ಚೆಲುವೆ ನೀನು ನಕ್ಕರೆ - The Indic Lyrics Database

ಚೆಲುವೆ ನೀನು ನಕ್ಕರೆ

गीतकार - Hamsalekha | गायक - S. P. Balasubrahmanyam, Manjula Gururaj | संगीत - Hamsalekha | फ़िल्म - Neenu Nakkare Haalu Sakkare | वर्ष - 1991

Song link

View in Roman

ಚೆಲುವೆ ನೀನು ನಕ್ಕರೆ
ಓಓಓಓಓಓಓಓಓಊ
ಬದುಕು ಹಾಲು ಸಕ್ಕರೆ
ಆ ಆ ಆ ಆ ಆ ಆ
ಚೆಲುವ ನಿನ್ನ ಅಕ್ಕರೆ
ಓಓಓಓಓಓಓಓಓಊ
ನನ್ನ ಬಾಳ ಸಕ್ಕರೆ
ಲಾಲಾ ಲಾಲಾ ಲಾ ಲಾಲಾ

ನಿನ್ನ ಬಿಟ್ಟಿರಲಾರೆನು
ನಿನ್ನ ಬಿಟ್ಟಿರಲಾರೆನು

ಐ ಲವ್ ಯೂ ಪ್ರತಿ ಕ್ಷಣವೂ
ಪ್ರತಿ ದಿನವು ಪ್ರತಿ ಜನುಮದಲು
ಚೆಲುವೆ ನೀನು ನಕ್ಕರೆ
ಬದುಕು ಹಾಲು ಸಕ್ಕರೆ

ಮನಸಿನ ಒಳಗೆ ಮನೆಯನು ಮಾಡಿ
ಇಡುವೆನು ಊ ನಲ್ಲೆ
ಊ ಗುಡಿಸಲೇ ಇರಲಿ ಅರಮನೆ ಇರಲಿ
ಅನುದಿನವು ನಗುತಿರುವೆ
ಸಿರಿತನವಿರಲಿ ಬಡತನವಿರಲಿ
ನೇರಳಾಗಿ ನಾನಿರುವೆ
ಆ ಆ ಒಲವಿನ ಗೀತೆ ಹಾಡುತಲಿರುವೆ
ಸಡಗರದಿ ನಾ ಬೆರೆವೆ
ಹೀಗೇ ನಲಿಯುವೆ ಆ ಆ ಆ ಆ ಆ
ನಿನ್ನ ನಲಿಸುವೆ ಊ ಊ ಊ ಊ
ನನ್ನಿನಿಯ ನನ್ನಿನಿಯ

ಚೆಲುವೆ ನೀನು ನಕ್ಕರೆ
ಬದುಕು ಹಾಲು ಸಕ್ಕರೆ

ಬದುಕಿನ ಸ್ವರಕೆ ಶ್ರುತಿಯನು
ಬೆರೆಸಿ ಹೊಸ ರಾಗ ನಾ ತರುವೆ
ನನ್ನೆದೆ ತಾಳ ಹಾಕುತಿರಲು
ನನಗ ಮೈ ಮರೆವೆ

ಬೆರೆತರೆ ಮನಸು ಬದುಕಿನ ಕನಸು
ನನಸಾಗಿ ಸೊಗಸಾಗಿ
ಬಲು ಹಿತವಾಗಿ ಸವಿ ಜೇನಾಗಿ
ಬಾಳೊಂದು ಹೂವಾಗಿ
ಎಂಥಾ ಪಾವನ ಅ ಆ ಆ ಆ
ನಮ್ಮ ಜೀವನ ಆ ಆ ಆ ಆ ಆ
ನನ್ನಿನಿಯ ನನ್ನಿನಿಯ

ಚೆಲುವೆ ನೀನು ನಕ್ಕರೆ
ಬದುಕು ಹಾಲು ಸಕ್ಕರೆ
ಚೆಲುವ ನಿನ್ನ ಅಕ್ಕರೆ
ನನ್ನ ಬಾಳ ಸಕ್ಕರೆ

ನಿನ್ನ ಬಿಟ್ಟಿರಲಾರೆನು
ನಿನ್ನ ಬಿಟ್ಟಿರಲಾರೆನು
ಐ ಲವ್ ಯೂ ಪ್ರತಿ ಕ್ಷಣವೂ
ಪ್ರತಿ ದಿನವು ಪ್ರತಿ ಜನುಮದಲು