https://youtu.be/MSpGs7fotG0 - The Indic Lyrics Database

https://youtu.be/MSpGs7fotG0

गीतकार - Hamsalekha | गायक - Mano | संगीत - Hamsalekha | फ़िल्म - Sipayi | वर्ष - 1996

Song link

View in Roman

ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ ಎಂದು ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ ಎಂದು ಹೀಗೆ
ನಗುವಂತೆ ಕಾಣುತಾರೆ
ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ
ಹಾಡಾಗಿ ಬಾಳುತಾರೆ

ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ ಎಂದು ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ ಎಂದು ಹೀಗೆ

ಅತ್ತು ನಂಬಿಕೊಂಡು ಬಾಳುತಾರೆ
ಜೀವ ಮಾನವೆಲ್ಲಾ ಕಾಯುತಾರೆ
ಆಗದ ಹೋಗದ ಅಂಜಿಕೆ
ಎಂದು ಇವರಿಗಿಲ್ಲ

ಚಂದಮಾಮನನ್ನು ಕೂಗುತಾರೆ
ಎದೆ ನೋವನ್ನೆಲ್ಲ ಹೇಳುತ್ತಾರೆ
ಕಾಣದು ಕೆಳದು ಯಾರಿಗೂ
ಇವರ ಚಿಂತೆಯಲ್ಲ

ಮೆಚ್ಚಿದರೆ ಮಕ್ಕಳಂತೆ ಮೆಚ್ಚುವರು
ಹುಚ್ಚರಂತೆ ಪ್ರೀತಿಸುತ ಬಾಳುವರು

ನಗುವಂತೆ ಕಾಣುತಾರೆ
ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ
ಹಾಡಾಗಿ ಬಾಳುತಾರೆ

ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ ಎಂದು ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ ಎಂದು ಹೀಗೆ

ಬೀಸೋ ಗಾಳಿಯೆನ್ನು ಮೆಚ್ಚುತ್ತಾರೆ
ಅಲ್ಲಿ ಗೋಪುರವ ಕಟ್ಟುತ್ತಾರೆ
ತೇಲುತ ಕಾಯುವ ಪ್ರೇಮಿಗೆ
ಜಾರೊ ಭಯವೇ ಇಲ್ಲ

ಲೋಕ ಪ್ರೀತಿಯೆನ್ನು ಬೆಂಕಿ ಅಂದರು
ಬೆಂಕಿ ಮೇಲೆ ನಿಂತು ಹಾಡುತ್ತಾರೆ
ಬೇಯುತ ಬಾಳುವ ವಿರಹಿಗೆ
ಸಾಯೋ ಭಯವೇ ಇಲ್ಲ

ನಂಬಿದರೆ ಅಂಧರಂತೆ ನಂಬುವರು
ಸೇರಿದರೆ ಜೀವದಂತೆ ಸೇರುವರು

ನಗುವಂತೆ ಕಾಣುತಾರೆ
ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ
ಹಾಡಾಗಿ ಬಾಳುತಾರೆ

ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ ಎಂದು ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ ಎಂದು ಹೀಗೆ