೆ ವಿಷನುಂಗಿ ಉಸಿರಾಗಿ ನಿಂತೇ ನೀ
ಓಹೋ ಉರಿ ಬೆಂಕಿ ಮನೆ ತುಂಬಿ ಮಗಳೇ ಆದೆ ನೀ
ಬರಿದಾದ ಮನ ತುಂಬೋ ಅನುರಾಗ ಬಂದಿ ನೀ
ನವತಾರೆ ನಡುವಳ್ಳಿ ನೀನ ಮಾತೇ ಇರಲಿ
ನವಮಾಸದ ಒಡಲೆಲ್ಲಾ ನಿನ್ನ ರೂಪ ಹೆರಲಿ
ಕಂಡಿರದ ಕೇಳಿರದ ಕಂಡಿರದ ಕೇಳಿರದ
ಜಗ ತೂಗೂವ ಲಾಲಿ ನಿನಗೆ ಸಿಗಲಿ

ಗಾಳಿ ಹಾಡು ಲಾಲಿ ಜೋ ಜೋ ಮುದ್ದು ಲಾಲಿ ಮೆಲ್ಲಗೆ
ಕಂಡಿರದ ಕೇಳಿರದ ಕಂಡಿರದ ಕೇಳಿರದ
ಜಗ ತೂಗೂವ ಲಾಲಿ ನಿನಗೆ ಸಿಗಲಿ