ಗುಂಡಿಗೆ ಕಾಲ್ ಗುಂಡಿಗೆ - The Indic Lyrics Database

ಗುಂಡಿಗೆ ಕಾಲ್ ಗುಂಡಿಗೆ

गीतकार - Hamsalekha | गायक - S. P. Balasubrahmanyam, Manjula Gururaj | संगीत - Hamsalekha | फ़िल्म - Rani Maharani | वर्ष - 1990

Song link

View in Roman

ಗುಂಡಿಗೆ ಕಾಲ್ ಗುಂಡಿಗೆ ಗಂಡು ನಾ
ನಿಂತರಹಾ ನಂತರ ಅಲ್ಲಾ
ಗುಂಡಿಗೆ ಕಾಲ್ ಗುಂಡಿಗೆ ಹೆಣ್ಣು ನಾ
ಒಂಥರಾ ನಾ ನಿಂತಾರ ಅಲ್ಲಾ

ನೀನು ಮೈಸೂರು ರಾಣಿಗೆ ಮಗಳ
ಯಾಕೆ ಮಾಡ್ತಿಯೇ ಕೋಳಿಗೆ ಜಗಳಾ
ನೀನು ಮೈಸೂರು ರಾಜಂಗೆ ಮಗನಾ
ಯಾಕೆ ಮಾಡ್ತಿಯೋ ಪಂಚಾಯ್ತಿ ಮದನ
ಜಂಬದಂಭರಿ ಮೇಲೇಕೆ ಜಂಬೂ ಸವಾರಿ

ಗುಂಡಿಗೆ ಕಾಲ್ ಗುಂಡಿಗೆ ಗಂಡು ನಾ
ನಿಂತರಹಾ ನಂತರ ಅಲ್ಲಾ
ಗುಂಡಿಗೆ ಕಾಲ್ ಗುಂಡಿಗೆ ಹೆಣ್ಣು ನಾ
ಒಂಥರಾ ನಾ ನಿಂತಾರ ಅಲ್ಲಾ

ಕೋಲಿ ಜಗಲ ಮಾಡುತ ಕೆಳಿಕೆಗಳ ಆಡುತಾ
ಮನಸು ಅದಲು ಬದಲು ಮಾಡಿರಿ
ನೋಡು ಅಂದ್ರೆ ಉರಿಸುವ ಮಾಡು ಅಂದ್ರೆ ಮುರಿಯುವ
ಇವಳ ಸಂಗ ಬೇಡ ಹರಿ ಹರಿ

ಹಾದಿ ಹಾದಿ ರಾಗವೋನೋಡಿ ನೋಡಿ ಪ್ರೇಮವೋ
ಹಾರ ಬಡಲಿ ಮಾಡಿಕೊಳ್ಳಿರಿ ಅಯ್ಯೋ
ಎತ್ತಿ ಏರಿಗೇರಿಸುವ ಕೋಣ ನೀರಿಗಿಳಿಸುವ
ಇವನ ಜೋಡಿ ದಿನವು ಕಿರಿಕಿರಿ

ಅಯ್ಯೋ ತಿಳಿದು ನಾ ಬಿಳಲಾರೆ ಹಾಲು ಬಾವಿಲಿ
ಹಾವಿನ್ ಜೊತೆ ಮುಂಗ್ಸಿ ಮದ್ವೆ ಇಲ್ಲಾ ಭೂಮಿಲಿ
ಅಯ್ಯೋ ತಿಳಿದು ಕೈ ಹಾಕಲಾರೆ ಇರುವೆ ಗೂಡಲಿ
ಕಾಗೆ ಜೊತೆ ನಾರಿ ಮದ್ವೆ ಇಲ್ಲಾ ರೂಡಿಲಿ

ನೀನು ಮೈಸೂರು ರಾಜಂಗೆ ಮಗನಾ
ಯಾಕೆ ಮಾಡ್ತಿಯೋ ಪಂಚಾಯ್ತಿ ಮದನ
ಜಂಬದಂಭರಿ ಮೇಲೇಕೆ ಜಂಬೂ ಸವಾರಿ

ಗುಂಡಿಗೆ ಕಾಲ್ ಗುಂಡಿಗೆ ಗಂಡು ನಾ
ನಿಂತರಹಾ ನಂತರ ಅಲ್ಲಾ
ಗುಂಡಿಗೆ ಕಾಲ್ ಗುಂಡಿಗೆ ಹೆಣ್ಣು ನಾ
ಒಂಥರಾ ನಾ ನಿಂತಾರ ಅಲ್ಲಾ

