ನೂರು ಹೆಣ್ಣು ಕಂಡು ನಾನು - The Indic Lyrics Database

ನೂರು ಹೆಣ್ಣು ಕಂಡು ನಾನು

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Neenu Nakkare Haalu Sakkare | वर्ष - 1991

Song link

View in Roman

ನೂರು ಹೆಣ್ಣು ಕಂಡು ನಾನು
ಬೇಡ ಯೆಂದು ಓಡಿ ಬಂತು
ನಿನ್ನ ಕಂಡೆ ಕಲ್ಲು ಸಕ್ಕರೆ
ನೂರು ಕಣ್ಣು ಸಾಲದಯ್ಯ
ನಿನ್ನ ಅಂದ ನೋಡಲೆಂದು
ಎಂಥಾ ಚಂದ ನೀನು ನಕ್ಕರೆ

ನನಸೆಯು ಪೂರೈಸಿತು ನಿನ್ನನ್ನು ಕಂಡಾಗಲೆ
ಆನಂದದೆ ತೇಲಾಡಿದೆ ನೀನಿಲ್ಲಿ ಬಂದಾಗಲೆ

|ನೂರು ಹೆಣ್ಣು ……………..ನೀನಿಲ್ಲಿ ಬಂದಾಗಲೆ|

ಈ ಬೊಂಬೆಯ ರಂಭೆಯ್ಯ
ನಿಂಬೆಯ ಬಣ್ಣದ ಹೆಣ್ಣ ನೋಡುತಾ
ಕಂಗಾಲು ಮೋಹ ತುಂಬಲು
ಒಲವ ಕವಿತೆ ಬರೆದೆ
ಹಾದಿ ಹಾದಿ ನಲಿದೇ

ಓಓ ಗೆಳೆಯನೇ ರಸಿಕನೇ
ಚೆಲುವನೆ ನಿನ್ನನು ನೋಡಿದಾಗಳೆ
ನನ್ನೆದೆ ಹಾದಿತಾಗಳೇ
ಇವನೆ ಇನಿಯನೆಂದು ಸೇರು ಬೇಗ ಯೆಂದು

ಮೊದಲು ನಿನ್ನನ್ನು ನೋಡಿದಾಗಲೆ ಕೂಗುವಾಸೆ ಬಂತು
ನಿನ್ನ ನನ್ನೋರು ಎಂದು ಆಗಲೇ ಹೇಳುವಾಸೆ ಆಯ್ತು

ನನಸೆಯು ಪೂರೈಸಿತು ನಿನ್ನನ್ನು ಕಂಡಾಗಲೆ
ಆನಂದದೆ ತೇಲಾಡಿದೆ ನೀನಿಲ್ಲಿ ಬಂದಾಗಲೆ

|ನೂರು ಹೆಣ್ಣು ಕಂಡು ........ ನೀನು ನಕ್ಕರೆ|

ಹೂ ಬೆಳ್ಳಿಯ ಅಂಚಿನ ಮುಗಿಲಿನ
ಮೆತ್ತೆಯ ಮೇಲೆ ತೇಲುತ
ಲೋಕವ ನೋಡುವಾಸೆಯು
ಇನಿಯ ಬರುವೆನು ತನುವ ಬಲಸಿ ನೀನು

ಊ ಪ್ರಿಯಾ ಸುಮಾ ನಿರುಪಮಾ
ಅನುಪಮ ಸೋತೇನು ನಿನ್ನ ಮೋಹಕೆ
ಜೆನಿನಾ ಸಿಹಿಯ ಮಾತಿಗೆ
ನೆರಳಿನಂತೆ ಹಿಂದೆ ಸೇರಿ ಬಂದೆ ಇಂದು

ಇಂದು ನೀನಂದ ಮಾತು ಕೇಳಲು
ತನುವು ಅರಳಿ ಹೊಯ್ತು
ಚಿನ್ನ ನಿನ್ನಂದ ನೋಡಿದಾಗಳೆ
ಮನವು ಕೆರಳಿ ಹೊಯ್ತು

ಆನಂದದೆ ತೇಲಾಡಿದೆ ನೀನಿಲ್ಲಿ ಬಂದಾಗಲೆ
ನನಸೆಯು ಪೂರೈಸಿತು ನಿನ್ನನ್ನು ಕಂಡಾಗಲೆ

|ನೂರು ಹೆಣ್ಣು ಕಂಡು ........ ನೀನು ನಕ್ಕರೆ|