ನಿಮ್ಮ ಲಗ್ನ ಕೂಡದು ನಿಮಗೆ ಮದುವೆ ಆಗದು
ನನ್ನ ಕೋಳಿ ಎದ್ದು ಕೂಗಾಡು
ಕೊಂಡು ಸತ್ತ ಕೋಳಿಗೆ ಇಬ್ರು ಕೊಟ್ಟ ಅರ್ಜಿಗೆ
ಒಬ್ಬ ದಂಡ ನೀಡಲಾಗದು

ಕೇಳೆ ತಾಯಿ ಸುಮ್ಮನೆ ನನ್ನದೊಂದು ಪ್ರಾರ್ಥನೆ
ನನ್ನ ಮೇಲೆ ಯಾಕೆ ಕಣ್ಣೂರಿ
ಕಣ್ಣು ಒಂದೂ ಬಾಣ ಬಿಟ್ಟರೆ ಮೂರು ಹಣ್ಣು ಬಿದ್ದರೆ
ಒಂದೂ ನಿನಗೆ ಎರಡು ನನ್ ಗುರಿ

ಅರೆ ಗೊತ್ತೆ ನನಗೆಲ್ಲ ನಿನ್ನ ಕಳ್ಳ ವ್ಯಾಪಾರ
ಕಿವಿಯಲ್ಲಿ ಹೂವು ಇಲ್ಲ ನಾನೂ ಸರ್ದಾರ
ಅರೆ ಗೊತ್ತೋ ನನಗೆಲ್ಲ ನೀನು ಖಾಲಿ ಕುಬೇರ
ತಾಳೆಯಲ್ಲಿ ಮಣ್ಣು ಇಲ್ಲ ಮಾಡು ಕಾರಾರ

ನೀನು ಮೈಸೂರು ರಾಣಿಗೆ ಮಗಳ ಹೌದೂ
ಯಾಕೆ ಮಾಡ್ತಿಯೇ ಕೋಳಿಗೆ ಜಗಳಾ
ಜಂಬದಂಭರಿ ಮೇಲೇಕೆ ಜಂಬೂ ಸವಾರಿ

ಗುಂಡಿಗೆ ಕಾಲ್ ಗುಂಡಿಗೆ ಗಂಡು ನಾ
ನಿಂತರಹಾ ನಂತರ ಅಲ್ಲಾ
ಹೈಯಾನ್ ಗುಂಡಿಗೆ ಕಲ್ ಗುಂಡಿಗೆ ಹೆಣ್ಣು ನ್ಯಾ
ಒಂಥರಾ ನಾ ನಿಂತಾರ ಅಲ್ಲಾ

ನೀನು ಮೈಸೂರು ರಾಣಿಗೆ ಮಗಳ
ಯಾಕೆ ಮಾಡ್ತಿಯೇ ಕೋಳಿಗೆ ಜಗಳಾ
ನೀನು ಮೈಸೂರು ರಾಜಂಗೆ ಮಗನಾ
ಯಾಕೆ ಮಾಡ್ತಿಯೋ ಪಂಚಾಯ್ತಿ ಮದನ
ಜಂಬದಂಭರಿ ಮೇಲೇಕೆ ಜಂಬೂ ಸವಾರಿ

ಗುಂಡಿಗೆ ಕಾಲ್ ಗುಂಡಿಗೆ ಗಂಡು ನಾ
ನಿಂತರಹಾ ನಂತರ ಅಲ್ಲಾ ತಕದಿನ್ನಾ
ಗುಂಡಿಗೆ ಕಾಲ್ ಗುಂಡಿಗೆ ಹೆಣ್ಣು ನಾ
ಒಂಥರಾ ನಾ ನಿಂತಾರ ಅಲ್ಲಾ